ನವದೆಹಲಿ: ಅಶ್ಲೀಲ ಚಿತ್ರಗಳನ್ನು ಪ್ರಸಾರ ಮಾಡುತ್ತಿದ್ದ ಅತ್ಯಂತ ಜನಪ್ರಿಯ ಉಲ್ಲು, ಆಲ್ಟ್, ದೇಸಿಫ್ಲಿಕ್ಸ್ ಸೇರಿದಂತೆ 25 ಒಟಿಟಿಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.
ಅಶ್ಲೀಲ ಸಂದೇಶಗಳ ಮಾಹಿತಿಗಳನ್ನು ಪ್ರಸಾರ ಮಾಡುತ್ತಿರುವ 25 ಓಟಿಟಿಗಳು ಸಾರ್ವಜನಿಕರಿಗೆ ಲಭಿಸದಂತೆ ಕ್ರಮ ಕೈಗೊಳ್ಳಲು ಇಂಟರ್ನೆಟ್ ಸೇವಾ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.
ಭಾರತೀಯ ಸಂಸ್ಕೃತಿ ಮತ್ತು ಕಾನೂನಿಗೆ ವಿರುದ್ಧವಾದ ಮಾಹಿತಿಗಳನ್ನು ರವಾನಿಸುತ್ತಿದ್ದ ಓಟಿಟಿ ವೇದಿಗಳನ್ನು ಪ್ರಸಾರ ನಿಲ್ಲಿಸುವಂತೆ ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯ ಸೂಚಿಸಿದೆ.
ಬಿಗ್ ಶಾಟ್ಸ್ ಅಪ್ಲಿಕೇಶನ್, ಬೂಮೆಕ್ಸ್, ನವರಸ ಲೈಟ್, ಗುಲಾಬ್ ಅಪ್ಲಿಕೇಶನ್, ಕಂಗನ್ ಅಪ್ಲಿಕೇಶನ್, ಬುಲ್ ಅಪ್ಲಿಕೇಶನ್, ಜಲ್ವಾ ಅಪ್ಲಿಕೇಶನ್, ವಾವ್ ಎಂಟರ್‌ಟೈನ್‌ಮೆಂಟ್, ಲುಕ್ ಎಂಟರ್‌ಟೈನ್‌ಮೆಂಟ್, ಹಿಟ್‌ಪ್ರೈಮ್, ಫೆನಿಯೊ, ಶೋಎಕ್ಸ್, ಸೋಲ್ ಟಾಕೀಸ್, ಅಡ್ಡಾ ಟಿವಿ, ಹಾಟ್‌ಎಕ್ಸ್ ವಿಐಪಿ, ಹಲ್‌ಚುಲ್ ಅಪ್ಲಿಕೇಶನ್, ಮೂಡ್‌ಎಕ್ಸ್, ನಿಯಾನ್‌ಎಕ್ಸ್ ವಿಐಪಿ, ಫ್ಯೂಗಿ, ಮೊಜ್‌ಫ್ಲಿಕ್ಸ್, ಟ್ರಿಫ್ಲಿಕ್ಸ್ ಓಟಿಟಿಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ.