ಚಿತ್ರದುರ್ಗದ ಐಮಂಗಲ ಅಬ್ಬಿನ ಹೊಳೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಟ್ಯೂಷನ್‌ಗೆ ಹೋಗುವುದನ್ನು ತಪ್ಪಿಸಿಕೊಳ್ಳಲು ಕಿಡ್ನ್ಯಾಪ್ ಕಥೆ ಕಟ್ಟಿ ಪೋಷಕರಲ್ಲಿ ಹಾಗೂ ಸಾರ್ವಜನಿಕರಲ್ಲಿ ಆತಂಕ ಸೃಷ್ಟಿಸಿರುವ ಕಟ್ಟು ಕಥೆಯನ್ನು ಪೊಲೀಸರು ಬಯಲುಗೊಳಿಸಿದ್ದಾರೆ.
ಟ್ಯೂಷನ್‌ಗೆ ಹೋದ ಮಕ್ಕಳು ತಡವಾಗಿ ಮನೆಗೆ ಬಂದವರು ತಾವು ಕಿಡ್ನ್ಯಾಪ್ ಆಗಿರುವುದಾಗಿ ಪೋಷಕರಲ್ಲಿ ಹೇಳಿದ್ದಾರೆ. ಅಪಹರಣಕಾರರು ಹಿಂದಿಯಲ್ಲಿ ಮಾತನಾಡುತ್ತಿದ್ದರು, ನಾವು ಹೇಗೋ ತಪ್ಪಿಸಿಕೊಂಡು ಬಂದೆವು ಎಂದು ಹೇಳಿದ್ದಾರೆ. ಆದರೆ ಪ್ರಕರಣಕ್ಕೆ ಇದೀಗ ಹೊಸ ಟ್ವಿಸ್ಟ್ ಸಿಕ್ಕಿದ್ದು, ಪೋಷಕರು ನಿರಾಳರಾಗಿದ್ದಾರೆ.
ವಿಚಾರ ತಿಳಿದ ಪೊಲೀಸರು ಪರಿಶೀಲನೆ ನಡೆಸಿದ ವೇಳೆ ಮಕ್ಕಳು ಪ್ರಾಜೆಕ್ಟ್ ವರ್ಕ್ ಮಾಡದೆ ಟ್ಯೂಷನ್‌ಗೆ ಹೋಗುವುದನ್ನು ತಪ್ಪಿಸಲು ಈ ನಾಟಕವಾಡಿರುವುದು ಬಯಲಾಗಿದೆ.


