ಲಿವರ್‌ನಲ್ಲಿ ಕೊಬ್ಬು ಸಂಗ್ರಹವಾಗುವುದರಿಂದ ಉಂಟಾಗುವ ಆರೋಗ್ಯ ಸಮಸ್ಯೆಯನ್ನು ಆರಂಭದಲ್ಲೇ ನಿಯಂತ್ರಣಕ್ಕೆ ತರದಿದ್ದಲ್ಲಿ ಅದು ಮಾರಣಾಂತಿಕವಾಗಿ ಪರಿಣಮಿಸುವ ಸಾಧ್ಯತೆಗಳೂ ಇವೆ. ಗಂಭೀರ ಆರೋಗ್ಯ ಸಮಸ್ಯೆಗಳಿಗೆ ದಾರಿಯಾಗುವ ಮೊದಲೇ ಯಕೃತ್ತಿನ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು.
ಫ್ಯಾಟಿ ಲಿವರ್ ಸಮಸ್ಯೆಗೆ ನೆಲ್ಲಿಕಾಯಿಯನ್ನು ಉತ್ತಮ ಪರಿಹಾರವಾಗಿ ಬಳಸಬಹುದು. ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದು ದೇಹವನ್ನು ಹಾನಿಕಾರಕ ಅಸ್ಥಿರ ಅಣುಗಳಿಂದ ರಕ್ಷಿಸಲು ಸಹಾಯ ಮಾಡುತ್ತದೆ. ಹಾನಿಕಾರಕ ಅಸ್ಥಿರ ಅಣುಗಳು ದೇಹವನ್ನು ನಿಧಾನವಾಗಿ ಹಾನಿ ಮಾಡುತ್ತವೆ. ಇವುಗಳು ದೇಹದಲ್ಲಿ ಅಧಿಕ ವಾಗಿದ್ದರೆ ಲಿವರ್ ಮೇಲೆ ಪರಿಣಾಮ ಬೀರಬಹುದು. ನೆಲ್ಲಿಕಾಯಿ ಈ ಪರಿಣಾಮಗಳನ್ನು ಕಡಿಮೆ ಮಾಡುತ್ತದೆ ಮತ್ತು ಲಿವರ್ ಅನ್ನು ಆರೋಗ್ಯಕರವಾಗಿ ರಿಸುತ್ತದೆ.
ನೆಲ್ಲಿಕಾಯಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ಮತ್ತು ಇತರ ಪೋಷಕಾಂಶಗಳು ದೇಹದಿಂದ ವಿಷವನ್ನು ಹೊರಹಾಕಲು ಸಹಾಯ ಮಾಡುತ್ತದೆ. ಲಿವರ್ ಫ್ಯಾಟಿ ಸಮಸ್ಯೆಯನ್ನು ಕಡಿಮೆ ಮಾಡಲು ನೆರವಾಗುತ್ತದೆ. ನಿಮ್ಮ ಆಹಾರದ ಭಾಗವಾಗಿ ನೆಲ್ಲಿಕಾಯಿಯನ್ನು ನಿಯಮಿತವಾಗಿ ಸೇವಿಸುವುದರಿಂದ ಯಕೃತ್ತಿನ ಕಾರ್ಯ ಸುಧಾರಿಸುತ್ತದೆ.
ನೆಲ್ಲಿಕಾಯಿಯನ್ನು ನಿಯಮಿತ ಸೇವನೆ ದೇಹವನ್ನು ಚೈತನ್ಯದಿಂದ ಇಡುತ್ತದೆ. ನೆಲ್ಲಿಕಾಯಿಯಲ್ಲಿರುವ ಉತ್ಕರ್ಷಣ ನಿರೋಧಕಗಳು ದೇಹಕ್ಕೆ ಸಾಕಷ್ಟು ಪೋಷಣೆಯನ್ನು ಒದಗಿಸುತ್ತವೆ. ಜೀರ್ಣಕ್ರಿಯೆಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ದೇಹವನ್ನು ಹಲವು ರೀತಿಯ ಸೋಂಕುಗಳಿಂದ ರಕ್ಷಿಸುತ್ತದೆ.
ನೆಲ್ಲಿಕಾಯಿಯನ್ನು ನೇರವಾಗಿ ತಿನ್ನಬಹುದು ಅಥವಾ ಜ್ಯೂಸ್ ರೂಪದಲ್ಲಿ ತೆಗೆದುಕೊಳ್ಳಬಹುದು. ನೆಲ್ಲಿಕಾಯಿಯನ್ನು ಜ್ಯೂಸ್ ಆಗಿ ಸೇವಿಸುವುದರಿಂದ ದೇಹವು ಅವುಗಳ ಪೋಷಕಾಂಶಗಳನ್ನು ತ್ವರಿತವಾಗಿ ಮತ್ತು ಪರಿಣಾಮಕಾರಿಯಾಗಿ ಹೀರಿಕೊಳ್ಳಲು ಸಹಾಯ ಮಾಡುತ್ತದೆ.