Menu

ಲೈಸೆನ್ಸ್ ರದ್ದುಗೊಳಿಸಿ ದರ್ಶನ್ ಗನ್ ವಶಕ್ಕೆ ಪಡೆದ ಪೊಲೀಸರು!

ನಟ ದರ್ಶನ್ ಗೆ ನೀಡಲಾಗಿದ್ದ ಗನ್ ಲೈಸೆನ್ಸ್ ರದ್ದುಗೊಳಿಸಿದ್ದ ಬೆಂಗಳೂರು ಪೊಲೀಸರು ಮಂಗಳವಾರ ಗನ್ ವಶಕ್ಕೆ ಪಡೆದಿದ್ದಾರೆ. ಬೆಂಗಳೂರು ಪೊಲೀಸ್ ಆಯುಕ್ತ ದಯಾನಂದ್ ಗನ್ ಲೈಸೆನ್ಸ್ ರದ್ದುಗೊಳಿಸಿದ್ದನ್ನು ಪ್ರಕಟಿಸಿದ ಬೆನ್ನಲ್ಲೇ ದರ್ಶನ್ ಗನ್ ಸೀಜ್ ಮಾಡಲಾಗಿದೆ. ತಾತ್ಕಾಲಿಕವಾಗಿ ಗನ್ ಪರವಾನಗಿ ರದ್ದು ಮಾಡಲಾಗಿತ್ತು. ಪರವಾನಗಿ ರದ್ದು ಮಾಡಿದ್ದ ಬೆನ್ನಲ್ಲೆ ದರ್ಶನ್‌ಗೆ ಆರ್.ಆರ್ ನಗರ ಪೊಲೀಸರು ನೋಟಿಸ್ ಜಾರಿ ಮಾಡಿದ್ದರು. ನೋಟಿಸ್ ಜಾರಿ ಮಾಡಿದ್ದರೂ ಗನ್ ಜಮೆ ಮಾಡಲು ದರ್ಶನ್ ಹಿಂದೇಟು

ನಟ ಸೈಫ್ ಅಲಿ ಖಾನ್ ಆಸ್ಪತ್ರೆಯಿಂದ ಡಿಸ್ಚಾರ್ಜ್

ಚಾಕು ಇರಿತ ಪ್ರಕರಣದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಿವುಡ್ ನಟ ಸೈಫ್ ಅಲಿ ಖಾನ್ ಮಂಗಳವಾರ ಮಧ್ಯಾಹ್ನ ಮುಂಬೈನ ಖಾಸಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಬಾಂಗ್ಲಾದೇಶ ಮೂಲದ ವ್ಯಕ್ತಿ ಮನೆಗೆ ನುಗ್ಗಿ ಹಲ್ಲೆ ಮಾಡಿದ ಪ್ರಕರಣದಲ್ಲಿ 6 ಬಾರಿ ಇರಿತಕ್ಕೆ ಒಳಗಾಗಿ ಗಂಭೀರ

ಬಿಗ್ ಬಾಸ್ ಮನೆಯಿಂದ ಹೊರಬಿದ್ದ ಧನರಾಜ್!

ಯೂಟ್ಯೂಬರ್ ಧನರಾಜ್ ಕನ್ನಡದ ಅತೀ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಸೀಸನ್-11 ಮನೆಯಿಂದ ಹೊರಬಿದ್ದಿದ್ದಾರೆ. ದಕ್ಷಿಣ ಕನ್ನಡ ಮೂಲದ ಧನರಾಜ್ ಭಾನುವಾರ ನಡೆದ ಸೂಪರ್ ಸಂಡೇಯಲ್ಲಿ ಧನರಾಜ್ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿದ್ದಾರೆ. ಈ ಮೂಲಕ ಫಿನಾಲೆ ವಾರ ಪ್ರವೇಶಿಸುವಲ್ಲಿ

