Menu

ಸಫಾರಿ ನಿರ್ಬಂಧ ಪುನರ್‌ ಪರಿಶೀಲನೆಗೆ ಸಮಿತಿ: ಸಿಎಂ ಸೂಚನೆ

ಅರಣ್ಯ ಇಲಾಖೆಯಿಂದ ಸಫಾರಿಗೆ ಮತ್ತೆ ಅನುಮತಿ ನೀಡುವ ಹಾಗೂ ಅರಣ್ಯ ಪ್ರವಾಸೋದ್ಯಮದಿಂದ ಮತ್ತೆ ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಈ ನಿರ್ಣಯವನ್ನು ಪುನರ್ ಪರಿಶೀಲಿಸಲು ಪರಿಣಿತರನ್ನೊಳಗೊಂಡ ತಾಂತ್ರಿಕ ಸಮಿತಿ ರಚಿಸಿ, ಅಭಿಪ್ರಾಯ ಪಡೆಯಲು  ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ.

ವಿಧಾನಸೌಧದಲ್ಲಿ ನಡೆದ ರಾಜ್ಯ ವನ್ಯ ಜೀವಿ ಮಂಡಳಿ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು. ಮಾನವ- ವನ್ಯಜೀವಿ ಸಂಘರ್ಷದ ಬಗ್ಗೆ ದೂರುಗಳು ಬಂದ ಹಿನ್ನೆಲೆಯಲ್ಲಿ ಅರಣ್ಯದ ಪ್ರಾಣಿಗಳಿಗೆ ಸಫಾರಿಯಿಂದ ತೊಂದರೆಗಳಾಗುತ್ತಿದ್ದು, ಕಾಡಿನಿಂದ ಹೊರಗೆ ಬರುತ್ತಿವೆ ಎಂಬ ದೂರುಗಳು ಬಂದಿದ್ದವು. ಈ ಕಾರಣದಿಂದ ಅರಣ್ಯ ಇಲಾಖೆಯಿಂದ ಸಫಾರಿ ನಿರ್ಬಂಧಿಸಿ ಆದೇಶ ಹೊರಡಿಸಲಾಗಿತ್ತು. ಸಫಾರಿಯನ್ನು ಪುನಃ ಪ್ರಾರಂಭಿಸಲು ಒತ್ತಾಯ ಬರುತ್ತಿರುವುದಾಗಿ ಅರಣ್ಯ ಸಚಿವರಾದ ಈಶ್ವರ ಖಂಡ್ರೆ ಅವರು ಸಭೆಯಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತಂದರು.

ಸಫಾರಿ ನಿರ್ಬಂಧಿಸಿರುವ ಕಾರಣಕ್ಕೆ ಅದರ ಮೇಲೆ ಅವಲಂಬಿತರಾಗಿರುವ ಸ್ಥಳೀಯರೂ ಸಹ ಉದ್ಯೋಗದಿಂದ ವಂಚಿತರಾಗಿರುವುದಾಗಿ ತಿಳಿಸಿದರು. ಇದನ್ನು ಆಲಿಸಿದ ಮುಖ್ಯಮಂತ್ರಿಗಳು ಸಫಾರಿಗೆ ಮತ್ತೆ ಅನುಮತಿ ನೀಡುವ ಹಾಗೂ ಅರಣ್ಯ ಪ್ರವಾಸೋದ್ಯಮದಿಂದ ಮತ್ತೆ ಸ್ಥಳೀಯರಿಗೆ ಉದ್ಯೋಗಾವಕಾಶಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ಈ ನಿರ್ಣಯವನ್ನು ಪುನರ್ ಪರಿಶೀಲಿಸಲು ಪರಿಣಿತರನ್ನೊಳಗೊಂಡ ತಾಂತ್ರಿಕ ಸಮಿತಿ ರಚಿಸಿ, ಅಭಿಪ್ರಾಯ ಪಡೆಯಲು ಸೂಚಿಸಿದರು.

Related Posts

Leave a Reply

Your email address will not be published. Required fields are marked *