ಬೆಳಗಾವಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗಿ ಮಧ್ಯಾಹ್ನದ ಕಲಾಪಕ್ಕೆ ಗೈರಾದರು.
ಹೊಟ್ಟೆನೋವು ಹಿನ್ನೆಲೆಯಲ್ಲಿ ಬೆಳಗಾವಿಯ ಸರ್ಕ್ಯೂಟ್ ಹೌಸ್‌ನಲ್ಲಿ ಸಂಜೆಯವರೆಗೆ ವಿರಮಿಸುತ್ತಿದ್ದು, ಅವರ ಈ ದಿನದ ಎಲ್ಲ ಕಾರ್ಯಕ್ರಮಗಳನ್ನು ರದ್ದುಗೊಳಿಸಲಾಗಿದೆ.
ಆರೋಗ್ಯದಲ್ಲಿ ಸ್ಥಿರತೆ ಕಂಡು ಬಂದರೆ ಗುರುವಾರ ಸದನಕ್ಕೆ ಆಗಮಿಸುತ್ತಾರೆ. ವ್ಯತ್ಯಾಸ ಉಲ್ಬಣಿಸಿದರೆ ಬೆಂಗಳೂರಿಗೆ ತೆರಳುವುದಾಗಿ ಉನ್ನತ ಮೂಲಗಳು ತಿಳಿಸಿವೆ.


