ಯಾದಗಿರಿ ಪಿಎಸ್ ಐ ಪರಶುರಾಮ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಅವರಿಗೆ ಸಿಐಡಿ ಬಿ ರಿಪೋರ್ಟ್ ನೀಡಿ ಬಚಾವ್ ಮಾಡಿದ್ದು, ದಲಿತ ವಿರೋಧಿ ಸಿದ್ದರಾಮಯ್ಯ ಸರ್ಕಾರ ದಲಿತರಿಗೆ ರಕ್ಷಣೆ ಕೊಡುವುದಿಲ್ಲ, ದಲಿತರನ್ನು ಉಳಿಸುವುದಿಲ್ಲ ಎನ್ನುವುದನ್ನು ಪದೇ ಪದೆ ಸಾಬೀತುಪಡಿಸು ತ್ತಲೇ ಇದೆ ಎಂದು ಪ್ರತಿಪಕ್ಷ ನಾಯಕ ಆರ್. ಅಶೋಕ್ ಟೀಕಿಸಿದ್ದಾರೆ.
ಯಾದಗಿರಿ ಪಿಎಸ್ ಐ ಪರಶುರಾಮ್ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿದ್ದ ಕಾಂಗ್ರೆಸ್ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಅವರಿಗೆ ಸಿಐಡಿ ಬಿ ರಿಪೋರ್ಟ್ ನೀಡಿ ಬಚಾವ್ ಮಾಡಿದ್ದು, ದಲಿತ ವಿರೋಧಿ @siddaramaiah ಸರ್ಕಾರ ದಲಿತರಿಗೆ ರಕ್ಷಣೆ ಕೊಡುವುದಿಲ್ಲ, ದಲಿತರನ್ನು ಉಳಿಸುವುದಿಲ್ಲ ಎನ್ನುವುದನ್ನು ಪದೇ ಪದೆ ಸಾಬೀತುಪಡಿಸುತ್ತಲೇ ಇದೆ.… pic.twitter.com/Xl1Ala0ENo
— R. Ashoka (@RAshokaBJP) April 19, 2025
ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅಶೋಕ್, ವಾಲ್ಮೀಕಿ ನಿಗಮ ಹಗರಣಕ್ಕೆ ದಲಿತ ಅಧಿಕಾರಿ ಚಂದ್ರಶೇಖರ್ ಅವರನ್ನು ಬಲಿ ಪಡೆದುಕೊಂಡ ಪ್ರಕರಣವನ್ನು ನಾಮಕಾವಸ್ತೆ ಎಸ್ ಐಟಿ ತನಿಖೆಗೆ ಕೊಟ್ಟು ಹಳ್ಳ ಹಿಡಿಸಿ ದ್ದಾಯ್ತು, ಈಗ ಗೃಹ ಇಲಾಖೆಯಲ್ಲಿ ವರ್ಗಾವಣೆ ದಂಧೆಗೆ ಬಲಿಯಾದ ಪಿಎಸ್‌ಐ ಪರಶುರಾಮ್ ಅವರ ಪ್ರಕರಣವನ್ನೂ ಮುಚ್ಚಿಹಾಕಲು ಹೊರಟಿದೆ ಈ ದಲಿತ ವಿರೋಧಿ ಕಾಂಗ್ರೆಸ್ ಸರ್ಕಾರ ಎಂದು ಹರಿ ಹಾಯ್ದಿದ್ದಾರೆ.
ಗೃಹ ಸಚಿವ ಪರಮೇಶ್ವರ್ ಅವರೇ, ನಿಮ್ಮದೇ ಸಮುದಾಯದವರು ಈ ರೀತಿ ಸರ್ಕಾರದ ದೌರ್ಜನ್ಯಕ್ಕೆ ಬಲಿಯಾಗು ತ್ತಿದ್ದರೆ, ನಿಮ್ಮ ಕರುಳು ಚೂರ್ ಎನ್ನುವುದಿಲ್ಲವೇ, ಮಾನವೀಯತೆಯನ್ನೇ ಮರೆತು ಬಿಟ್ಟಿದ್ದೀರಾ? ಭ್ರಷ್ಟ ಮುಖ್ಯಮಂತ್ರಿ ಯನ್ನು ಕುರ್ಚಿಯಿಂದ ಕೆಳಗೆ ಇಳಿಸಿ ದಲಿತರ ಬೆನ್ನಿಗೆ ನಿಲ್ಲುತ್ತೀರಾ ಎಂದು ಸಮುದಾಯ ಕಾಯುತ್ತಿದೆ. ಈಗಲಾದರೂ ಸ್ಪಂದಿಸಿ ಎಂದು ಹೇಳಿದ್ದಾರೆ.