Thursday, January 30, 2025
Menu

ಸಾಲ ಕೊಡದೇ 4.20 ಲಕ್ಷ ಕಂತು ಕಟ್ಟಿಸಿಕೊಂಡ ಫೈನಾನ್ಸ್ ಕಂಪನಿ: ದಂಪತಿ ಪ್ರತಿಭಟನೆ

ಸಾಲವನ್ನೇ ಕೊಡದೇ 4.20 ಲಕ್ಷ ರೂ. ಕಂತು ವಸೂಲು ಮಾಡಿದ ಫೈನಾನ್ಸ್ ಕಂಪನಿ ವಿರುದ್ಧ ದಂಪತಿ ಪ್ರತಿಭಟನೆ ನಡೆಸಿದ ಘಟನೆ ಹಾವೇರಿಯಲ್ಲಿ ನಡೆದಿದೆ.

ಹೌಸಿಂಗ್ ಲೋನ್ ಕೊದೇ 10 ತಿಂಗಳಿಂದ ಇಎಂಐ ಕಟ್ಟಿಸಿಕೊಂಡ ಹಿಂದೂಜಾ ಫೈನಾನ್ಸ್ ಸಿಬ್ಬಂದಿ ವಿರುದ್ಧ ದಂಪತಿ ಮಂಗಳವಾರ ಪ್ರತಿಭಟನೆ ನಡೆಸಿದ್ದಾರೆ.

ಫೈನಾನ್ಸ್ ಕಂಪನಿಯ ಬಾಗಿಲು ಮುಚ್ಚಲು ಬಿಡದೆ ಒಳಗೆ ಪ್ರತಿಭಟನೆ ನಡೆಸಿದ ನಿರ್ಮಲಾ ಶರಣಯ್ಯ ಮತ್ತು ಮಹಂತಿಮಠ ದಂಪತಿ ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ಫೈನಾನ್ಸ್ ವಿರುದ್ಧ ದೂರು ನೀಡಲಾಗಿದೆ.

ಲೋನ್ ಕೊಡುವುದಾಗಿ ನಂಬಿಸಿ ಲೋನ್ ಕೊಡದೆ, 10 ತಿಂಗಳು ಇಎಂಐ ಕಟ್ಟಿಸಿಕೊಂಡಿದ್ದಾರೆ. ಇದುವರೆಗೆ 4.20 ಲಕ್ಷ ಹಣ ಇಎಂಐ ಕಟ್ಟಿದ್ದೇವೆ. ಆದರೂ, ಲೋನ್ ಕೊಟ್ಟಿಲ್ಲಾ ಎಂದು ಆಕ್ರೋಶ ಹೊರಹಾಕಿದ್ದಾರೆ.

ಹಾವೇರಿ ಶಿವಾಜಿನಗರದ ಶ್ರೀಪಾದ ರೇವಣಕರ್‌ಗೆ ಸೇರಿದ ಮನೆಯನ್ನು 40 ಲಕ್ಷಕ್ಕೆ ಖರೀದಿಗೆ ಒಪ್ಪಂದ ಮಾಡಿಕೊಂಡಿದ್ದರು. ಒಪ್ಪಂದ ಪತ್ರ ನೀಡಿ ಸಾಲಕ್ಕೆ ಅರ್ಜಿ ಹಾಕಿದ್ದರು. ದಾಖಲೆ ಪರಿಶೀಲನೆ ಮಾಡಿ 37.43 ಲಕ್ಷ ಸಾಲ ಹೌಸ್ ಲೋನ್ ಮಂಜೂರು ಮಾಡಿ ಚೆಕ್ ಸಹ ಫೈನಾನ್ಸ್ ನೀಡಿತ್ತು.

ಸಮಯಕ್ಕೆ ಸರಿಯಾಗಿ ಬ್ಯಾಂಕ್‌ಗೆ ಹೋಗಿ ಹಣ ಪಡೆಯದೇ ಇದ್ದಿದ್ದರಿಂದ, ಅವಧಿ ಮುಗಿದ ನಂತರ ಬ್ಯಾಂಕ್ ಗೆ ಹಣ ಪಡೆಯಲು ಹೋದಾಗ ರೀಪ್ರೇಸ್ ಮಾಡಿಕೊಂಡು ಬರಲು ಕೆನರಾ ಬ್ಯಾಂಕ್ ಸಿಬ್ಬಂದಿ ಹೇಳಿದ್ದಾರೆ. ಆದರೆ, ಫೈನಾನ್ಸ್ ಸಿಬ್ಬಂದಿ ಹೊಸ ಚೆಕ್ ಕೊಡಲು ಲೇಟ್ ಮಾಡಿದ್ದಕ್ಕೆ ಫೈನಾನ್ಸ್ ಮುಂದೆ ಪ್ರತಿಭಟನೆ ಮಾಡಿದ್ದಾರೆ, ಹಾವೇರಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಹಾವೇರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

Related Posts

Leave a Reply

Your email address will not be published. Required fields are marked *