ತುಮಕೂರಿನ ತಿಪಟೂರು ತಾಲೂಕಿನ ಅಯ್ಯನಬಾವಿ ಗ್ರಾಮದಲ್ಲಿ ಮನೆಯ ಹೊರಗೆ ಆಟವಾಡುತ್ತಿದ್ದ ಮಗುವಿನ ಮೇಲೆ ಬೀದಿ ನಾಯಿಗಳು ದಾಳಿ ಮಾಡಿದ್ದರಿಂದ ಮಗು ಮೃತಪಟ್ಟಿದೆ.
ಮಗುವಿನ ತಲೆ, ಹೊಟ್ಟೆ ಮುಖ, ಕೈ, ಕಾಲು, ತೊಡೆ ಭಾಗವನ್ನು ಕಚ್ಚಿ ಕಿತ್ತು ಹಾಕಿ ನಾಯಿಗಳು ಎಳೆದಾಡಿವೆ. ರಕ್ತದ ಮಡುವಿನಲ್ಲಿ ಚೀರಾಡುತ್ತಿದ್ದ ಮಗುವನ್ನು ಕಂಡ ಸಾರ್ವಜನಿಕರು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಸಾಗಿಸಿದರು.
ಹೆಚ್ಚಿನ ಚಿಕಿತ್ಸೆಗೆಂದು ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಮಗು ಮೃತಪಟ್ಟಿದೆ. ತಿಪಟೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.