Thursday, September 18, 2025
Menu

ಮನೆ ಬಾಗಿಲಿಗೆ ಸಿದ್ದರಾಮಯ್ಯ ಫೋಟೋ ಕೆತ್ತಿಸಿದ ದಂಪತಿ

siddaramiah

ಕೂಡ್ಲಿಗಿ: ತಾಲ್ಲೂಕಿನ ಕೆಂಚಮಲ್ಲನಹಳ್ಳಿ ಗ್ರಾಮದ ಮಲ್ಲೇಶಪ್ಪ ತಿಪ್ಪೇಸ್ವಾಮಿ ಹಾಗೂ ಪಾರ್ವತಿ ದಂಪತಿ ಮನೆಯ ಬಾಗಿಲಿನ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಚಿತ್ರವನ್ನು ಕೆತ್ತನೆ ಮಾಡಿದ್ದಾರೆ.

ಗೃಹಲಕ್ಷ್ಮಿ ಯೋಜನೆಯಲ್ಲಿ ಪಾರ್ವತಮ್ಮ ಅವರಿಗೆ ₹ 30 ಸಾವಿರ ಸಂದಾಯವಾಗಿತ್ತು. ಅದನ್ನು ಯಾವುದಕ್ಕೂ ಬಳಸಿರಲಿಲ್ಲ. ಈಗ ಅದನ್ನು ಬಳಸಿ ಬಾಗಿಲಿಗೆ ಸಿದ್ದರಾಮಯ್ಯ ಚಿತ್ರ ಕೆತ್ತಿಸಲಾಗಿದೆ.

ಬಾಗಿಲಿಗೆ 28 ಸಾವಿರ ಖರ್ಚಾಯಿತು. ಇದೆಲ್ಲವೂ ಸಿದ್ದರಾಮಯ್ಯ ಅವರ ಮೇಲಿನ ಅಭಿಮಾನದಿಂದ ಮಾಡಿದ್ದು’ ಎಂದು ಮಲ್ಲೇಶಪ್ಪ ತಿಪ್ಪೇಸ್ವಾಮಿ ತಿಳಿಸಿದರು.

ಹಳೇ ಬಾಗಿಲನ್ನು ತೆಗೆದು ಹಾಕಿ, ಸಿದ್ದರಾಮಯ್ಯ ಅವರ ಭಾವಚಿತ್ರವಿರುವ ಹೊಸ ಬಾಗಿಲು ಮನೆಗೆ ಅಳವಡಿಸಿ-ದ್ದೇವೆ. ಊರಲ್ಲಿ ಹಬ್ಬವಿರುವ ಕಾರಣಕ್ಕೆ ಪೂಜೆ ಸಲ್ಲಿಸಿದೆವು’ ಎಂದರು.

Related Posts

Leave a Reply

Your email address will not be published. Required fields are marked *