ಚಿತ್ತಾಪುರದಲ್ಲಿ ಪಥಸಂಚಲನ ನಡೆಸಲು ಆರ್ ಎಸ್ ಎಸ್ ಗೆ ಕಲಬುರಗಿ ಜಿಲ್ಲಾಡಳಿತ ಷರತುಬದ್ಧ ಅನುಮತಿ ನೀಡಿದೆ.
ಕಲಬುರಗಿ ಹೈಕೋರ್ಟ್ ನ್ಯಾಯಾಲಯದ ಮುಂದೆ ಗುರುವಾರ ರಾಜ್ಯ ಸರ್ಕಾರ ಹಲವು ಸುತ್ತಿನ ಶಾಂತಿ ಸಂಧಾನ ಮಾತುಕತೆ ನಂತರ ಒಂದು ಬಾರಿಯ ಅವಕಾಶವಾಗಿ ಆರ್ ಎಸ್ ಎಸ್ ಪಥಸಂಚಲನಕ್ಕೆ ಅವಕಾಶ ನೀಡಲು ಸಮ್ಮತಿ ನೀಡಲಾಗಿದೆ ಎಂದು ಹೇಳಿತು.
ನವೆಂಬರ್ 16ರಂದು ಮಧ್ಯಾಹ್ನ 3.30ರಿಂದ ಸೂರ್ಯೊದಯದವರೆಗೂ 300 ಆರ್ ಎಸ್ ಎಸ್ ಕಾರ್ಯಕರ್ತರು ಹಾಗೂ 25 ಬ್ಯಾಂಡ್ ವಾದಕರೊಂದಿಗೆ ಪಥಸಂಚಲನ ನಡೆಸಲು ಜಿಲ್ಲಾಡಳಿತ ಒಪ್ಪಿಗೆ ನೀಡಿದೆ.
ಆರ್ ಎಸ್ ಎಸ್ 800 ಕಾರ್ಯಕರ್ತರ ಪಥಸಂಚಲನಕ್ಕೆ ಅನುಮತಿ ಕೋರಿತ್ತು. ಜಿಲ್ಲಾಡಳಿತದ ನಿರ್ಧಾರಕ್ಕೆ ಸಮ್ಮತಿ ಸೂಚಿಸಿದ ಕಲಬುರಗಿ ನ್ಯಾಯಾಲಯ ಬ್ಯಾಂಡ್ ವಾದಕರ ಸಂಖ್ಯೆಯನ್ನು 50ಕ್ಕೆ ಏರಿಸಲು ಸೂಚಿಸಿತು.
ರಾಜ್ಯ ಸರ್ಕಾರದ ಪರ ವಾದ ಮಂಡಿಸಿದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಪಥಸಂಚಲನದ ವೇಳೆ ಕೋಲು ಹೊರತುಪಡಿಸಿ ಯಾವುದೇ ಮಾರಕಾಸ್ತ್ರ ಹೊಂದಿರುವಂತಿಲ್ಲ. ಅಲ್ಲದೇ ಶಾಂತಿಭಂಗ ಮಾಡುವಂತಹ ಯಾವುದೇ ಕೆಲಸ ಮಾಡುವಂತಿಲ್ಲ ಎಂಬ ಷರತ್ತುಗಳನ್ನು ವಿಧಿಸಲಾಗಿದೆ ಎಂದರು.


