ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪಟ್ಟಣ ಸಮೀಪದ ಹವ್ವಳ್ಳಿ ಗ್ರಾಮದಲ್ಲಿ ಐದು ತಿಂಗಳ ಹಿಂದೆ ಮದುವೆಯಾಗಿರುವ ದಂಪತಿ ಮಧ್ಯೆ ಕೌಟುಂಬಿಕ ಕಲಹ ತೀವ್ರಗೊಂಡು ಹೆಂಡತಿಯು ಗಂಡನ ಮನೆ ತೊರೆದು ತವರು ಮನೆಗೆ ವಾಪಸ್ ಆಗಿದ್ದಳು. ಇದರಿಂದ ರೊಚ್ಚಿಗೆದ್ದ ಪತಿ ಆಕೆಯನ್ನು ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ.
ಹವ್ವಳ್ಳಿ ಗ್ರಾಮದ ನೇತ್ರಾವತಿ ಮತ್ತು ಸಕಲೇಶಪುರ ನವೀನ್ ಜೊತೆ ಕಳೆದ 5 ತಿಂಗಳ ಹಿಂದೆ ವಿವಾಹವಾಗಿದೆ. ಮದುವೆಯಾದ ಕೆಲವೇ ದಿನಗಳಲ್ಲಿ ಗಂಡನಿಂದ ದೂರವಾದ ನೇತ್ರಾವತಿ ಹವ್ವಳ್ಳಿ ಗ್ರಾಮದ ತವರು ಮನೆಗೆ ವಾಪಸಾಗಿದ್ದರು. ನವೀನ್, ನೇತ್ರಾವತಿಯ ಕುಟುಂಬದ ಹಿರಿಯರು ರಾಜಿ ಪಂಚಾಯಿತಿ ಮಾಡಿ ಇಬ್ಬರನ್ನು ಒಂದು ಮಾಡುವ ಪ್ರಯತ್ನ ಮಾಡಿದ್ದರೂ ಯಾವುದೇ ಪ್ರಯೋಜನವಾಗಿರಲಿಲ್ಲ.
ಗಂಡ ನವೀನ್ನಿಂದ ಸಂಪೂರ್ಣ ದೂರವಾಗುವ ಯೋಚನೆ ಮಾಡಿದ್ದ ನೇತ್ರಾವತಿ ವಿಚ್ಛೇದನ ಪಡೆಯಲು ಸಿದ್ದತೆ ನಡೆಸಿದ್ದರು. ಮೂರು ದಿನಗಳ ಹಿಂದೆ ಆಲ್ದೂರು ಪೊಲೀಸ್ ಠಾಣೆಯಲ್ಲಿ ಪತಿ ನವೀನ್ ವಿರುದ್ಧ ಕಿರುಕುಳದ ದೂರು ನೀಡಿದ್ದರು. ಪೊಲೀಸರು ದೂರು ಸ್ವೀಕರಿಸಿದ್ದರು. ವಿಚ್ಛೇದನ ಮತ್ತು ಪೊಲೀಸರಿಗೆ ದೂರು ನೀಡಿರುವ ವಿಷಯ ತಿಳಿದ ಪತಿ ನವೀನ್ ನೇತ್ರಾವತಿಯನ್ನು ಹತ್ಯೆ ಮಾಡಿದ್ದಾನೆ.
ಆಲ್ದೂರು ಠಾಣೆಯಲ್ಲಿ ತನ್ನ ವಿರುದ್ಧ ದೂರು ನೀಡಿರುವ ವಿಷಯ ತಿಳಿದ ನವೀನ್ ಸಕಲೇಶಪುರದಿಂದ ಆಲ್ದೂರು ಪಟ್ಟಣಕ್ಕೆ ಬಂದಿದ್ದ. ಆಲ್ದೂರಿನಿಂದ ಎರಡು ಕಿಮೀ ದೂರದಲ್ಲಿರುವ ಹವ್ವಳ್ಳಿ ಗ್ರಾಮದ ನೇತ್ರಾವತಿ ಮನೆಗೆ ಹಿಂಭಾಗದಿಂದ ತೆರಳಿದ್ದ. ನೇತ್ರಾವತಿ ಮೇಲೆ ಊರಿನಿಂದ ತಂದಿದ್ದ ಮಚ್ಚಿನಿಂದ ಹಲ್ಲೆ ಮಾಡಿ ಪರಾರಿಯಾಗಿದ್ದ.
