ಚಿತ್ರದುರ್ಗ ನಗರದ ಆಟೋ ಡ್ರೈವರ್ ರವಿಕುಮಾರ್ ಕೊಲೆ ಪ್ರಕರಣವನ್ನು ಬೇಧಿಸಿರುವ ಪೊಲೀಸರು ಅನೈತಿಕ ಸಂಬಂಧ ಹಿನ್ನೆಲೆಯಲ್ಲಿ ಆಟೋ ಡ್ರೈವರ್ ಪತ್ನಿ ಮತ್ತು ಮಗ ಸುಪಾರಿ ನೀಡಿ ಕೊಲೆ ಮಾಡಿಸಿರುವುದು ಬಹಿರಂಗಗೊಳಿಸಿದ್ದಾರೆ.
ದುಷ್ಕರ್ಮಿಗಳು ಕೊಲೆ ಮಾಡಿ ಬೆಡ್ ಶೀಟ್ ನಲ್ಲಿ ಮೂಟೆ ಕಟ್ಟಿ ಚಿತ್ರದುರ್ಗ ನಗರದ ಹೊರಭಾಗದ ಜಾನುಕೊಂಡ ಸಮೀಪ ಶವ ಎಸೆದು ಹೋಗಿದ್ದರು. ಹೊಳಲ್ಕೆರೆ ರಸ್ತೆಯ ಮಂಗಳಮುಖಿಯರ ರೂಂ ನಲ್ಲಿ ಕೊಲೆ ಮಾಡಿ ಬೆಡ್ ಶೀಟ್ ನಲ್ಲಿ ಮೂಟೆ ಕಟ್ಟಿ ಶವವನ್ನು ಆರೋಪಿ ಗಣೇಶ್ ಎಸೆದು ಹೋಗಿದ್ದ. ಬೆಡ್ ಶೀಟ್ ಆಧಾರದ ಮೇಲೆ ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ಪ್ರಕರಣವನ್ನು ಬೇಧಿಸಿದ್ದಾರೆ. ಬೆಂಗಳೂರು ಮೂಲದ ನಟೋರಿಯಸ್ ಹಂತಕ ಗಣೇಶ್ ಕೊಲೆ ಮಾಡಿರುವುದು ಪತ್ತೆಯಾಗಿದೆ.
ರವಿಕುಮಾರ್ ಪತ್ನಿ ಜೊತೆ ಆರೋಪಿ ಗಣೇಶ್ ಅನೈತಿಕ ಸಂಬಂಧ ಹೊಂದಿದ್ದ. ರವಿಕುಮಾರ್ ಪತ್ನಿ ಸುನಿತಾ, ಮಗ ವಿಷ್ಣು ಕುಮ್ಮಕ್ಕಿನಿಂದ ಹತ್ಯೆ ನಡೆದಿದ್ದು, ಆರೋಪಿಗಳಾದ ಹಂತಕ ಗಣೇಶ್, ಕೊಲೆಯಾದ ರವಿ ಕುಮಾರ್ ಪತ್ನಿ ಸುನೀತ, ಮಗ ವಿಷ್ಣುವನ್ನು ಪೊಲೀಸರು ಬಂಧಿಸಿದ್ದಾರೆ. ಚಿತ್ರದುರ್ಗ ಗ್ರಾಮಾಂತರ ಠಾಣೆ ಪಿಐ ಮುದ್ದುರಾಜ್, ಪಿಎಸ್ಐ ಸುರೇಶ್ ನೇತೃತ್ವದಲ್ಲಿ ಆರೋಪಿಗಳ ಬಂಧನ ಕಾರ್ಯಾಚರಣೆ ನಡೆಯಿತು.