ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಹೆಬ್ಬಾಳ ಗ್ರಾಮದಲ್ಲಿ ಸತತ ಮಳೆಗೆ ಮನೆಯೊಂದು ಕುಸಿದು ಒಂದುವರೆ ವರ್ಷದ ಮಗು ಮೃತಪಟ್ಟು ಆರು ಮಂದಿಗೆ ಗಾಯಗಳಾಗಿವೆ.
ಒಂದುವರೆ ವರ್ಷದ ಮಗು ಪ್ರಶಾಂತಿ ಮೃತಪಟ್ಟಿದ್ದರೆ, ಮಗುವಿನ ತಾಯಿ ಹನುಮಂತಿ, ದುರಗಮ್ಮ, ಭೀಮಮ್ಮ, ಹುಸೇನಪ್ಪ, ಫಕೀರಪ್ಪ ಗಾಯಗೊಂಡವರು. ಗಾಯಾಳುಗಳನ್ನು ಗಂಗಾವತಿ ತಾಲೂಕು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸ್ಥಳಕ್ಕೆ ತಹಶೀಲ್ದಾರ್ ಯು.ನಾಗರಾಜ್ ಹಾಗೂ ಗಂಗಾವತಿ ಗ್ರಾಮೀಣ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.