Menu

ದರ್ಶನ್‌ ಬೆಂಗಳೂರಿಂದ ಹೊರ ಹೋಗ್ಬಹುದು ಎಂದ ಹೈಕೋರ್ಟ್‌

ನಟ ದರ್ಶನ್‌ಗೆ ಬೆಂಗಳೂರು ಬಿಟ್ಟು ಹೋಗದಂತೆ ಇದ್ದ ಷರತ್ತನ್ನು ಕೋರ್ಟ್‌ ಸಡಿಲಿಸಿದೆ. ವಿದೇಶಕ್ಕೆ ಹೋಗುವುದಾದರೆ ಮಾತ್ರ ಕೋರ್ಟ್ ಅನುಮತಿ ಬೇಕು ಎಂದು ಹೈಕೋರ್ಟ್‌ ಏಕಸದಸ್ಯ ಪೀಠ ಆದೇಶ ಮಾಡಿದೆ. ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ದರ್ಶನ್ ಮನವಿಗೆ ಸ್ಪಂದಿಸಿದ ಹೈಕೋರ್ಟ್ ಈ ಸಡಿಲಿಕೆ ನೀಡಿದೆ. ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಈ ಆದೇಶ ಪ್ರಕಟಿಸಿದ್ದಾರೆ. ಇದರಿಂದ ದರ್ಶನ್‌ಗೆ ಮಾತ್ರವಲ್ಲದೆ ಅವರನ್ನು ನಂಬಿ ಬಂಡವಾಳ ಹೂಡಿದ್ದ ನಿರ್ಮಾಪಕರಿಗೆ ನಿರಾಳತೆ ಸಿಕ್ಕಂತಾಗಿದೆ. ದರ್ಶನ್‌ ವಿದೇಶಕ್ಕೆ ಹೋಗಲು

ಆಸ್ಕರ್ ವಿಜೇತ ನಟ ಜೆನೆ ಹ್ಯಾಕ್ ಮನ್, ಪತ್ನಿ ಶವವಾಗಿ ಪತ್ತೆ!

ಹಾಲಿವುಡ್ ದಿಗ್ಗಜ ನಟ ಜೆನೆ ಹ್ಯಾಕ್ ಮನ್ ಮತ್ತು ಪತ್ನಿ ಬೆಟ್ಸೆ ಅರಕಾವಾ ಅಲ್ಲದೇ ಮನೆಯ ನಾಯಿ ಮನೆಯಲ್ಲಿ ಶವವಾಗಿ ಪತ್ತೆಯಾಗಿರುವ ಆಘಾತಕಾರಿ ಘಟನೆ ಅಮೆರಿಕದಲ್ಲಿ ನಡೆದಿದೆ. ಎರಡು ಬಾರಿಯ ಆಸ್ಕರ್ ಪ್ರಶಸ್ತಿ ವಿಜೇತ ನಟ ಜೆನೆ ಹ್ಯಾಕ್ ಮನ್ (95)

ತೆಲುಗು ಹಿರಿಯ ನಟ ಪೋಸಾನಿ ಕೃಷ್ಣ ಮುರಳಿ ಬಂಧನ

ತೆಲುಗು ಹಿರಿಯ ನಟ ಹಾಗೂ ವೈಎಸ್ಆರ್ ಕಾಂಗ್ರೆಸ್ ಪಕ್ಷದ ಸದಸ್ಯ ಪೋಸಾನಿ ಕೃಷ್ಣ ಮುರಳಿ ಅವರನ್ನು ಬುಧವಾರ ರಾತ್ರಿ ಆಂಧ್ರ ಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ನಟನ ವಿರುದ್ಧ ಓಬುಲವಾರಿಪಲ್ಲಿ ಪೊಲೀಸ್ ಠಾಣೆಯಲ್ಲಿ ಸೆಕ್ಷನ್ 196, 353(2), ಮತ್ತು 111 ಹಾಗೂ ಎಸ್ಸಿ/ಎಸ್ಟಿ

