ಲಾಹೋರ್: ಪಾಕಿಸ್ತಾನ ಕೊನೆಯ ಬಾರಿಗೆ ಪ್ರಮುಖ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಿ ಒಂದು ಪೀಳಿಗೆ ಕಳೆದಿದೆ. ೧೯೯೬ ರಲ್ಲಿ ಭಾರತ ಮತ್ತು ಶ್ರೀಲಂಕಾ ಜೊತೆಗೆ ಒಡಿಐ ವಿಶ್ವಕಪ್ ಅನ್ನು ಆಯೋಜಿಸಿತ್ತು.
ದೀರ್ಘ ಕಾಯುವಿಕೆಯ ನಂತರ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯ ಚಾಂಪಿಯನ್ಸ್ ಟ್ರೋಫಿ ಪಾಕಿಸ್ತಾನಕ್ಕೆ ಮರಳಿದೆ
೨೦೦೯ ರಲ್ಲಿ ಲಾಹೋರ್ನಲ್ಲಿ ಶ್ರೀಲಂಕಾ ತಂಡದ ಬಸ್ ಮೇಲೆ ನಡೆದ ಭಯೋತ್ಪಾದಕ ದಾಳಿಯ ನಂತರ, ಭದ್ರತಾ ಕಾಳಜಿಯಿಂದಾಗಿ ವಿದೇಶಿ ತಂಡಗಳು ಪ್ರವಾಸ ಸುಮಾರು ವರ್ಷಗಳ ಕಾಲ ಅಲ್ಲಿಗೆ ಪ್ರವಾಸ ಮಾಡಿರಲಿಲ್ಲ.
2021 ರಲ್ಲಿ ಪಾಕಿಸ್ತಾನಕ್ಕೆ ಚಾಂಪಿಯನ್ಸ್ ಟ್ರೋಫಿಯ ಆತಿಥ್ಯ ಹಕ್ಕುಗಳನ್ನು ನೀಡಿದಾಗ, ದೇಶವು ರಾಜಕೀಯ ಅಸ್ಥಿರತೆಯನ್ನು ಅನುಭವಿಸುತ್ತಿತ್ತು. ಪಿಸಿಬಿ ನಾಯಕತ್ವ ಬದಲಾವಣೆಗಳಿಗೆ ಒಳಗಾಯಿತು, ಆದರೆ ಎಂಟು ತಂಡಗಳ ಪಂದ್ಯಾವಳಿಗೆ ಸಿದ್ಧತೆಯಲ್ಲಿ ಸಾಕಷ್ಟು ಏರುಪೇರು ಉಂಟಾಯಿತು. ಕೊನೆಗೂ ಎಲಲ್ ಸರಿ ಹಾಒಗ ಚಾಂಪಿಯನ್ಸ್ ಟ್ರೋಫಿಗೆ ಕ್ಷಣಗಣನೆ ಆರಂಭವಾಗಿದೆ.
ಪಂದ್ಯಾವಳಿ ಫೆಬ್ರವರಿ 19 ರಂದು ಕರಾಚಿಯಲ್ಲಿ ಆತಿಥೇಯ ಪಾಕಿಸ್ತಾನ ನ್ಯೂಜಿಲೆಂಡ್ ಅನ್ನು ಎದುರಿಸುವುದರೊಂದಿಗೆ ಪ್ರಾರಂಭವಾಗುತ್ತದೆ. ಫೈನಲ್ ಮಾರ್ಚ್ 9 ರಂದು ನಡೆಯಲಿದೆ ಆದರೆ ಸ್ಥಳ ಸ್ಪಷ್ಟವಾಗಿಲ್ಲ. ಭಾರತ ಅರ್ಹತೆ ಪಡದರೆ ಫೈನಲ್ ದುಬೈನಲ್ಲಿ ನಡೆಯಲಿದೆ. ಇಲ್ಲದಿದ್ದರೆ, ಅದು ಲಾಹೋರ್ನ ಗಡಾಫಿ ಕ್ರೀಡಾಂಗಣದಲ್ಲಿ ನಡೆಯಲಿದೆ.
