ಬೆಂಗಳೂರು: ಕಾಮಿಡಿ ಕಿಲಾಡಿಯ ಹಾಸ್ಯ ಕಲಾವಿದ ಮಡೆನೂರು ಮನು ನನ್ನ ಮೇಲೆ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಿ ಕಿರುತೆರೆ ನಟಿ ಬೆಂಗಳೂರಿನ ಪೊಲೀಸರಿಗೆ ದೂರು ನೀಡಿದ್ದಾರೆ.
ಮಡೆನೂರು ಮನು ನಟಿಸಿದ ಕುಲದಲ್ಲಿ ಕೀಳ್ಯಾವುದೋ ಸಿನಿಮಾ ನಾಳೆಗೆ ತೆರೆಗೆ ಬರಲಿದೆ. ಚಿತ್ರ ಬಿಡಗುಡೆಗೆ ಒಂದು ದಿನ ಮುನ್ನ ಕಿರುತೆರೆ ನಟಿ ಬೆಂಗಳೂರಿನ ಪೊಲೀಸರಿಗೆ ದೂರು ನೀಡಿದ್ದಾರೆ.
ಮಡೆನೂರು ಮನು ನನ್ನನ್ನು ಪ್ರೀತಿಸುತ್ತಿದ್ದಾನೆ ಎಂದು ಹೇಳಿಕೊಂಡು ನನ್ನ ಜೊತೆ ದೈಹಿಕ ಸಂಪರ್ಕ ಬೆಳೆಸಿದ್ದು, ಎರಡು ಬಾರಿ ಅಬಾರ್ಷನ್ ಮಾಡಿಸಿದ್ದಾನೆ. ಸಿನಿಮಾಗೂ ನಾನು ಲಕ್ಷಾಂತರ ರೂಪಾಯಿ ಹಣ ಕೊಟ್ಟಿದ್ದೇನೆ ಎಂದು ನಟಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಆರೋಪಿಸಿದ್ದಾರೆ.
ಮಡೆನೂರು ಮನು ಕಿರುತೆರೆ ನಟಿ ಜೊತೆ ಮಾಡಿರುವ ವಾಟ್ಸಪ್ ಚಾಟ್ ಗಳ ವಿವರಗಳನ್ನು ನಟಿ ಪೊಲೀಸರಿಗೆ ನೀಡಿದ್ದಾರೆ. ಪೊಲೀಸರು ಎಫ್ ಐಆರ್ ದಾಖಲಿಸುತ್ತಿರುವ ವಿಷಯ ತಿಳಿಯುತ್ತಿದ್ದಂತೆ ಮಡೆನೂರು ಮನು ಫೋನ್ ಸ್ವಿಚ್ ಆಫ್ ಮಾಡಿಕೊಂಡಿದ್ದು ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ.