ಶಿವಮೊಗ್ಗ
ಶಿವಮೊಗ್ಗದಲ್ಲಿ ಹಿಂದೂನಾ, ಮುಸ್ಲಿಮನಾ ಎಂದು ಪ್ರಶ್ನಿಸಿ ಹಲ್ಲೆ
ಶಿವಮೊಗ್ಗದ ಮಾರ್ನಮಿ ಬೈಲ್‌ನಲ್ಲಿ ಸ್ಥಳೀಯ ನಿವಾಸಿ ಹರೀಶ್ ಎಂಬವರ ಮೇಲೆ ನೀ ಹಿಂದೂನಾ, ಮುಸ್ಲಿಮನಾ ಎಂದು ಪ್ರಶ್ನಿಸಿ ದುಷ್ಕರ್ಮಿಗಳು ಹಲ್ಲೆ ನಡೆಸಿದ ಘಟನೆ ನಡೆದಿದೆ. ರಾತ್ರಿ ಮನೆ ಪಕ್ಕದಲ್ಲೇ ವಾಕ್ ಮಾಡುತ್ತಿದ್ದಾಗ ಬಂದ ದುಷ್ಕರ್ಮಿಗಳು ಅಟ್ಟಾಡಿಸಿ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಹಿಂದೂ ಎಂಬ ಕಾರಣಕ್ಕೆ ಹಲ್ಲೆ ನಡೆಸಲಾಗಿದೆ ಎಂದು ಹರೀಶ್ ಹಾಗೂ ಕುಟುಂಬಸ್ಥರು ಆರೋಪಿಸಿದ್ದಾರೆ. ಹರೀಶ್ ಮೇಲೆ ಹಲ್ಲೆ ನಡೆಸುತ್ತಿದ್ದ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ತಡ ರಾತ್ರಿ ಊಟ
ಶಿವಮೊಗ್ಗ ಜೈಲಿನಲ್ಲಿ ಅನಾರೋಗ್ಯದಿಂದ ಕೈದಿ ಸಾವು
ಜೀವಾವಧಿ ಶಿಕ್ಷೆಗೆ ಗುರಿಯಾಗಿ ಶಿವಮೊಗ್ಗದ ಸೆಂಟ್ರಲ್ ಜೈಲಿನಲ್ಲಿದ್ದ ಕೈದಿಯೊಬ್ಬ ಅನಾರೋಗ್ಯದಿಂದ ಮೃತಪಟ್ಟಿದ್ದಾನೆ. ಚಿಕ್ಕಮಗಳೂರು ಮೂಲದ ಬಾಬು ಕೆಪಿ ಮೃತಪಟ್ಟ ಕೈದಿ. ಚಿಕ್ಕಮಗಳೂರು ಜಿಲ್ಲಾ ಮತ್ತು ಸತ್ರ ನ್ಯಾಯಾಲಯದಿಂದ ಸಜಿ ಬಾಬು ಶಿಕ್ಷೆಗೆ ಗುರಿಯಾಗಿ 2025 ಆಗಸ್ಟ್ 22 ಕ್ಕೆ ಶಿವಮೊಗ್ಗ ಸೆಂಟ್ರಲ್
ಹಣದಾಸೆಗೆ ಹಾವು ಹಿಡಿಯಲು ಹೋಗಿ ಕಡಿತಕ್ಕೆ ಬಾಲಕ ಬಲಿ
ಹಾವು ಹಿಡಿದರೆ 500 ಸಿಗುತ್ತದೆ ಎಂಬ ಆಸೆಗೆ ಹಿಡಿಯಲು ಹೋದ ಹುಡುಗನನ್ನು ನಾಗರ ಹಾವು ಕಡಿದು ಆತ ಮೃತಪಟ್ಟಿರುವ ಘಟನೆ ಹೊಸಪೇಟೆ ನಗರದ ಮುದ್ಲಾಪುರ ಗ್ರಾಮದಲ್ಲಿ ನಡೆದಿದೆ. ಅಬ್ದುಲ್ ರಜಾಕ್ (17) ಹಾವು ಕಡಿತದಿಂದ ಮೃತಪಟ್ಟ ಹುಡುಗ. ಹಾವು ಕಚ್ಚಿರುವ ವೀಡಿಯೊ
ಶಿವಮೊಗ್ಗ ಅಂಬೇಡ್ಕರ್ ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯ ಅನುಮಾನಾಸ್ಪದ ಸಾವು
