ರಾಜಧಾನಿ ದೆಹಲಿ, ಮುಂಬೈ, ಚೆನ್ನೈ, ಬೆಂಗಳೂರು ಸೇರಿದಂತೆ 259 ಕಡೆಗಳಲ್ಲಿ ಯುದ್ಧ ಜಾಗೃತಿಯ ಅಣಕು ಪ್ರದರ್ಶನ ನಡೆಯಲಿದೆ.
1971ರ ಭಾರತ- ಪಾಕಿಸ್ತಾನ ಯುದ್ಧ ನಂತರ ಇದೇ ಮೊದಲ ಬಾರಿಗೆ ದೇಶದಲ್ಲಿ ಅಣಕು ಪ್ರದರ್ಶನ ನಡೆಯಲಿದೆ.
ಪೆಹಲ್ಗಾಮ್ ದಾಳಿ ವೇಳೆ ಉಗ್ರರಿಂದ 26 ಪ್ರವಾಸಿಗರು ಹತ್ಯೆಗೈದ ಪ್ರತಿಕಾರವಾಗಿ ಭಾರತ ಯುದ್ಧದ ಸಿದ್ಧತೆ ನಡೆಸಿದೆ. ಈ ಹಿನ್ನೆಲೆಯಲ್ಲಿ ದೇಶಾದ್ಯಂತ ಅಣಕು ಪ್ರದರ್ಶನಕ್ಕೆ ಕೇಂದ್ರ ಸೂಚನೆ ನೀಡಿದೆ.
ಕೇಂದ್ರ ಸರ್ಕಾರ ಅಣಕು ಪ್ರದರ್ಶನದ ನೀಲನಕ್ಷೆ ಸಿದ್ಧಪಡಿಸುತ್ತಿದ್ದು, ನಾಳೆ ರಾಜ್ಯ ಸರ್ಕಾರಗಳಿಗೆ ತಲುಪುವ ನಿರೀಕ್ಷೆ ಇದೆ. ಈ ಹಿನ್ನೆಲೆಯಲ್ಲಿ ರಾಜ್ಯದ ಭದ್ರತಾ ಪಡೆಗಳಾದ ಪೊಲೀಸ್, ಅಗ್ನಿಶಾಮಕ ದಾಳ ಹಾಗೂ ಗೃಹ ರಕ್ಷಕ ದಳದ ಸಿಬ್ಬಂದಿ ಅಣಕು ಪ್ರದರ್ಶನದ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಬೆಂಗಳೂರಿನಲ್ಲಿ 35 ಕಡೆ ಸೈರನ್ ಗಳಿದ್ದು, 32 ಕಾರ್ಯ ನಿರ್ವಹಿಸುತ್ತಿದೆ. ಮಾಕ್ ಡ್ರಿಲ್ ನಲ್ಲಿ ಎನ್ ಸಿಸಿ, ಎನ್ ಎಸ್ ಎಸ್ ಸೇರಿದಂತೆ ವಿವಿಧ ಕಾಲೇಜು ವಿದ್ಯಾರ್ಥಿಗಳ ತಂಡಗಳು ಕೂಡ ಪಾಲ್ಗೊಳ್ಳಲಿವೆ.