Wednesday, October 29, 2025
Menu

ರಾಜ್ಯದಲ್ಲಿ ಪೊಲೀಸ್ ಆಡಳಿತ ತರಲು ರಾಜ್ಯ ಸರ್ಕಾರ ಪ್ರಯತ್ನ: ಬಸವರಾಜ ಬೊಮ್ಮಾಯಿ

basavaraj bommai

ಲೋಕಸಭೆಯ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಸಂವಿಧಾನ ರಕ್ಷಣೆಯ ಮಾತನಾಡುತ್ತಾರೆ. ಸಂವಿಧಾನ ಅಂತ ಹೇಳುತ್ತ ಸಂವಿಧಾನ ವಿರುದ್ಧವೇ ಕೆಲಸ ಮಾಡುತ್ತಾರೆ. ಆಚಾರ ಹೇಳುವುದು ಬದನೆಕಾಯಿ ತಿನ್ನುವುದು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಾಗ್ದಾಳಿ ನಡೆಸಿದ್ದಾರೆ.

ಹಾವೇರಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಆರ್ ಎಸ್ ಎಸ್ ವಿರುದ್ಧ ರಾಜ್ಯ ಸರ್ಕಾರ ಮಾಡಿದ್ದ ಆದೇಶಕ್ಕೆ ರಾಜ್ಯ ಹೈಕೋರ್ಟ್ ತಡೆ ನೀಡಿರುವ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಆರ್‌ಎಸ್‌ಎಸ್ ವಿರುದ್ಧ ರಾಜ್ಯ ಸರ್ಕಾರ ಮಾಡಿದ್ದ ಆದೇಶ ಸಂವಿಧಾನ ಬಾಹಿರವಾಗಿದೆ ಎಂದು ನಾನು ಹೇಳಿದ್ದೆ, ಅದನ್ನೇ ರಾಜ್ಯ ಹೈಕೋರ್ಟ್ ಧಾರವಾಡ ಪೀಠ ಮಧ್ಯಂತರ ತಡೆ ನೀಡಿದೆ. ಬಹಳ ಸಷ್ಟವಾಗಿದೆ. ಪ್ರಜಾಪಭುತ್ತದಲ್ಲಿ ನಂಬಿಕೆ ಇಟ್ಟಿರುವ ಸರ್ಕಾರ ಇದ್ದರೆ, ಸಂವಿಧಾನ ದಲ್ಲಿ ನಂಬಿಕೆ ಇದ್ದರೆ ಈ ರೀತಿ ಮಾಡುವುದಿಲ್ಲ. ಮಾತೆತ್ತಿದರೆ ರಾಹುಲ್ ಗಾಂಧಿ, ಸಿದ್ದರಾಮಯ್ಯ ಸಂವಿಧಾನ ರಕ್ಷಣೆಯ ಮಾತನಾಡುತ್ತಾರೆ. ಸಂವಿಧಾನ ಅಂತ ಹೇಳುತ್ತ ಸಂವಿಧಾನ ವಿರುದ್ಧವೇ ಕೆಲಸ ಮಾಡುತ್ತಾರೆ. ಆಚಾರ ಹೇಳುವುದು ಬದನೆ ಕಾಯಿ ತಿನ್ನುವುದು. ಹಲವಾರು ಸಂವಿಧಾನ ವಿರುದ್ಧ ಕೃತ್ಯಗಳಿದ್ದಾವೆ. ಜನರ ವಾಕ್ ಸ್ವಾತಂತ್ರ್ಯ ನಾಗರಿಕರ ಹಕ್ಕು ಮೊಟಕುಗೊಳಿಸುವ ಕ್ರಮ ಈ ರಾಜ್ಯದಲ್ಲಿ ಪೊಲೀಸ್ ಆಡಳಿತ ತರಲು ರಾಜ್ಯ ಸರ್ಕಾರ ಪಯತ್ನಿಸುತ್ತಿದೆ ಎಂದು ಆರೋಪಿಸಿದರು.

ಸಂವಿಧಾನಕ್ಕೆ ಅಪಚಾರ

 

