ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ಐದು ವರ್ಷ ಐದು ವರ್ಷ ಇರುತ್ತಾರೆ. ಎರಡುವರೆ ವರ್ಷಕ್ಕೆ ಅವರನ್ನು ಸಿಎಂ ಆಗಿ ಶಾಸಕರು ಆಯ್ಕೆ ಮಾಡಿಲ್ಲ ಎಂದು ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಸಿಎಂ ಬದಲಾವಣೆ ವಿಚಾರ ಮಾಧ್ಯಮ ಸೃಷ್ಟಿ. ಯಾರಿಗೆ ಸಿಎಂ ಆಗಲು ಇಷ್ಟ ಇರುವುದಿಲ್ಲ, ನಾನು ಸಿಎಂ ಯಾಕೆ ಆಗಬಾರದು, ನಾನು ಸೀನಿಯರ್ ಇದ್ದೇನೆ. ಸಿಎಂ ಬದಲಾವಣೆ ಆಗಬೇಕಾದರೆ ಶಾಸಕರ ಅಭಿಪ್ರಾಯ ಪಡೆಯಬೇಕು. ಇದೆಲ್ಲವೂ ಆಗದೆ ಹೇಗೆ ಬದಲಾವಣೆ ಆಗುತ್ತದೆ ಎಂದು ಪ್ರಶ್ನಿಸಿದ್ದಾರೆ.
ಹೈಕಮಾಂಡ್ ನಿರ್ಧಾರ ಅಂತಿಮ ಎಂಬುದಾಗಿ ಡಿಕೆ ಶಿವಕುಮಾರ್ ಹೇಳಿದ್ದಾರೆ. ಇಕ್ಬಾಲ್ ಹುಸೇನ್ ಮನೋರಂಜನೆಗೋಸ್ಕರ ಡಿಕೆಶಿ ಸಿಎಂ ಅಂತ ಹೇಳುತ್ತಾರೆ ಎಂದರು. ಡಿಕೆ ಶಿವಕುಮಾರ್ ಅವರಿಗೆ ಮುಂದೆ ಸಿಎಂ ಆಗುವ ಅವಕಾಶ ಸಿಗಬಹುದು. ಡಿಕೆಶಿ ಆಕಾಂಕ್ಷಿ ಆಗುವುದರಲ್ಲಿ ತಪ್ಪಿಲ್ಲ. ಸಮಯ ಸಂದರ್ಭ ಮುಖ್ಯ ಆಗುತ್ತದೆ. ಐದು ವರ್ಷ ಸಿದ್ದರಾಮಯ್ಯ ಸಿಎಂ ಆಗಿರುತ್ತಾರೆ ಎಂದು ರಾಯರೆಡ್ಡಿ ಹೇಳಿದರು.
ಸಿಎಂ ಬಜೆಟ್ ಸಿದ್ಧತೆ ನಡೆಸುತ್ತಿದ್ದಾರೆ. ಜನವರಿ 16 ಬಳಿಕ ಬಜೆಟ್ ಸಿದ್ದತೆಗೆ ಒಂದು ರೂಪ ಸಿಗುತ್ತದೆ. ಬಜೆಟ್ ಸಿದ್ಧತೆ ಮಾಡಿ ಫೆಬ್ರವರಿಯಲ್ಲಿ ಬಜೆಟ್ ಮಂಡನೆಗೆ ಸಿಎಂ ಅವರೇ ದಿನಾಂಕ ನಿಗದಿ ಮಾಡುತ್ತಾರೆ. ಈ ಬಾರಿ ಅಭಿವೃದ್ಧಿಗೆ ಹೆಚ್ವು ಮಹತ್ವದ ಕೊಡುವ ಚಿಂತನೆ ಇದೆ. ಕಳೆದ ವರ್ಷಕ್ಕಿಂತ ಬಜೆಟ್ ಗಾತ್ರ ಹೆಚ್ಚಿರಲಿದೆ ಎಂದು ತಿಳಿಸಿದರು.