ನಟ ಸೈಫ್ ಹತ್ಯೆಗೆ ಯತ್ನಿಸಿದ್ದ ಬಾಂಗ್ಲಾದೇಶಿ ಅರೆಸ್ಟ್‌

ನಟ ಸೈಫ್ ಅಲಿ ಖಾನ್ ಹತ್ಯೆಗೆ ಯತ್ನಿಸಿ ಹಲವು ಬಾರಿ ಚಾಕುವಿನಿಂದ ಇರಿದಾತ ಬಾಂಗ್ಲಾದೇಶಿ ಎಂಬ ಅನುಮಾನವಿದೆ ಎಂದು ಮುಂಬೈ ಮಹಾನಗರ ವಿಭಾಗ-9ರ ಡಿಸಿಪಿ ದೀಕ್ಷಿತ್ ಗೆಡಾಮ್ ಮಾಹಿತಿ ನೀಡಿದ್ದಾರೆ. ಚಾಕು ಇರಿದ ವ್ಯಕ್ತಿಯನ್ನು ಘಟನೆ ನಡೆದ 70 ಗಂಟೆ ಬಳಿಕ

ಸಂಜು ವೆಡ್ಸ್ ಗೀತಾ-2 ಚಿತ್ರವಿಮರ್ಶೆ: IDLYಯ ಉಸಿರು, ರೇಷ್ಮೆಯ ನವಿರು, ಬೋರೋ ಬೋರು

ಸಂಜು ವೆಡ್ಸ್ ಗೀತಾ ಭಾಗ-1ಸೂಪರ್ ಹಿಟ್ ಸಿನಿಮಾ. ಅದರ ಯಶಸ್ಸನ್ನೇ ಮುಂದುವರಿಸುವ ನಾಗಶೇಖರ್-ಶ್ರೀನಗರ ಕಿಟ್ಟಿ ಪ್ರಯತ್ನ ವಿಫಲವಾಗಿದೆ. ಶುಕ್ರವಾರ ತೆರೆ ಕಂಡಿರುವ ಸಂಜು ವೆಡ್ಸ್ ಗೀತಾ ಭಾಗ-2 ಹೇಳಿಕೊಳ್ಳುವಂಥ, ನೋಡಬೇಕೆನಿಸುವಂಥ ಕಥೆಯೇನಲ್ಲ. 2 ಗಂಟೆ 2 ನಿಮಿಷದಲ್ಲಿ ಯಾರಿಗೂ ಬೇಡವಾದ ಟಿವಿ

ಸುನಿಲ್‌ ಶೆಟ್ಟಿಗೆ ಪೂರ್ಣ ಪ್ರಮಾಣದ ತುಳು ಕಾಮಿಡಿ ಸಿನಿಮಾದಲ್ಲಿ ನಟಿಸುವಾಸೆಯಂತೆ

ಹುಟ್ಟೂರು ತುಳುನಾಡಿನ ಬಗ್ಗೆ ನನಗೆ ಅತೀವ ಹೆಮ್ಮೆ ಇದೆ. ಜೈ ತುಳು ಸಿನಿಮಾದಲ್ಲಿ ಗೆಸ್ಟ್ ರೋಲ್ ಮಾಡುತ್ತಿದ್ದೇನೆ. ಮುಂದೊಂದು ದಿನ ಪೂರ್ಣ ಪ್ರಮಾಣದಲ್ಲಿ ತುಳು ಕಾಮಿಡಿ ಸಿನಿಮಾ ಮಾಡುವ ಆಸೆಯಿದೆ ಎಂದು ಬಾಲಿವುಡ್ ನಟ ಸುನೀಲ್ ಶೆಟ್ಟಿ ಹೇಳಿದ್ದಾರೆ. ನಟ ರೂಪೇಶ್

ಸೈಫ್ ಅಲಿ ಖಾನ್ ಪುತ್ರನ ಕೋಣೆಗೆ ನುಗ್ಗಿ 1 ಕೋಟಿ ಡಿಮ್ಯಾಂಡ್ ಮಾಡಿದ್ದ ದಾಳಿಕೋರ!

