ಏಪ್ರಿಲ್ 18ಕ್ಕೆ ನಿಗದಿಯಾಗಿದ್ದ ಪರೀಕ್ಷೆಯನ್ನು ಅದಕ್ಕೂ ಮೊದಲೇ ಅಂದರೆ ಏಪ್ರಿಲ್ 15ಕ್ಕೆ ನಡೆಸುವುದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ತಿಳಿಸಿದೆ.
ಹೊರನಾಡು ಮತ್ತು ಗಡಿನಾಡು ಕನ್ನಡಿಗ ಅಭ್ಯರ್ಥಿಗಳಿಗೆ ನಿಗದಿಗೊಂಡಿದ್ದ ಸಿಇಟಿ ಕನ್ನಡ ಪರೀಕ್ಷೆಯನ್ನು ಏಪ್ರಿಲ್ 18ರಂದು ನಿಗದಿಗೊಳಿಸಲಾಗಿತ್ತು, ಅಂದು ಗುಡ್‌ಫ್ರೈಡೇ ಇರುವ ಕಾರಣ ದಿನಾಂಕ ಬದಲಾಯಿಸುವಂತೆ ಮನವಿ ಬಂದ ಹಿನ್ನೆಲೆಯಲ್ಲಿ ಕೆಇಎ ಪರೀಕ್ಷಾ ದಿನಾಂಕನ್ನು ಏಪ್ರಿಲ್ 15ಕ್ಕೆ ನಿಗದಿಗೊಳಿಸಿದೆ.
ಬೆಂಗಳೂರು, ಮಂಗಳೂರು, ವಿಜಯಪುರ, ಬೆಳಗಾವಿ ಕೇಂದ್ರಗಳಲ್ಲಿ ಮಾತ್ರ ನಡೆಯಲಿರುವ ಕನ್ನಡ ಭಾಷಾ ಪರೀಕ್ಷೆಯು ಏಪ್ರಿಲ್ 15ರಂದು ಬೆಳಿಗ್ಗೆ 10.30ರಿಂದ 11.30ರವರೆಗೆ ನಡೆಯಲಿದೆ. ಉಳಿದ ಪರೀಕ್ಷೆಗಳು ನಿಗದಿಯದಂತೆ ಏಪ್ರಿಲ್ 16 ಮತ್ತು 17ರಂದು ನಡೆಯಲಿವೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ಮಾಹಿತಿ ನೀಡಿದೆ.