20 ವರ್ಷದಿಂದ ನಾನು ಸಂಭಾವನೆಯೇ ಪಡೆದಿಲ್ಲ ಅಂತ ಯಾಕಂದ್ರು ನಟ ಆಮೀರ್‌ ಖಾನ್‌

ನಟ ಆಮಿರ್ ಖಾನ್, ತಾವು ಕಳೆದ 20 ವರ್ಷದಿಂದ ಸಂಭಾವನೆಯನ್ನೇ ಪಡೆದಿಲ್ಲ ಎಂದು ಹೇಳುವ ಮೂಲಕ ಅಚ್ಚರಿ ಹುಟ್ಟಿಸಿದ್ದಾರೆ. 20 ವರ್ಷದಲ್ಲಿ ಅವರು ಯಾವ ಸಿನಿಮಾಕ್ಕೂ ಸಂಭಾವನೆಯನ್ನೇ ಪಡೆದಿಲ್ಲವಂತೆ. ಹಾಗೆಂದು ಆಮಿರ್ ಖಾನ್ ಇಷ್ಟು ವರ್ಷ ಸಿನಿಮಾಗಳಲ್ಲಿ ಉಚಿತವಾಗಿ ನಟಿಸಿಲ್ಲ, ಬದಲಿಗೆ

ಬೆಂಗಳೂರಿನಲ್ಲಿ ಮಾರ್ಚ್‌ 1ರಿಂದ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ

ಮಾರ್ಚ್ 1ರಿಂದ 16ನೇ ಬೆಂಗಳೂರು ಅಂತರರಾಷ್ಟ್ರೀಯ ಚಲನಚಿತ್ರೋತ್ಸವ(BIFFes)ಆರಂಭವಾಗಲಿದ್ದು, 60 ದೇಶಗಳಿಂದ 200ಕ್ಕೂ ಹೆಚ್ಚು ಚಲನಚಿತ್ರ ಪ್ರದರ್ಶನಗೊಳ್ಳಲಿವೆ. ‘ಸರ್ವ ಜನಾಂಗದ ಶಾಂತಿಯ ತೋಟ’ ಎಂಬ ಥೀಮ್‌ನಡಿಯಲ್ಲಿ ಚಲನಚಿತ್ರೋತ್ಸವ ನಡೆಯಲಿದೆ ಎಂದು ಚಿತ್ರೋತ್ಸವ ಸಮಿತಿ ಅಧ್ಯಕ್ಷೆ ಬಿ.ಬಿ.ಕಾವೇರಿ ಹೇಳಿದ್ದಾರೆ. ಮಾರ್ಚ್ 1 ರ ಸಂಜೆ

ಪೊಲೀಸರಿಂದ ಒತ್ತಡದ ಆರೋಪ: ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಏ.8ಕ್ಕೆ ಮುಂದೂಡಿಕೆ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆಯನ್ನು ಬೆಂಗಳೂರಿನ 57ನೇ ಸೆಷನ್ಸ್ ನ್ಯಾಯಾಲಯ ಏಪ್ರಿಲ್ ೮ಕ್ಕೆ ಮುಂದೂಡಿದೆ. ನಟ ದರ್ಶನ್, ಪವಿತ್ರಾ ಗೌಡ ಮತ್ತು ಸಹಚರರು ಕೊಲೆ ಮಾಡಿದ್ದಾರೆ ಎಂಬ ಪೊಲೀಸರ ಆರೋಪದ ಕುರಿತು ವಿಚಾರಣೆ ಮಂಗಳವಾರ ನಡೆದಿದ್ದು, ದರ್ಶನ್ ಮತ್ತು ಪವಿತ್ರಾ

