ಅಂತರ್ಜಾಲದಲ್ಲಿ ಪಾರ್ಟ್ ಟೈಂ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದ ಚಿಕ್ಕಬಳ್ಳಾಪುರದ ನರ್ಸ್‌ವೊಬ್ಬರು ಆನ್‌ಲೈನ್ ವಂಚನೆಗೆ ಒಳಗಾಗಿ 12 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಮೋಸ ಹೋಗಿದ್ದು ತಿಳಿದುಕೊಂಡ ಬಳಿಕ ಚಿಕ್ಕಬಳ್ಳಾಪುರ ಸೈಬರ್ ಕ್ರೈಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡ್ತಿದ್ದ ಭಾರತಿ ಎಂಬವರು ಮನೆಯಲ್ಲಿ ಆರ್ಥಿಕ ಸಮಸ್ಯೆ ಹಿನ್ನೆಲೆ ಪಾರ್ಟ್ ಟೈಂ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದರು. ಇನ್ಸ್ಟಾಗ್ರಾಮ್ ಲಿಂಕ್ ನೋಡಿ ಕ್ಲಿಕ್ ಮಾಡಿದ್ದರು. ಬಳಿಕ ಅವರಿಗೆ ಕಾಲ್ ಬಂದಿದ್ದು, ಟೆಲಿಗ್ರಾಮ್ ಗ್ರೂಪ್‌ವೊಂದಕ್ಕೆ ಅವರನ್ನು ಸೇರಿಸಲಾಗಿತ್ತು. ನಂತರ ಹಣದಾಸೆ ತೋರಿಸಿ ಇನ್ವೆಸ್ಟ್ ಮಾಡುವಂತೆ ಆರೋಪಿಗಳು ತಿಳಿಸಿದ್ದರು. ಅದನ್ನು ನಂಬಿ ಭಾರತಿ ಹಣ ಪಾವತಿಸಿದ್ದರು. ನಿಮ್ಮ ಖಾತೆಯಲ್ಲಿ 15 ಲಕ್ಷ ಹಣವಿದೆ ಎಂದಿದ್ದ ಆರೋಪಿಗಳು ಅದನ್ನು ವಿತ್ ಡ್ರಾ ಮಾಡಲು ನಾನಾ ಕಾರಣ ಹೇಳಿ 12 ಲಕ್ಷ ರೂಪಾಯಿಯನ್ನು ತಮ್ಮ ಖಾತೆಗೆ ವರ್ಗಾವಣೆ ಮಾಡಿಕೊಂಡು ವಂಚಿಸಿದ್ದಾರೆ.
ಹಣ ಸಿಗುವ ನಂಬಿಕೆಯಿಂದ ಭಾರತಿ ಮೈಮೇಲಿದ್ದ ಚಿನ್ನಾಭರಣಗಳನ್ನು ಬ್ಯಾಂಕ್ನಲ್ಲಿ ಅಡ ಇಟ್ಟು ಹಣ ಕಟ್ಟಿದ್ದಾರೆ. ತಾನು ಮೋಸ ಹೋದ ಬಗ್ಗೆ ಗೊತ್ತಾಗಿ ಸೈಬರ್ ಕ್ರೈಮ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಸೈಬರ್ ವಂಚನೆಗಳಿಗೆ ಸಾರ್ವಜನಿಕರು ಬಲಿಯಾಗುವ ಪರಂಗಗಳು ದಿನನಿತ್ಯ ವರದಿಯಾಗುತ್ತಿವೆ, ಸಂಬಂಧಿಸಿದ ಅಧಿಖಾರಿಗಳು ಕೂಡ ಈ ಬಗ್ಗೆ ಎಚ್ಚರಿಕೆ ನೀಡುತ್ತಿರುತ್ತಾರೆ. ಆದರೂ ಹೀಗೆ ಆನ್‌ಲೈನ್ ವಂಚನೆ, ದರೋಡೆ ಡೆಯುತ್ತಲೇ ಇರಉವುದು ಆತಂಕಕಾರಿ ಬೆಳವಣಿಗೆಯಾಗಿದೆ.


