ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ ಚಿಮುಲ್ ವ್ಯಾಪ್ತಿಯ ಡೈರಿಯೊಂದರಲ್ಲಿ ಶುದ್ಧ ಹಾಲಿಗೆ ನೀರು ಮಿಶ್ರಣ ಮಾಡಿ ಹಾಲಿನ ಒಕ್ಕೂಟ ಹಾಗೂ ನಂದಿನಿ ಹಾಲಿನ ಗ್ರಾಹಕರಿಗೆ ವಂಚನೆ ಮಾಡುತ್ತಿರುವ ಪ್ರಕರಣದಲ್ಲಿ ಆರೋಪಿ ಸಿಬ್ಬಂದಿಯನ್ನು ಚಿಮುಲ್ ವಜಾಗೊಳಿಸಿದೆ.
ಚಿಂತಾಮಣಿ ತಾಲೂಕಿನ ಮಾಡಿಕೆರೆ ಹಾಲಿನ ಡೈರಿಯಲ್ಲಿ ಕೆಲಸ ಮಾಡುವ ಸಿಬ್ಬಂದಿ ಹಾಲಿನ ಡಂಪ್ ಟ್ಯಾಂಕ್‌ಗೆ ನೀರು ಕಲಬೆರಕೆ ಮಾಡಿ, ಹಾಲಿನ ಟ್ಯಾಂಕ್ ಮೂಲಕ ಚಿಕ್ಕಬಳ್ಳಾಪುರ ಜಿಲ್ಲಾ ಡೈರಿಗೆ ಸರಬರಾಜು ಮಾಡಿ ಈಗ ಸಿಕ್ಕಿ ಬಿದ್ದಿದ್ದಾರೆ.
ಡೈರಿ ಸಿಬ್ಬಂದಿಯ ಈ ಕೃತ್ಯವನ್ನು ಮತ್ತೊಬ್ಬ ಸಿಬ್ಬಂದಿ ಮೊಬೈಲ್‌ನಲ್ಲಿ ರೆಕಾರ್ಡ್ ಮಾಡಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಈ ವಿಚಾರ ಬಯಲಾಗುತ್ತಿದ್ದಂತೆ ಚಿಮುಲ್ ಎಂ.ಡಿ. ಶ್ರೀನಿವಾಸಗೌಡ ಎಚ್ಚೆತ್ತುಕೊಂಡು ಡೈರಿಯ ಸಹಾಯಕ ಚೇತನ್‌ನನ್ನು ವಜಾ ಮಾಡಿದ್ದಾರೆ. ಹಾಲಿನ ಟ್ಯಾಂಕರ್ ಚಾಲಕನ ಮಾರ್ಗ ಬದಲಾವಣೆ ಮಾಡಿ ತನಿಖೆಗೆ ಸಮಿತಿ ರಚಿಸಿದ್ದಾರೆ.