Menu

ತುಂಬಿ ತುಳುಕುತ್ತಿರುವ ಕೆಆರ್‌ಎಸ್‌ಗೆ ಸೋಮವಾರ ಮುಖ್ಯಮಂತ್ರಿ ಬಾಗೀನ ಅರ್ಪಣೆ

ಕೃಷ್ಣರಾಜ ಸಾಗರ ಜಲಾಶಯ ಮೈದುಂಬಿ ಹರಿಯುತ್ತಿದ್ದು, 1940ರ ಬಳಿಕ ಇದೇ ಮೊದಲ ಬಾರಿಗೆ ಜೂನ್ ತಿಂಗಳಲ್ಲೇ ಜಲಾಶಯದಲ್ಲಿ ನೀರಿನ ಮಟ್ಟ 124 ಅಡಿ ತಲುಪಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಬಾಗೀನ ಅರ್ಪಣೆ ಮಾಡಲಿದ್ದಾರೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರು, ಶಾಸಕರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.

ಕೆಆರ್‌ಎಸ್‌ ಗರಿಷ್ಠ ನೀರಿನ ಮಟ್ಟ – 124.80 ಅಡಿ, ಒಟ್ಟು ಸಾಮರ್ಥ್ಯ- 49.45 ಟಿಎಂಸಿ, ಇಂದಿನ ನೀರಿನ ಮಟ್ಟ- 124 ಅಡಿ, ಒಳಹರಿವು – 30,750 ಕ್ಯೂಸೆಕ್‌, ಹೊರಹರಿವು – 35,936 ಕ್ಯೂಸೆಕ್‌ ದಾಖಲಾಗಿದೆ. ಜೂನ್‌ನಲ್ಲೇ ಈ ಪ್ರಮಾಣದಲ್ಲಿ ಕೆಆರ್‌ಎಸ್‌ ಜಲಾಶಯ ಭರ್ತಿಯಾಗಿರುವುದಕ್ಕೆ ರೈತರು ಸಂತಸಗೊಂಡಿ ದ್ದಾರೆ.

Related Posts

Leave a Reply

Your email address will not be published. Required fields are marked *