ಹಲ್ಲೆಯಿಂದ ಕುತ್ತಿಗೆ ಹಾಗೂ ಎದೆ ಭಾಗಕ್ಕೆ ಗಂಭೀರ ಗಾಯವಾಗಿದ್ದ ನೇತ್ರಾವತಿಯನ್ನು ಚಿಕ್ಕಮಗಳೂರು ನಗರದ ಮಲ್ಲೇಗೌಡ ಸರ್ಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾರೆ. ಆಲ್ದೂರು ಪೊಲೀಸ್ ಠಾಣೆಯಲ್ಲಿ ನವೀನ್ ವಿರುದ್ಧ ಪ್ರಕರಣ ದಾಖಲಾಗಿದ್ದು, ಆತನ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಕೈಗೊಂಡಿದ್ದಾರೆ.
ಪ್ರೇಮ ವೈಫಲ್ಯ : ಯುವಕನ ಕೊಲೆ
ಹಾಸನದ ಹಳ್ಳಿ ಮೈಸೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರೇಮ ವೈಫಲ್ಯ ಹಿನ್ನೆಲೆ ಪ್ರೇಮಿಯೊಬ್ಬ ತನ್ನ ಪ್ರೇಯಸಿಯನ್ನು ಕೊಲೆ ಮಾಡಿರುವ ಘಟನೆ ನಡೆದಿದೆ. ಹೊಳೆನರಸೀಪುರ ನಿವಾಸಿ ಸುದೀಪ್(24) ಕೊಲೆಯಾದ ಯುವಕ. ಯುವತಿ ಕಡೆಯವರು ಕೊಲೆ ಮಾಡಿಸಿರುವ ಆರೋಪ ಕೇಳಿಬಂದಿದೆ.
ಮೈಸೂರು ಜಿಲ್ಲೆಯ ಯುವತಿ ಜೊತೆಗೆ ಸುದೀಪ್ ಕೆಲವು ವರ್ಷಗಳಿಂದ ಪ್ರೀತಿ-ಪ್ರೇಮ ಎಂದು ಸುತ್ತಾಡಿದ್ದ ಸುದೀಪ್, ಹುಡುಗಿಗೆ ಬೇರೆ ಮದುವೆ ಫಿಕ್ಸ್ ಆಗಿದ್ದಕ್ಕೆ ಬೇಸರಗೊಂಡಿದ್ದ. ಮನೆಯವರ ಬಳಿ ಮದುವೆಯಾದರೆ ಅವಳನ್ನೇ ಎಂದು ಹೇಳಿಕೊಂಡಿದ್ದ. ಮೊನ್ನೆ ರಾತ್ರಿ ಪೋನ್ ಕರೆ ಬಂದ ಬಳಿಕ ಬೈಕ್ ಏರಿ ಹೊರಟಿದ್ದ ಸುದೀಪ್ ಎಷ್ಟು ಹೊತ್ತಾದರೂ ವಾಪಸ್ ಬಂದಿಲ್ಲ. ರಾತ್ರಿ ಎಲ್ಲೆಡೆ ಹುಡುಕಾಡಿದರೂ ಪತ್ತೆಯಾಗಿರಲಿಲ್ಲ. ಬೆಳಗ್ಗೆ ಸುದೀಪ್ ಶವ ರಸ್ತೆಯಲ್ಲಿ ಪತ್ತೆಯಾಗಿದೆ. ಯುವತಿ ಕಡೆಯವರೇ ಕೊಲೆ ಮಾಡಿ ಅಪಘಾತ ಎಂದು ಬಿಂಬಿಸಲು ಯತ್ನಿಸಿದ್ದಾರೆ ಎಂದು ಸುದೀಪ್ ಪೋಷಕರು ಆರೋಪಿಸಿದ್ದಾರೆ.
ಹೊಳೆನರಸೀಪುರದ ದಾಸಯ್ಯ ಹಾಗೂ ಗೀತಾ ಅವರ ಮಗ ಸುದೀಪ್ ಹಾಸನದ ಫ್ಯಾಕ್ಟರಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದ. ಸುದೀಪ್ ಇಷ್ಟಪಟ್ಟ ಹುಡುಗಿ ಕೈಕೊಟ್ಟಾಗ ನೊಂದಿದ್ದ.
ಬೇರೊಬ್ಬ ಹುಡುಗನ ಜೊತೆ ನಿಶ್ಚಿತಾರ್ಥ ಆಗಿದ್ದರೂ ವಿಚಾರ ಮುಚ್ಚಿಟ್ಟು ಸುದೀಪ್ ಜೊತೆ ಸಂಪರ್ಕದಲ್ಲಿದ್ದ ಹುಡುಗಿ ವಿಚಾರ ಗೊತ್ತಾದಾಗ ನನ್ನ ಮರೆತುಬಿಡು ಎಂದಿದ್ದಾಳೆ. ಸುದೀಪ್, ನಿನ್ನ ಮರೆಯುವುದಕ್ಕಾಗಲ್ಲ ಎಂದು ಹಠ ಹಿಡಿದಿದ್ದ.