ಜಿಬಿಎ ವ್ಯಾಪ್ತಿಯ ಬಿ-ಖಾತಾ ನಿವೇಶನ ಮಾಲೀಕರಿಗೆ ದೀಪಾವಳಿ ಸಂದರ್ಭದಲ್ಲಿ ಶುಭ ಸುದ್ದಿ ಸಿಕ್ಕಿದೆ, ಬಿಖಾತಾದಿಂದ ಎ ಖಾತಾಗೆ ಪರಿವರ್ತನೆ ಮತ್ತು ಹೊಸ ನಿವೇಶನಗಳಿಗೂ ಎ ಖಾತೆ ಲಭ್ಯವಾಗುವಂತೆ ಆನ್ ಲೈನ್ ವ್ಯವಸ್ಥೆಜಾರಿಗೊಳ್ಳುತ್ತಿದ್ದು, ಇಂದು ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅಧಿಕೃತ ಚಾಲನೆ ನೀಡುತ್ತಿದ್ದಾರೆ.
ಜಿಬಿಎ ಹೊಸದಾಗಿ ಆನ್ ಲೈನ್ ವ್ಯವಸ್ಥೆ ಜಾರಿಗೆ ತರುತ್ತಿದೆ, ವಿಧಾನ ಸೌಧ ಕೊಠಡಿ 334 ಸಮ್ಮೇಳನ ಸಭಾಂಗಣದಲ್ಲಿ ಪೋರ್ಟಲ್ ಗೆ ಅಧಿಕೃತ ಚಾಲನೆ ಸಿಗಲಿದೆ. ಇಂದಿನಿಂದ ಅಧಿಕೃತವಾಗಿ ಖಾತ ಪರಿವರ್ತನೆ ನಿಯಮ ಚಾಲನೆ ಪಡೆಯಲಿದೆ.
ಬಿ ಖಾತೆಯಿಂದ ಎ ಖಾತೆ ಪರಿವರ್ತನೆ ಮತ್ತು ಎ ಖಾತೆ ಪಡೆಯಲು ನಿವೇಶನದಾರರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ಮೂಲಕ ಎ-ಖಾತೆ ಇಲ್ಲದ ಕಾರಣ ನಿವೇಶನದಾರರು ಎದುರಿಸುತ್ತಿದ್ದ ಹಲವು ಸಂಕಷ್ಟ, ತೊಡಕುಗಳು ನಿವಾರಣೆಯಾಗಲಿದೆ.
ತೆರಿಗೆ ಸಂಗ್ರಹ ಪ್ರಕ್ರಿಯೆಯನ್ನು ಸುಧಾರಿಸಲು ಬಿಬಿಎಂಪಿ ಬೆಂಗಳೂರಿನ ಎಲ್ಲಾ ಕಾನೂನುಬದ್ಧ ಆಸ್ತಿಗಳನ್ನು ತನ್ನ ವ್ಯಾಪ್ತಿಯಲ್ಲಿ ಸೇರಿಸಲು ಒಂದು ರಿಜಿಸ್ಟರ್ ಪರಿಚಯಿಸಿತು. ಈ ರಿಜಿಸ್ಟರ್‌ಗೆ ಎ-ಖಾತಾ ಎಂದು ಹೆಸರಿಸಲಾಯಿತು. ಅಂತಹ ಆಸ್ತಿಗಳು, ಎಲ್ಲಾ ಕಟ್ಟಡಗಳಿಗೆ ಬೈಲಾಗಳು, ತೆರಿಗೆ ನಿಯಮಗಳು ಮತ್ತು ಸರ್ಕಾರಿ ನಿಯಮಗಳು ಅನ್ವಯಿಸುತ್ತವೆ. ಅದು ಸಂಪೂರ್ಣ ಕಾನೂನುಬದ್ಧ ಆಸ್ತಿಯಾಗಿದೆ.
ಪ್ರತ್ಯೇಕ ರಿಜಿಸ್ಟರ್ ಅರೆ-ಕಾನೂನು ಮತ್ತು ಅಕ್ರಮ ಆಸ್ತಿಗಳನ್ನು ಒಂದೇ ನ್ಯಾಯವ್ಯಾಪ್ತಿಯಲ್ಲಿ ಪಟ್ಟಿ ಮಾಡಿ ಅದನ್ನು ಬಿ -ಖಾತಾ ಎಂದು ಹೆಸರಿಸಲಾಯಿತು. ಅಂತಹ ಆಸ್ತಿಗಳು ಕೆಲವು ಅಥವಾ ಎಲ್ಲಾ ಸ್ಥಳೀಯ ಬೈಲಾಗಳು ಮತ್ತು ನಿಬಂಧನೆಗಳಿಗೆ ಅನುಗುಣವಾಗಿಲ್ಲ.