ಮೈಸೂರಿನ ಮೇಟಗಳ್ಳಿಯಲ್ಲಿ ಸರಗೂರು ಪೊಲೀಸ್ ಪೇದೆಗಳು ಹಣ ಸೆಟ್ಲಮೆಂಟ್ ಡೀಲ್‌ನಲ್ಲಿ ತೊಡಗಿದ್ದು, ಡ್ಯೂಟಿ ಬಿಟ್ಟು ಹಣ ವಸೂಲಿಗೆ ಬಾಡಿಗೆ ಕಾರಲ್ಲಿ ಬಂದು ದೌರ್ಜನ್ಯ ನಡೆಸುತ್ತಿರುವುದಾಗಿ ಆರೋಪ ಕೇಳಿ ಬಂದಿದೆ.
ಸರಗೂರು ಪೊಲೀಸ್ ಠಾಣೆ ಪೇದೆಗಳಾದ ಕೃಷ್ಣಯ್ಯ, ಸುನೀಲ್ ಎಂಬವರು ಮೇಟಗಳ್ಳಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸಗಿರುವ ಕೆಂಪರಾಜು ಎಂಬವರ ಮನೆಗೆ ನುಗ್ಗಿ ಅವರನ್ನು ರಸ್ತೆಗೆ ಎಳೆತಂದು ಗಲಾಟೆ ನಡೆಸಿದ್ದಾರೆ ಎಂದು ದೂರಲಾಗಿದೆ. ಕೆಂಪರಾಜು ಮನೆಯಲ್ಲಿ ಹೆಂಡತಿ ಮಕ್ಕಳು ಚೀರಾಡುತ್ತಿದ್ದರೂ ಬಿಡದೆ ರಸೆಯಲ್ಲಿ ಕೆಂಪರಾಜು ಮೇಲೆ ಪೊಲೀಸರು ದೌರ್ಜನ್ಯ ಎಸಗಿದ್ದಾರೆ ಎನ್ನಲಾಗಿದೆ.
ಹಣಕಾಸಿನ ವಿಚಾರಕ್ಕೆ ಕೆಂಪರಾಜು ಮೇಲೆ ಮಹಿಳೆಯೊಬ್ಬರು ಈ ಹಿಂದೆ ದೂರು ನೀಡಿದ್ದರು. ಮಹಿಳೆಯ ದೂರು ಆಧರಿಸಿ ಒಮ್ಮೆ ಠಾಣೆಗೆ ಕರೆದ್ದ ಪೊಲೀಸರು 50 ಸಾವಿರ ಕೊಡುವ ಬದಲು 80 ಸಾವಿರ ಕೊಡಬೇಕು ಅಂತ ಬರೆಸಿಕೊಂಡಿದ್ದಾಗಿ ಕೆಂಪರಾಜು ಆರೋಪಿಸಿದ್ದಾರೆ.
ಹಣ ನೀಡಲು ತಡವಾದ ಕಾರಣಕ್ಕೆ ಪೊಲೀಸರು ಬಾಡಿಗೆ ಮನೆಗೆ ಬಂದು ಎಳೆದೊಯ್ದು ರಸ್ತೆಯಲ್ಲಿ ದೌರ್ಜನ್ಯ ಮಾನಡೆಸಿರುವುದಾಗಿ ಮೇಟಗಳ್ಳಿ ಪೊಲೀಸರಿಗೆ ದೂರು ಸಲ್ಲಿಸಲಾಗಿದೆ. ರಸ್ತೆ ಮಧ್ಯೆ ಕೆಂಪರಾಜು ಮಮೇಲೆ ದೌರ್ಜನ್ಯ ನಡೆಸುತ್ತಿದ್ದ ಪೊಲೀಸ್ ಪೇದೆಗಳನ್ನು ಸ್ಥಳೀಯರು ಮೇಟಗಳ್ಳಿ ಪೊಲೀಸರಿಗೆ ಒಪ್ಪಿಸಿದ್ದಾರೆ.


