Menu

ಐಪಿಎಲ್ ಟಿಕೆಟ್ ಹಂಚಿಕೆಯಲ್ಲಿ ಭ್ರಷ್ಟಾಚಾರ: ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಬಂಧನ

srh

ಹೈದರಾಬಾದ್: ಐಪಿಎಲ್ ಪಂದ್ಯಗಳ ಟಿಕೆಟ್ ಭ್ರಷ್ಟಾಚಾರ ಪ್ರಕರಣದಲ್ಲಿ ಹೈದರಾಬಾದ್ ಕ್ರಿಕೆಟ್ ಸಂಸ್ಥೆ ಅಧ್ಯಕ್ಷ ಜಗನ್ ಮೋಹನ್ ರಾವ್ ಅವರನ್ನು ಸಿಐಡಿ ಬಂಧಿಸಿದೆ.

ಇತ್ತೀಚೆಗೆ ಮುಕ್ತಾಯಗೊಂಡ ಐಪಿಎಲ್ ಟಿ-20 ಟೂರ್ನಿಯ 2025ರ ಆವೃತ್ತಿಯ ಹೈದರಾಬಾದ್ ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯಗಳ ಟಿಕೆಟ್ ಮಾರಾಟದಲ್ಲಿ ಭ್ರಷ್ಟಾಚಾರ ಆರೋಪದ ಮೇಲೆ ಜಗನ್ ಮೋಹನ್ ರಾವ್ ಅವರನ್ನು ಬುಧವಾರ ಸಿಐಡಿ ಬಂಧಿಸಿದೆ.

ಐಪಿಎಲ್ ಪಂದ್ಯಗಳನ್ನು ಪಾರದಾರ್ಶಕವಾಗಿ ಮಾರಾಟ ಮಾಡದೇ ವೈಯಕ್ತಿಕವಾಗಿ ಹಂಚಿಕೆ ಹಾಗೂ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಹೆಚ್ಚುವರಿ ಹಾಗೂ ಕಾಳಸಂತೆಯಲ್ಲಿ ಟಿಕೆಟ್ ಮಾರಾಟಕ್ಕೆ ಅವಕಾಶ ನೀಡಿದ್ದು ಸೇರಿದಂತೆ ಹಲವು ಅಕ್ರಮಗಳಿಗೆ ಕಾರಣವಾಗಿದ್ದಾರೆ ಎಂದು ಆರೋಪಿಸಲಾಗಿದೆ.

ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ ಸಾಕಷ್ಟು ಟಿಕೆಟ್ ನೀಡಿಲ್ಲ. ಅಲ್ಲದೇ ಕಾರ್ಪೊರೇಟ್ ಬಾಕ್ಸ್ ನೀಡದೇ ಟಿಕೆಟ್ ಗಾಗಿ ಹೆಚ್ಚುವರಿ ಮೊತ್ತದ ಬೇಡಿಕೆ ಇಟ್ಟಿದ್ದರು ಎಂದು ರಾವ್ ವಿರುದ್ಧ ಆರೋಪಿಸಿದೆ.

ಐಪಿಎಲ್ ನಿಯಮದ ಪ್ರಕಾರ ಶೇ.10ರಷ್ಟು ಟಿಕೆಟ್ ಗಳನ್ನು ಉಚಿತವಾಗಿ ಐಪಿಎಲ್ ತಂಡ, ಬಿಸಿಸಿಐ ಹಾಗೂ ಹೈದರಾಬಾದ್ ಕ್ರಿಕೆಟ್ ಸಂಸ್ಥೆಗಳಿಗೆ ನೀಡಬೇಕಿದ್ದು, ಉಳಿದ ಟಿಕೆಟ್ ಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡಬೇಕಾಗಿದೆ.

Related Posts

Leave a Reply

Your email address will not be published. Required fields are marked *