ವಿಜಯವಾಡ: ಕರ್ನಾಟಕದ ಜನಪ್ರಿಯ ಶಕ್ತಿ ಯೋಜನೆಯನ್ನು ಕಾಪಿ ಮಾಇಡುರವ ಆಂಧ್ರ ಸರಕಾರವು ಇದೇ 15ರಿಂದ ಆಂಧ್ರಪ್ರದೇಶ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಯೋಜನೆಯನ್ನು ಜಾರಿಗೆ ತರಲಿದೆ.
ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ, ಕಳೆದ ವರ್ಷದ ಚುನಾವಣೆಯಲ್ಲಿ ನೀಡಿದ್ದ “ಸೂಪರ್ ಸಿಕ್ಸ್” ಭರವಸೆಗಳ ಭಾಗವಾದ “ಸ್ತ್ರೀ ಶಕ್ತಿ” ಯೋಜನೆಗೆ ಅನುಮೋದನೆ ನೀಡಲಾಗಿದೆ.
ಈ ಉಚಿತ ಬಸ್ ಪ್ರಯಾಣ ಯೋಜನೆಯು ಸ್ವಾತಂತ್ರ್ಯ ದಿನಾಚರಣೆಯಂದು ಜಾರಿಯಾಗಲಿದೆ. ಈ ಯೋಜನೆಯ ಅನುಷ್ಠಾನಕ್ಕೆ ಪ್ರತಿ ತಿಂಗಳು 162 ಕೋಟಿ ರೂ.ಗಳಂತೆ ಅಂದಾಜು ವಾರ್ಷಿಕ ರೂ. 1943 ಕೋಟಿ ವೆಚ್ಚವಾಗಲಿದ್ದು, ಸುಮಾರು 26.59 ಲಕ್ಷ ಜನರಿಗೆ ಇದರಿಂದ ಪ್ರಯೋಜನವಾಗಲಿದೆ.
ಆಂದ್ರದ 5.25ಕೋಟಿ ಜನಸಂಖ್ಯೆಯಲ್ಲಿ 2.62 ಕೋಟಿ ಮಹಿಳೆಯರಿದ್ದಾರೆ. ಈ ಯೋಜನೆಯಡಿ, ಆಂಧ್ರದ ಮಹಿಳೆಯರು, ಯುವತಿಯರು, ಮತ್ತು ತೃತೀಯಲಿಂಗಿಗಳು ಉಚಿತವಾಗಿ ಪ್ರಯಾಣಿಸಲು ಅರ್ಹರಾಗಿರುತ್ತಾರೆ.
ಫಲಾನುಭವಿಗಳು ಪಲ್ಲೆವೆಲುಗು, ಅಲ್ಟ್ರಾ ಪಲ್ಲೆವೆಲುಗು, ಸಿಟಿ ಆರ್ಡಿನರಿ, ಎಕ್ಸ್‌ಪ್ರೆಸ್, ಮೆಟ್ರೋ ಎಕ್ಸ್‌ಪ್ರೆಸ್ ಸೇವೆಗಳಲ್ಲಿ ಪ್ರಯಾಣಿಸಬಹುದು. ಈ ಸೌಲಭ್ಯವನ್ನು ಪಡೆಯಲು, ಆಧಾರ್, ಮತದಾರರ ಚೀಟಿ, ಅಥವಾ ಪಡಿತರ ಚೀಟಿಯನ್ನು ಗುರುತಿನ ಪುರಾವೆಯಾಗಿ ತೋರಿಸಬೇಕು.
ಈ ಯೋಜನೆಯು ನಿಲುಗಡೆಯಿಲ್ಲದ ಅಂತಾರಾಜ್ಯ ಬಸ್ ಸೇವೆಗಳು, ಒಪ್ಪಂದದ ವಾಹನ ಸೇವೆಗಳು, ಬಾಡಿಗೆ ಶೇ.74%ರಷ್ಟು ಬಸ್‌ಗಳಲ್ಲಿ ಪ್ರಯಾಣಿಸಬಹುದು.
ಈ ವರ್ಷ 3000 ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಲು ಕ್ರಮ ಕೈಗೊಳ್ಳಲಾಗಿದೆ ಮತ್ತು ಮುಂದಿನ ಎರಡು ವರ್ಷಗಳಲ್ಲಿ ಮತ್ತೆ 1400 ಎಲೆಕ್ಟ್ರಿಕ್ ಬಸ್‌ಗಳನ್ನು ಖರೀದಿಸಲಾಗುವುದು ಎಂದು ಸರ್ಕಾರ ತಿಳಿಸಿದೆ.
ಮಹಿಳಾ ಕಂಡಕ್ಟರ್‌ಗಳಿಗೆ ಬಾಡಿ ಕ್ಯಾಮೆರಾಗಳನ್ನು ಒದಗಿಸುವ ಮತ್ತು ಬಸ್‌ಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುವ ಮೂಲಕ ಮಹಿಳೆಯರು ಮತ್ತು ಯುವತಿಯರ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡಲಾಗುವುದು ಎಂದು ಸರ್ಕಾರ ಹೇಳಿದೆ.