ಪರಿಶಿಷ್ಟರಿಗೆಲ್ಲಿದೆ SCSP/TSP ಅನುದಾನ ಗ್ಯಾರೆಂಟಿ? 4 ವರ್ಷಗಳಲ್ಲಿ ₹53,000 ಕೋಟಿ ದಲಿತರ ಹಣ ವಂಚಿಸಿದ ಕಾಂಗ್ರೆಸ್ ಸರ್ಕಾರ. 2023–24ನೇ ಸಾಲಿನಲ್ಲಿ ₹11,114 ಕೋಟಿ 2024–25ನೇ ಸಾಲಿನಲ್ಲಿ ₹14,282.38 ಕೋಟಿ
2025–26ನೇ ಸಾಲಿನಲ್ಲಿ ₹13,433 ಕೋಟಿ, 2026-27ನೇ ಸಾಲಿನಲ್ಲಿ ₹14,198.93 ಕೋಟಿ ವಂಚಿಸಲಾಗಿದೆ ಎಂದು ಪ್ರತಿಪಕ್ಷ ನಾಯಕ ಆರ್ ಅಶೋಕ ಆರೋಪಿಸಿದ್ದಾರೆ.
ಪರಿಶಿಷ್ಟರಿಗೆಲ್ಲಿದೆ SCSP/TSP ಅನುದಾನ ಗ್ಯಾರೆಂಟಿ? 4 ವರ್ಷಗಳಲ್ಲಿ ₹53,000 ಕೋಟಿ ದಲಿತರ ಹಣ ವಂಚಿಸಿದ ಕಾಂಗ್ರೆಸ್ ಸರ್ಕಾರ!
2023–24ನೇ ಸಾಲಿನಲ್ಲಿ ₹11,114 ಕೋಟಿ 2024–25ನೇ ಸಾಲಿನಲ್ಲಿ ₹14,282.38 ಕೋಟಿ
2025–26ನೇ ಸಾಲಿನಲ್ಲಿ ₹13,433 ಕೋಟಿ
2026-27ನೇ ಸಾಲಿನಲ್ಲಿ ₹14,198.93 ಕೋಟಿಸಿಎಂ @siddaramaiah ನವರೇ,… pic.twitter.com/OICKrFygbA
— R. Ashoka (@RAshokaBJP) March 23, 2026
ಸಿಎಂ @siddaramaiah ನವರೇ, ದಲಿತರು, ಹಿಂದುಳಿದ ವರ್ಗಗಳ ಕಲ್ಯಾಣಕ್ಕೆ ನಿಮ್ಮ ಕೊಡಗೆಯಾದರೂ ಏನು ಸ್ವಾಮಿ? ದಲಿತರು, ಹಿಂದುಳಿದ ವರ್ಗಗಳ ಹೆಸರಿನಲ್ಲಿ ಅಹಿಂದ ರಾಜಕೀಯ ಮಾಡಿ, ಅವರು ವೋಟು ಗಿಟ್ಟಿಸಿಕೊಂಡು ಅಧಿಕಾರದ ಮೋಜು ಮಾಡಿದ್ದು ಬಿಟ್ಟರೆ ತಮ್ಮ ಸಾಧನೆಯಾದರೂ ಏನು ಸ್ವಾಮಿ ಎಂದು ಪ್ರಶ್ನಿಸಿದ್ದಾರೆ.
ದೇವರಾಜು ಅರಸು ಅವರ ಮುಖ್ಯಮಂತ್ರಿ ಅಧಿಕಾರಾವಧಿಯ ರೆಕಾರ್ಡ್ ಮುರಿದಿದ್ದೀರಿ. ಆದರೆ ನಿಮ್ಮ ರಾಜಕೀಯ ಜೀವನದ ಅತ್ಯಂತ ದೊಡ್ಡ ದಾಖಲೆ ಅಂದರೆ ಪರಿಶಿಷ್ಟರ ಹಣವನ್ನ ಅವರ ಕಲ್ಯಾಣಕ್ಕೆ ವಿನಿಯೋಗಿಸದೆ ವಂಚಿಸಿದ್ದು. ಎಷ್ಟು ವರ್ಷ ಕುರ್ಚಿಯಲ್ಲಿ ಕೂತಿದ್ದೀರಿ ಎನ್ನುವ ರೆಕಾರ್ಡ್ ಗಿಂತ, ಕುರ್ಚಿಯಲ್ಲಿದ್ದಾಗ ಹಿಂದುಳಿದ ವರ್ಗಗಳಿಗೆ ಏನು ಮಾಡಿದ್ದೀರಿ ಎನ್ನುವ ಟ್ರ್ಯಾಕ್ ರೆಕಾರ್ಡ್ ಮುಖ್ಯ.ಪರಿಶಿಷ್ಟರ ಕಲ್ಯಾಣಕ್ಕೆ ವಿನಿಯೋಗವಾಗಬೇಕಾದ ಹಣವನ್ನ ಕಬಳಿಸಿ ಅನ್ಯಾಯ ಮಾಡುತ್ತಿದೆ ಈ ದಲಿತ ವಿರೋಧಿ @INCKarnataka ಸರ್ಕಾರ ಎಂದು ದೂರಿದ್ದಾರೆ.