ತಾವರೆಕೆರೆಯ ಶಿಲಾಮಠಕ್ಕೆ ರೋಬೋಟಿಕ್​ ಆನೆ ನೀಡಿದ ನಟ ಸುನಿಲ್‌ ಶೆಟ್ಟಿ

ದಾವಣಗೆರೆಯ ಚನ್ನಗಿರಿ ತಾಲೂಕಿನ ತಾವರೆಕೆರೆಯ ಶಿಲಾಮಠಕ್ಕೆ ಬಾಲಿವುಡ್ ನಟ ಸುನೀಲ್ ಶೆಟ್ಟಿ ರೋಬೋಟಿಕ್​ ಆನೆಯೊಂದನ್ನು ಕಳಿಸಿಕೊಟ್ಟಿದ್ದಾರೆ. ಭಾನುವಾರ ಶ್ರೀಮಠಕ್ಕೆ ಆಗಮಿಸಿದ ಆನೆಯನ್ನು ಸ್ವಾಮೀಜಿ ಸೇರಿದಂತೆ ಭಕ್ತರು ಅದ್ಧೂರಿಯಾಗಿ ಸ್ವಾಗತಿಸಿದರು. ಈ ಆನೆಗೆ ಉಮಾಮಹೇಶ್ವರ ಎಂದು ನಾಮಕರಣ ಮಾಡಲಾಯಿತು. ಗ್ರಾಮಸ್ಥರೆಲ್ಲರೂ ಸೇರಿ ಆನೆಯ

ಲೂಪ್ ಸ್ಟುಡಿಯೋದಲ್ಲಿ ಮಾತನಾಡಿದ “ಮಾರುತ”

ಎಸ್ ನಾರಾಯಣ್ ನಿರ್ದೇಶನದ ಹಾಗೂ ದುನಿಯಾ ವಿಜಯ್ – ಶ್ರೇಯಸ್ ಮಂಜು ಅಭಿನಯದ  ” ಮಾರುತ”  ಚಿತ್ರದ  ಡಬ್ಬಿಂಗ್ ಮುಕ್ತಾಯಗೊಂಡಿದೆ. ಖ್ಯಾತ ನಿರ್ದೇಶಕ ಡಾ||ಎಸ್ ನಾರಾಯಣ್ ನಿರ್ದೇಶನದಲ್ಲಿ ದುನಿಯಾ ವಿಜಯ್ ಹಾಗೂ ಶ್ರೇಯಸ್ ಮಂಜು ಪ್ರಮುಖ ಪಾತ್ರದಲ್ಲಿ ನಟಿಸಿರುವ ಚಿತ್ರ ”

ಶಿವರಾಜ್ ಕುಮಾರ್ ಆರೋಗ್ಯ ವಿಚಾರಿಸಿದ ಡಿಸಿಎಂ ಡಿಕೆಶಿ

ಡಿಸಿಎಂ ಡಿ ಕೆ ಶಿವಕುಮಾರ್ ಅವರು ಹ್ಯಾಟ್ರಿಕ್ ಹೀರೊ ಶಿವರಾಜ್ ಕುಮಾರ್ ಅವರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ಆರೋಗ್ಯ ಕ್ಷೇಮ ವಿಚಾರಿಸಿದ್ದಾರೆ.  ಈ ವೇಳೆ  ಗೀತಾ ಶಿವರಾಜ್ ಕುಮಾರ್  ಜೊತೆಗಿದ್ದರು. ಅನಾರೋಗ್ಯ ಹಿನ್ನೆಲೆಯಲ್ಲಿ ಅಮೆರಿಕಕ್ಕೆ ತೆರಳಿ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡು ನಟ ಶಿವರಾಜ್

ನಟ ಡಾಲಿಗಾಗಿ ಮುಗಿ ಬಿದ್ದ ಅಭಿಮಾನಿಗಳಿಗೆ ಲಾಠಿ ರುಚಿ

ಚಿತ್ರದುರ್ಗ ತಾಲೂಕಿನ ಭರಮಸಾಗರದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಭಾಗವಹಿಸಲು ನಟ ಡಾಲಿ ಧನಂಜಯ ಆಗಮಿಸಿದ್ದರು. ಈ ವೇಳೆ ಧನಂಜಯ ಅವರನ್ನು ನೋಡಲು ಅಭಿಮಾನಿಗಳು ಜಮಾಯಿಸಿದ್ದಾರೆ. ಡಾಲಿ ಜೊತೆ ಸೆಲ್ಫಿ ಬೇಕು ಎಂದು ಫ್ಯಾನ್ಸ್ ಮುಗಿ ಬಿದ್ದಿದ್ದಾರೆ, ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು