Menu

ಹಾಸನದ ಮನೆಯಲ್ಲಿ ಸ್ಫೋಟದಿಂದ ಗಾಯಗೊಂಡಿದ್ದ ದಂಪತಿ ಸಾವು

ಹಾಸನದ ಹಳೇಆಲೂರು ಪಟ್ಟಣದ ಮನೆಯೊಂದರಲ್ಲಿ ನಡೆದ ನಿಗೂಢ ಸ್ಫೋಟದಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ದಂಪತಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಸುದರ್ಶನ್ (32), ಕಾವ್ಯ (27) ಮೃತಪಟ್ಟ ದಂಪತಿ.

ಘಟನೆಯಲ್ಲಿ ಗಾಯಗೊಂಡಿದ್ದ ದಂಪತಿಯನ್ನು ಸೋಮವಾರ ರಾತ್ರಿ ಹಿಮ್ಸ್‌ನಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು, ಬಳಿಕ ರಾತ್ರಿಯೇ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ಝೀರೋ ಟ್ರಾಫಿಕ್‌ನಲ್ಲಿ ಕಳುಹಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಸು ನIಗಿದ್ದಾರೆ. ದಂಪತಿಯ 14 ತಿಂಗಳ ಮಗುವಿಗೆ ಈಗ ಯಾರೂ ದಿಕಕು ಇಲ್ಲದಂತಾಗಿದೆ.

ಸೋಮವಾರ ರಾತ್ರಿ ಮನೆಯಲ್ಲಿ ನಿಗೂಢ ಸ್ಫೋಟ ಸಂಭವಿಸಿತ್ತು. ಮನೆಯಲ್ಲಿದ್ದ ಎರಡು ಸಿಲಿಂಡರ್‌ ಹಾಗೂ ಗೀಸರ್‌ ಸುರಕ್ಷಿತವಾಗಿಯೇ ಇತ್ತು. ಸ್ಫೋಟಕ್ಕೆ ಕಾರಣವೇನು ಎಂದು ಹುಡುಕಾಡಿದಾಗ ಮನೆಯಲ್ಲಿ ಸಿಡಿಮದ್ದು ತಯಾರಿಕೆಯಲ್ಲಿ ಬಳಸುವ ಮದ್ದು ಸ್ಫೋಟಗೊಂಡು ಈ ದುರಂತ ನಡೆದಿರುವುದು ಪತ್ತೆಯಾಗಿದೆ.

ಮನೆಯಲ್ಲಿ ಸಿಡಿಮದ್ದನ್ನು ತಯಾರಿಸುತ್ತಿದ್ದ ಅವರು ಅದಕ್ಕಾಗಿ ಮದ್ದನ್ನು ಸಂಗ್ರಹಿಸಿದ್ದರು. ಆಕಸ್ಮಿಕವಾಗಿ ಬೆಂಕಿ ತಗುಲಿ ಸ್ಫೋಟಗೊಂಡಿದೆ ಎಂದು ತಿಳಿದು ಬಂದಿದೆ.

Related Posts

Leave a Reply

Your email address will not be published. Required fields are marked *