ಗುಂಪಿನಲ್ಲಿ 8 ತಂಡಗಳಿದ್ದು ಅವುಗಳನ್ನು ಎರಡು ಗುಂಪುಗಳಲ್ಲಿ ವಿಂಗಡಿಸಲಾಗಿದೆ. ಎ ಗುಂಪಿನಲ್ಲಿ ಪಾಕಿಸ್ತಾನ, ಭಾರತ, ಬಾಂಗ್ಲಾದೇಶ ಮತ್ತು ನ್ಯೂಜಿಲೆಂಡ್ ಇದ್ದರೇ ಬಿ ಗುಂಪಿನಲ್ಲಿ ಆಸ್ಟ್ರೇಲಿಯಾ, ಅಫ್ಘಾನಿಸ್ತಾನ, ಇಂಗ್ಲೆಂಡ್ ಮತ್ತು ದಕ್ಷಿಣ ಆಫ್ರಿಕಾ ಸೇರಿವೆ. ಕಳೆದ ಓಡಿಐ ವಿಶ್ವಕಪ್ನಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಅಫ್ಘಾನಿಸ್ತಾನ ಚಾಂಪಿಯನ್ಸ್ ಟ್ರೋಫಿಗೆ ಪಾದಾರ್ಪಣೆ ಮಾಡುತ್ತಿದೆ
ಬದಲಾಗದ ಸ್ವರೂಪ, ಹೆಚ್ಚಿದ ಮೊತ್ತ
2006 ರಿಂದ ಪಂದ್ಯಾವಳಿಯ ಸ್ವರೂಪ ಬದಲಾಗದೆ ಉಳಿದಿದೆ. ಎಂಟು ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ,
ಪ್ರತಿ ತಂಡವು ತಮ್ಮ ಗುಂಪಿನಲ್ಲಿರುವ ಇತರ ತಂಡಗಳ ವಿರುದ್ಧ ಒಮ್ಮೆ ಆಡುತ್ತದೆ. ಪ್ರತಿ ಗುಂಪಿನಿಂದ ಅಗ್ರ ಎರಡು ತಂಡಗಳು ಸೆಮಿಫೈನಲ್ಗೆ ಮುನ್ನಡೆಯುತ್ತವೆ.
ಕಳೆದ ಆವೃತ್ತಿಗೆ ಹೋಲಿಸಿದರೆ ಈ ಆವೃತ್ತಿಯ ಬಹುಮಾನದ ಮೊತ್ತವು ಗಮನಾರ್ಹವಾಗಿ ಹೆಚ್ಚಾಗಿದೆ. ವಿಜೇತರು 2.24 ಮಿಲಿಯನ್ ಡಾಲರ್, ರನ್ನರ್ ಅಪ್ 1..12 ಮಿಲಿಯನ್ ಡಾಲರ್ ಮತ್ತು ಸೋತ ಸೆಮಿಫೈನಲಿಸ್ಟ್ಗಳು ತಲಾ 560,000 ಡಾಲರ್ ಪಡೆಯುತ್ತಾರೆ. ಒಟ್ಟು ಬಹುಮಾನ ಮೊತ್ತವು 6.9 ಮಿಲಿಯನ್ ಡಾಲರ್ ಆಗಿದ್ದು, 2017 ಕ್ಕೆ ಹೋಲಿಸಿದರೆ ಶೇ.53 ರಷ್ಟು ಹೆಚ್ಚಾಗಿದೆ.
ಭಾರತವು ಫೆಬ್ರವರಿ 20 ರಂದು ದುಬೈನಲ್ಲಿ ಬಾಂಗ್ಲಾದೇಶ ವಿರುದ್ಧ ತನ್ನ ಅಭಿಯಾನವನ್ನು ಪ್ರಾರಂಭಿಸುತ್ತದೆ, ನಂತರ ಪಾಕಿಸ್ತಾನ ವಿರುದ್ಧದ ಬ್ಲಾಕ್ಬಸ್ಟರ್ (ಫೆಬ್ರವರಿ 23). ಅದೇ ವಾರಾಂತ್ಯದಲ್ಲಿ ವಿಶ್ವಕಪ್ ಚಾಂಪಿಯನ್ ಆಸ್ಟ್ರೇಲಿಯಾ ಇಂಗ್ಲೆಂಡ್ ವಿರುದ್ಧ ಆಡಲಿದೆ. ಸೆಮಿಫೈನಲ್ ಪಂದ್ಯಗಳು ಮಾರ್ಚ್ 4 ಮತ್ತು5 ರಂದು ದುಬೈ ಮತ್ತು ಲಾಹೋರ್ನಲ್ಲಿ ನಡೆಯಲಿವೆ.