ಮದುವೆ ಆದ ಮೇಲೆ ಕೆಲಸ ಕೊಡಿಸುವುದಾಗಿ ನಂಬಿಸಿ ಮದುವೆ ಆಗಿದ್ದ ಪತಿ ಮಾಡಿದ ವಂಚನೆ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕಬಡ್ಡಿ ಆಟಗಾರ್ತಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಹಾರಾಷ್ಟ್ರದ ನಾಗ್ಪುರದಲ್ಲಿ ನಡೆದಿದೆ.
29 ವರ್ಷದ ಕಬಡ್ಡಿ ಕಿರಣ್ ಸೂರಜ್ ದಾಧೆ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಮದುವೆ ಆದ ಮೇಲೆ ಆಕೆಗೆ ಹಾಗೂ ಸೋದರನಿಗೆ ಉದ್ಯೋಗ ಕೊಡಿಸುತ್ತೇನೆ. ಈ ಮೂಲಕ ಆರ್ಥಿಕ ಸಂಕಷ್ಟದಿಂದ ಹೊರಗೆ ಬರಬಹುದು ಎಂದು ನಂಬಿಸಿ 2020ರಲ್ಲಿ ಸ್ವಪ್ನಿಲ್ ಜಯದೇವ್ ಲಂಬ್ ಘರೆ ಮದುವೆ ಆಗಿದ್ದ.
ಮದುವೆ ಆಗಿ ಹಲವು ವರ್ಷಗಳು ಕಳೆದರೂ ಉದ್ಯೋಗ ಕೊಡಿಸುವುದಾಗಿ ನಾಟಕ ಮಾಡುತ್ತಲೇ ಇದ್ದ ಪತಿಯ ನಡವಳಿಕೆಯಿಂದ ಅನುಮಾನಗೊಂಡ ಕಿರಣ್ ಗೆ ತಾನು ಮೋಸ ಹೋಗಿರುವುದು ತಿಳಿದು ಬಂದಿದೆ.
ಗಂಡ ಮಾಡಿದ ಮೋಸದ ಅರಿವಾದ 30 ವರ್ಷದ ಕಿರಣ್ ತವರು ಮನೆಗೆ ಹಿಂತಿರುಗಿವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು.
ವಿಚ್ಚೇದನಕ್ಕೆ ಅರ್ಜಿ ಸಲ್ಲಿಸದ ನಂತರ ಸ್ವಪ್ನಿಲ್ ಲೈಂಗಿಕ ದೌರ್ಜನ್ಯ ನಡೆಸುವುದು, ನಿಂದಿಸುವುದು ಮುಂದುವರಿಸಿದ್ದರಿಂದ ಡಿಸೆಂಬರ್ 4ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಬೆಳಿಗ್ಗೆ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.
ಕಬ್ಬಡ್ಡಿ ಆಟಗಾರ್ತಿ ತನ್ನ ಫೋನ್‌ನಲ್ಲಿ ಗಂಡನ ಮೆಸೇಜ್ ರಕ್ಷಿಸಿಕೊಂಡು ಸಾಕ್ಷ್ಯವಾಗಿ ಬಳಸಿಕೊಳ್ಳಲಾಗಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡುವ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 108 ರ ಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಮತ್ತು ಸ್ವಪ್ನಿಲ್‌ಗಾಗಿ ಹುಡುಕಾಟ ನಡೆಸುತ್ತಿದ್ದಾರೆ.