ಚುನಾವಣಾ ಆಯೋಗದ ಕುರಿತು ವಿಧಾನ ಪರಿಷತ್‌ ಸದಸ್ಯ ಯತೀಂದ್ರ ಸಿದ್ದರಾಮಯ್ಯ ನೀಡಿರುವ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಚುನಾವಣಾ ಆಯೋಗ ಸಂವಿಧಾನ ಬದ್ಧವಾದ ಸಂಸ್ಥೆ ಅವರಿಗೆ ಟೀಕೆ ಮಾಡುವ ಮೂಲಕ ಸಂವಿಧಾನಕ್ಕೆ ಅಪಚಾರ ಮಾಡುತ್ತಿದ್ದಾರೆ. ಇದರ ಅರಿವು ಇಟ್ಟುಕೊಳ್ಳಬೇಕು. ಯಾವ ಚುನಾವಣಾ ಆಯೋಗದ ಮೂಲಕ ಇವರು ಆಯ್ಕೆಯಾಗಿದ್ದಾರೆ. ಅದನ್ನೇ ತಿರಸ್ಕಾರ ಮಾಡುವ ಕೆಲಸ ಮಾಡುತ್ತಿದ್ದಾರೆ. ಒಟ್ಟಾರೆ ದೇಶದಲ್ಲಿ ಸಂವಿಧಾನ ಬದ್ಧವಾಗಿ ಸ್ಥಾಪಿತವಾಗಿರುವ ಸಂಸ್ಥೆಯ ಮೇಲೆ ಸಂಶಯ ಮೂಡಿಸಿ’ ಅರಾಜಕತೆ ಮೂಡಿಸುವ ಕೆಲಸ ಮಾಡಿ ಕಾಂಗ್ರೆಸ್‌ ದೇಶಕ್ಕೆ ದೊಡ್ಡ ಅಪಚಾರ ಮಾಡುತ್ತಿದೆ ಎಂದು ಹೇಳಿದರು.

ಅಭಿವೃದ್ಧಿ ಶೂನ್ಯ

ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಆರ್‌ಎಸ್‌ಎಸ್ ವಿರುದ್ಧ ಕ್ರಮಕ್ಕೆ ಮುಂದಾಗಿದೆಯಾ ಎಂಬ ಪ್ರಶ್ನೆಗೆ  ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದ ಅಭಿವೃದ್ಧಿ ಶೂನ್ಯವಾಗಿದ್ದು, ಅದನ್ನು ಮುಚ್ಚ ಹಾಕಲು ಒಂದಿಲ್ಲೊಂದು ಜನರಿಗೆ ಪ್ರಯೋಜನ ಇಲ್ಲದ ವಿಷಯಗಳನ್ನು ತೆಗೆದುಕೊಂಡು ತಮ್ಮ ವೈಫಲ್ಯ ಮುಚ್ಚಿ ಹಾಕುವ ಕೆಲಸ ಮಾಡುತ್ತಿದೆ ಎಂದು ಉತ್ತರಿಸಿದರು.

ರಾಜ್ಯ ಸರ್ಕಾರದಲ್ಲಿ ನವೆಂಬ‌ರ್ ಕ್ರಾಂತಿಯ ಕುರಿತು ಕೇಳಿದ ಪಶ್ನೆಗೆ ಪ್ರತಿಕ್ರಿಯಿಸಿ, ಅವರ ಮಧ್ಯ ಏನು ಕ್ರಾಂತಿ ಇದೆ ಅದು ನನಗೆ ಸಂಬಂಧ ಇಲ್ಲ. ಇದೇ ರೀತಿ ಆಡಳಿತ ಮಾಡಿದರೆ ಜನರು ಬಹಳ ಬೇಸತ್ತಿದ್ದಾರೆ. ಸಿದ್ದರಾಮಯ್ಯ ಅವರಿಂದ ಜನರು ಈ ರೀತಿಯ ಆಡಳಿತ ನಿರೀಕ್ಷೆ ಮಾಡಿರಲಿಲ್ಲ ಎಂದರು.

ರಸ್ತೆ ಗುಂಡಿಗಳಲ್ಲಿ ಜನರು ಹೋ ಮಾಡುತಿರುವ ಕುರಿತು ಕೇಳಿದ ಪ್ರಶ್ನೆಗೆ ಪತಿಕ್ರಿಯಿಸಿದ ಅವರು, ರಸ್ತೆ ಗುಂಡಿಗಳ ನಿರ್ವಹಣೆಗೂ ಹಣ ಇಲ್ಲ. ಇದರ ಮೇಲೆ ಮಳೆ ಬಿದ್ದಿದೆ. ಇದರಿಂದ ರಸ್ತೆ ಗುಂಡಿಗಳು ಬಿದ್ದಿವೆ. ಆ ಬಗ್ಗೆ ಚಿಂತನೆ ಮಾಡುವ ಮಂತ್ರಿಗಳು ಇಲ್ಲ. ಮುಖ್ಯಮಂತ್ರಿಯೂ ಇಲ್ಲ. ಹಣ ಇಲ್ಲದ ಕಾರಣ ಎಲ್ಲವೂ ಅಧೋಗತಿಗೆ ಹೋಗಿದೆ ಎಂದು ಹೇಳಿದರು.

Related Posts

Leave a Reply

Your email address will not be published. Required fields are marked *