ಮೇಘಸ್ಫೋಟದಿಂದ ದಿಢೀರನೆ ಸೃಷ್ಟಿಯಾದ ಪ್ರವಾಹದಿಂದ 60 ಮಂದಿ ನಾಪತ್ತೆಯಾಗಿರುವ ಘಟನೆ ಉತ್ತರಾಖಂಡ್ ನ ಉತ್ತರ ಕಾಶಿಯ ಡೆಹ್ರಾಡೂನ್ ನಲ್ಲಿ ಸಂಭವಿಸಿದೆ.
ಗಂಗೋತ್ರಿ ವ್ಯಾಪ್ತಿಯ ಧರಾಲಿ ಗ್ರಾಮದ ಜನ ಪ್ರದೇಶದಲ್ಲಿ ಮಂಗಳವಾರ ಬೆಳಿಗ್ಗೆ ಸುನಾಮಿಯಂತೆ ಏಕಾಏಕಿ ಪ್ರವಾಹದ ನೀರು ನುಗ್ಗಿದೆ.
ಮೇಘಸ್ಫೋಟದಿಂದ ಸೃಷ್ಟಿಯಾದ ಪ್ರವಾಹದಿಂದ ಧರಾಲಿ ಗ್ರಾಮದಲ್ಲಿರುವ ಅಂಗಡಿ, ಮನೆ ಹಾಗೂ ಹೋಟೆಲ್ ಗಳಿಗೆ ನೀರು ನುಗ್ಗಿದ್ದು, ಕನಿಷ್ಠ 60 ಮಂದಿ ನಾಪತ್ತೆಯಾಗಿದ್ದಾರೆ ಎಂದು ಹೇಳಲಾಗಿದೆ.
ಮೇಘಸ್ಫೋಟದ ಮಾಹಿತಿ ಲಭಿಸುತ್ತಿದ್ದಂತೆ ಘಟನಾ ಸ್ಥಳಕ್ಕೆ ಎನ್ ಡಿಆರ್ ಎಫ್ ಮತ್ತು ಸ್ಥಳೀಯ ಭದ್ರತಾ ಸಿಬ್ಬಂದಿಗಳು ದೌಡಾಯಿಸಿದ್ದು ರಕ್ಷಣಾ ಕಾರ್ಯಕ್ಕೆ ಮುಂದಾಗಿದ್ದಾರೆ.
ಉತ್ತರಾಖಂಡ್ ನ ಉತ್ತರ ಕಾಶಿಯ ಡೆಹ್ರಾಡೂನ್ ನಲ್ಲಿ ಖೀರ್ ಗಂಗಾ ನದಿ ಉಕ್ಕಿ ಹರಿದಿದ್ದು, ಜನದಟ್ಟಣೆಯ ಪ್ರದೇಶದ ಮೇಲೆ ಪ್ರವಾಹದ ನೀರು ಏಕಾಏಕಿ ಉಕ್ಕಿ ಹರಿದಿದೆ. ಕೆಸರು, ಮಣ್ಣು, ಬಂಡೆ ಗಾತ್ರದ ಕಲ್ಲುಗಳು ಹರಿದು ಬಂದು ಮನೆ, ಅಂಗಡಿ, ಹೋಟೆಲ್ ಗಳ ಮೇಲೆ ಬಿದ್ದಿವೆ.
ಪ್ರವಾಹದ ಬಿರುಸಿಗೆ ಮನೆಗಳು ಅಂಗಡಿಗಳು ಕ್ಷಣಾರ್ಧದಲ್ಲಿ ನಾಮಾವಶೇಷಗೊಂಡಿದ್ದು, ಇಡೀ ಊರಿಗೆ ಊರೇ ಕೊಚ್ಚಿ ಹೋಗಿದೆ ಎಂದು ಪ್ರಾಥಮಿಕ ವರದಿಗಳು ಹೇಳಿವೆ.
VIDEO | Uttarakhand: Cloudburst causes massive destruction in Dharali Uttarkashi. More details are awaited.#Cloudburst #UttarakhandNews
(Source: Third Party)
(Full video available on PTI Videos – https://t.co/n147TvrpG7) pic.twitter.com/vFx2rEUHvv
— Press Trust of India (@PTI_News) August 5, 2025