ಶಿವಮೊಗ್ಗದ ಕೋಟೆ ರಸ್ತೆಯಲ್ಲಿರುವ ಸಮಾಜ ಕಲ್ಯಾಣ ಇಲಾಖೆಯ ಡಾ. ಬಿ.ಆರ್ ಅಂಬೇಡ್ಕರ್ ಸರಕಾರಿ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ಬಿಎಸ್ಸಿ ವಿದ್ಯಾರ್ಥಿನಿ ಅನುಮಾಸ್ಪದವಾಗಿ ಮೃತಪಟ್ಟಿದ್ದಾಳೆ. ನಿಷಾ (21) ಮೃತ ವಿದ್ಯಾರ್ಥಿನಿ. ವಿದ್ಯಾರ್ಥಿ ನಿಲಯದ ಟೆರೆಸ್ ಮೇಲೆ ವನಿಷಾ ಶವ ನೇಣು
ವರದಕ್ಷಿಣೆ ಕಿರುಕುಳ ಆರೋಪ: ಚಿಕ್ಕಮಗಳೂರಿನಲ್ಲಿ ವಿಷ ಸೇವಿಸಿದ್ದ ಮಹಿಳೆ ಸಾವು
ಚಿಕ್ಕಮಗಳೂರು ಜಿಲ್ಲೆಯ ಎನ್ ಆರ್ ಪುರ ತಾಲೂಕಿನ ಮಾವಿನಕೆರೆ ಶೆಟ್ಟಿಕೊಪ್ಪದಲ್ಲಿ ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆಯೊಬ್ಬರು ವಿಷ ಸೇವಿಸಿದ್ದು, ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಪೂಜಾ ಎಂದು (30) ಮೃತಪಟ್ಟ ಮಹಿಳೆ ಎಂದು ಗುರುತಿಸಲಾಗಿದೆ. ತೀರ್ಥಹಳ್ಳಿಯ ಕೋಣಂದೂರು ಸಮೀಪದ ಶಂಕರಳ್ಳಿ
ಆಗುಂಬೆಯಲ್ಲಿ ಮತ್ತೆ ಕಾಡಾನೆ ಪ್ರತ್ಯಕ್ಷ
ಶಿವಮೊಗ್ಗ ಜಿಲ್ಲೆಯ ತಿರ್ಥಹಳ್ಳಿ ತಾಲೂಕಿನ ಆಗುಂಬೆ ಬಳಿಯ ಮಲಂದೂರಿನಲ್ಲಿ ಕಾಡಾನೆ ಪ್ರತ್ಯಕ್ಷವಾಗಿದೆ. ಕಾಡಾನೆ ತಡರಾತ್ರಿ ಗದ್ದೆಗೆ ನುಗ್ಗಿ ಬೆಳೆ ಹಾಳು ಮಾಡಿದೆ, ಕಾಡಾನೆ ಕಾಟದಿಂದ ಮಲೆನಾಡಿನ ರೈತರು ಕಂಗಾಲಾಗಿದ್ದಾರೆ. ಕಳೆದ ತಿಂಗಳು ಆಗುಂಬೆ ಐಬಿ ಬಳಿ ಕಾಡಾನೆ ಕಾಣಿಸಿಕೊಂಡಿತ್ತು. ಈಗ ಮತ್ತೊಮ್ಮೆ
ರಂಗಭೂಮಿ ಕಲಾವಿದ ನಿತಿನ್ ಶಿವಾಂಶ್ ಜೊತೆ ಗಾಯಕಿ ಸುಹಾನ ಮದುವೆ
ಸರಿಗಮಪ ರಿಯಾಲಿಟಿ ಶೋ ಮೂಲಕ ಕನ್ನಡಿಗರ ಮನ ಗೆದ್ದ ಗಾಯಕಿ ಶಿವಮೊಗ್ಗದ ಸುಹಾನ ಸೈಯದ್ ಸ್ನೇಹಿತ ಹಾಗೂ ರಂಗಭೂಮಿ ಕಲಾವಿದ ನಿತಿನ್ ಶಿವಾಂಶ್ ಅವರನ್ನು ಮದುವೆಯಾಗಿದ್ದಾರೆ. ಬಹಳ ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದ ಸುಹಾನಾ ಸೈಯದ್ ಮತ್ತು ನಿತಿನ್ ಶಿವಾಂಶ್, ಕುಟುಂಬದವರು ಮತ್ತು