ಬಾಲಿವುಡ್ ನಟ ಸೈಫ್ ಅಲಿ ಖಾನ್ ಗೆ 6 ಬಾರಿ ಇರಿದ ದಾಳಿಕೋರ ಸೈಫ್ 4 ವರ್ಷದ ಪುತ್ರನ ಕೋಣೆಗೆ ನುಗ್ಗಿ 1 ಕೋಟಿ ರೂ.ಗೆ ಡಿಮ್ಯಾಂಡ್ ಮಾಡಿದ್ದ ಎಂಬ ಸ್ಫೋಟಕ ವಿಷಯವನ್ನು ಮನೆಯ ಸಿಬ್ಬಂದಿ ಬಹಿರಂಗಪಡಿಸಿದ್ದಾರೆ. ಗುರುವಾರ ಮುಂಜಾನೆ ಸೈಫ್

ನಟ ಸೈಫ್‌ಗೆ ಇರಿದ ದಾಳಿಕೋರನ ಬಂಧನ

ಮುಂಬಯಿನ ಬಾಂದ್ರಾದ ನಿವಾಸದಲ್ಲಿ ಮಧ್ಯರಾತ್ರಿ ಮನೆಗೆ ನುಗ್ಗಿ ನಟ ಸೈಫ್‌ ಅಲಿಖಾನ್‌ಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದ  ಆರೋಪಿಯನ್ನು ಮುಂಬೈ ಪೊಲೀಸರು ಬಂಧಿಸಿದ್ದಾರೆ. ಆರೋಪಿಯು ಮನೆಗೆ ದರೋಡೆಗೆಂದು ಬಂದಿದ್ದನಾ ಅತವಾ ಸೈಪ್‌ ಕೊಲೆ ಮಾಡಲೆಂದು ಬಂದಿದ್ದನಾ ಎಂಬ ಬಗ್ಗೆ ಹಲವು ಆಯಾಗಳಿಂದ ತನಿಖೆ

ದರ್ಶನ್‌ಗೆ ಮತ್ತೆ ಬಂಧನ ಭೀತಿ: ಪೊಲೀಸರು ಸುಪ್ರೀಂಗೆ ಸಲ್ಲಿಸಿರುವ ಮೇಲ್ಮನವಿ ಜ.24ಕ್ಕೆವಿಚಾರಣೆ

ಚಿತ್ರದುರ್ಗದ ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿಗಳಾದ ನಟ ದರ್ಶನ್‌ ಮತ್ತು ಗ್ಯಾಂಗ್‌ ಗೆ ಹೈಕೋರ್ಟ್‌ ನೀಡಿರುವ ಜಾಮೀನು ಪ್ರಶ್ನಿಸಿ ರಾಜ್ಯ ಪೊಲೀಸರು ಸುಪ್ರೀಂಕೋರ್ಟ್‌ಗೆ ಸಲ್ಲಿಸಿರುವ ಮನವಿಯ ವಿಚಾರಣೆ ಜನವರಿ 24ರಂದು ನಡೆಯಲಿದೆ. ದರ್ಶನ್, ಪವಿತ್ರಾ ಸೇರಿ 7 ಆರೋಪಿಗಳ ಜಾಮೀನು

ನಟ ಸೈಫ್ ಅಲಿ ಖಾನ್ ಗೆ 6 ಬಾರಿ ಇರಿತ: 10 ಪೊಲೀಸ್ ತಂಡದಿಂದ ತನಿಖೆ

ಬಾಲಿವುಡ್ ನಟ ಸೈಫ್ ಅಲಿ ಖಾನ್ ಮನೆಗೆ ನುಗ್ಗಿದ ದುಷ್ಕರ್ಮಿ ಚಾಕು ಇರಿದ ಘಟನೆ ಗುರುವಾರ ತಡರಾತ್ರಿ ನಡೆದಿದ್ದು, ದಾಳಿಕೋರನ ಪತ್ತೆಗೆ 10 ಪೊಲೀಸರ ತಂಡ ಹಾಗೂ ಶ್ವಾನದಳ ನಿಯೋಜಿಸಲಾಗಿದೆ. ಗುರುವಾರ ಮುಂಜಾನೆ ಮನೆಗೆ ನುಗ್ಗಿದ ದುಷ್ಕರ್ಮಿ ಸೈಫ್ ಅಲಿ ಖಾನ್