ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಪತ್ನಿಗೆ ಬುಶಾರಾ ಬಿಡಿಗೆ ಉಡುಗೊರೆ ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನ ವಿಶೇಷ ನ್ಯಾಯಾಲಯ 17 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಪಾಕಿಸ್ತಾನ ತೆಹರಿಕ್ ಇ ಇನ್ಸಾಫ್ ಪಕ್ಷದ ನಾಯಕ ಇಮ್ರಾನ್ ಮತ್ತು ಪತ್ನಿ ಬುಶಾರಾ ಬಿಡಿ ಅವರನ್ನು ತೋಶಾಖಾನಾ 2 ಪ್ರಕರಣದಲ್ಲಿ ತಪ್ಪಿತಸ್ಥರೆಂದು ಘೋಷಿಸಲಾಗಿದ್ದು, 17 ವರ್ಷಗಳ ಜೈಲು ಶಿಕ್ಷೆ ವಿಧಿಸಲಾಗಿದೆ. ಅಲ್ಲದೇ ಇಬ್ಬರಿಗೂ ತಲಾ 1.64 ಕೋಟಿ ರೂ. ದಂಡ ವಿಧಿಸಲಾಗಿದೆ.
201ರಲ್ಲಿ ಸೌದಿ ದೊರೆ ಮೊದಲ ಬಾರಿ ಪಾಕಿಸ್ತಾನಕ್ಕೆ ಮೊದಲ ಬಾರಿ ಭೇಟಿ ನೀಡಿದಾಗ ನೀಡಿದ್ದ ದುಬಾರಿ ಉಡುಗೊರೆಗಳನ್ನು ದುಬಾರಿ ಮೊತ್ತಕ್ಕೆ ಮಾರಾಟ ಮಾಡಿದ್ದರು. ಉಡುಗೊರೆಗಳು ದೇಶದ ಆಸ್ತಿಯಾಗಿದ್ದು, ಮಾರಾಟ ಮಾಡಲು ಪ್ರಧಾನಿಗೆ ಹಕ್ಕು ಇಲ್ಲ ಎಂದು ವಾದಿಸಲಾಗಿತ್ತು.
ಪಾಕಿಸ್ತಾನದ ಪಿನಾಲ್ ಕೋಡ್ ಮತ್ತು ನಂಬಿಕೆ ದ್ರೋಹ ಸೆಕ್ಷನ್ ೪೦೭ರ ಅಡಿಯಲ್ಲಿ ಇಮ್ರಾನ್ ಖಾನ್ ಮತ್ತು ಪತ್ನಿಗೆ ತಲಾ 10 ವರ್ಷಗಳ ಶಿಕ್ಷೆ ವಿಧಿಸಲಾಗಿದೆ. ವಿವಿಧ ಸೆಕ್ಷನ್ ಅಡಿಯಲ್ಲಿ ತಲಾ 7 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ. ಇಬ್ಬರಿಗೂ ವಯಸ್ಸಾಗಿದೆ ಎಂದು ಪತ್ನಿ ಮಹಿಳೆ ಎಂಬ ಕಾರಣಕ್ಕೆ ಶಿಕ್ಷೆಯ ಪ್ರಮಾಣದಲ್ಲಿ ರಿಯಾಯಿತಿ ನೀಡಲಾಗಿದೆ ಎಂದು ತೀರ್ಪಿನಲ್ಲಿ ಕೋರ್ಟ್ ತಿಳಿಸಿದೆ.