ಪ್ರೀತಿಸುತ್ತಿದ್ದ ಜೋಡಿ ಮನೆಯವರ ವಿರೋಧಕ್ಕೆ ನೊಂದು ಆತ್ಮಹತ್ಯೆ ಯತ್ನ: ಯುವತಿ ಸಾವು
ಭದ್ರಾವತಿ ತಾಲೂಕಿನ ಅಂತರಗಂಗೆಯಲ್ಲಿ ಪ್ರೀತಿಗೆ ಕುಟುಂಬದವರು ವಿರೋಧಿಸುತ್ತಿದ್ದಾರೆಂದು ಮನನೊಂದ ಯುವಜೋಡಿ ಸಾಯಲೆಂದು ಕಾಲುವೆಗೆ ಹಾರಿದ್ದು, ಯುವತಿ ಮೃತಪಟ್ಟರೆ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಸ್ವಾತಿ (19) ಮೃತಪಟ್ಟ ಯುವತಿ. ಈಕೆಯೊಂದಿಗೆ ಆತ್ಮಹತ್ಯೆಗೆ ಯತ್ನಿಸಿ ಸೂರ್ಯ (20) ಬದುಕುಳಿದಿದ್ದು ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಬಿಜೆಪಿ ಸಂಸದರು ರಾಜ್ಯದ ನೀರಾವರಿ ಯೋಜನೆಗಳು, ಅನುದಾನಗಳ ಬಗ್ಗೆ ಬಾಯಿ ಬಿಡಲಿ: ಡಿಸಿಎಂ
“ಮೇಕೆದಾಟು, ಕಳಸಾ ಬಂಡೂರಿ, ಭದ್ರಾ ಮೇಲ್ದಂಡೆ ಅನುದಾನ, ಆಲಮಟ್ಟಿ ಎತ್ತರ ಹೆಚ್ಚಳಕ್ಕೆ ಅನುಮತಿ ಸೇರಿದಂತೆ ಕರ್ನಾಟಕದ ಪರವಾಗಿ ಬಿಜೆಪಿ ಸಂಸದರು ಬಾಯಿ ಬಿಡಬೇಕು. ಇಲ್ಲದಿದ್ದರೆ ರಾಜಿನಾಮೆ ನೀಡಿ ಮರು ಚುನಾವಣೆ ಎದುರಿಸಬೇಕು” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಸವಾಲೆಸೆದರು. ಲಕ್ಕವಳ್ಳಿಯ ಭದ್ರಾ
ಶಿಕಾರಿಪುರದಲ್ಲಿ ಕೆಲವೇ ದಿನಗಳಲ್ಲಿ ಮದುವೆಯಾಗಲಿದ್ದ ಜೋಡಿ ಅಪಘಾತಕ್ಕೆ ಬಲಿ
ಶಿಕಾರಿಪುರ ತಾಲೂಕಿನ ಅಂಬಾರಕೊಪ್ಪ ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ಕಳೆದ ತಿಂಗಳು ನಿಶ್ಚಿತಾರ್ಥ ಆಗಿದ್ದು, ಸದ್ಯದಲ್ಲೇ ಮದುವೆಯಾಗಲಿದ್ದ ಜೋಡಿ ಮೃತಪಟ್ಟಿದೆ. ಬೈಕ್ನಲ್ಲಿ ತೆರಳುತ್ತಿರುವಾಗ ಅಪಘಾತ ಸಂಭವಿಸಿದ್ದು, ಬಸವನಗೌಡ (24) ಹಾಗೂ ರೇಖಾ (22) ಮೃತಪಟ್ಟವರು. ಈ ಜೋಡಿಗೆ ಶ್ರಾವಣ ಮಾಸದಲ್ಲಿ ನಿಶ್ಚಿತಾರ್ಥವಾಗಿತ್ತು.




