ಬೀದರ್‌ನ ಬಸವಕಲ್ಯಾಣ ಪಟ್ಟಣದ ಈಶ್ವರ ಕಾಲೊನಿಯಲ್ಲಿ ಆಟ ಆಡುವಾಗ ಬಾವಿಗೆ ಬಿದ್ದು ಆರು ವರ್ಷದ ಮಗು ಮೃತಪಟ್ಟಿದೆ. ಬಸವಕಲ್ಯಾಣ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಯ ಪಕ್ಕದಲ್ಲಿ ಆಟವಾಡುತ್ತಿದ್ದಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದು ಶೇಖ್ ನುಸ್ತಕಿಮ್ ಅಕ್ಬರಲಿ ಎಂಬ ಮಗು ಅಸು ನೀಗಿದೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಶವ ಹೊರತೆಗೆದಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಒಯ್ಯಲಾಗಿದೆ.
ಕೋಲಾರದಲ್ಲಿ ಬಾಲಕ ನಾಪತ್ತೆ
ಕೋಲಾರ ತಾಲೂಕು ವಿಟ್ಟಪನಹಳ್ಳಿಯಲ್ಲಿ ಬಾಳೆದಿಂಡು ತರಲು ಹೋದ ಬಾಲಕ ನಾಪತ್ತೆಯಾಗಿದ್ದಾನೆ. ರಾಜಣ್ಣ ಎಂಬವರ ಮಗ ಸ್ನೇಹಿತ್ ಗೌಡ (14) ನಾಪತ್ತೆಯಾದ ಬಾಲಕ. ಸ್ನೇಹಿತ್ ಕಳೆದ ನಾಲ್ಕು ದಿನಗಳ ಹಿಂದೆ ಸೈಕಲ್‌ನಲ್ಲಿ ಬಾಳೆದಿಂಡು ತರಲು ಮನೆಯಿಂದ ಹೋದವನು ಇದುವರೆಗೂ ಪತ್ತೆಯಾಗಿಲ್ಲ.
ನಾಲ್ಕು ದಿನಗಳಿಂದ ಪೋಷಕರು ಮತ್ತು ಕುಟುಂಬಸ್ಥರು ಹುಡುಕಾಟ ನಡೆಸುತ್ತಿದ್ದು, ತೋಟದ ಬಳಿ ಸೈಕಲ್ ಇದೆ, ಆದರೆ ಬಾಲಕ ಪತ್ತೆಯಾಗದೆ ಪೋಷಕರು ಆತಂಕದಲ್ಲಿದ್ದಾರೆ.
ತೋಟದ ಪಕ್ಕದಲ್ಲೇ ಹೊಳೆ ನೀರು ಹರಿಯುತ್ತಿದ್ದು, ಬಾಲಕ ನೀರಿನಲ್ಲಿ ಕೊಚ್ಚಿಹೋಗಿರುವ ಶಂಕೆ ವ್ಯಕ್ತವಾಗಿದೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದ್ದು, ಅಗ್ನಿಶಾಮಕ ದಳ ಬಾಲಕನಿಗಾಗಿ ಶೋಧ ನಡೆಸುತ್ತಿದೆ.