Menu

ರಾಜ್ಯದ ಹಲವೆಡೆ ಮುಂದುವರಿದಿದೆ ಧಾರಾಕಾರ ಮಳೆ

ರಾಜ್ಯದ ಹಲವೆಡೆ ಭಾರಿ ಮಳೆ ಮುಂದುವರಿದಿದೆ, ಮಲೆನಾಡಿನ ಕೆರೆಕಟ್ಟೆ ಘಟ್ಟ ಪ್ರದೇಶದಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ಒಂದೇ ರಾತ್ರಿಗೆ ತುಂಗಾ ನದಿ ನೀರಿನ ಮಟ್ಟದಲ್ಲಿ ತೀವ್ರ ಏರಿಕೆಯಾಗಿದೆ. ಶೃಂಗೇರಿಯ ಗಾಂಧಿಮೈದಾನದ ರಸ್ತೆಯಲ್ಲಿ ನೀರು ತುಂಬಿದ್ದು, ಪೊಲೀಸರು ರಸ್ತೆ ಬಂದ್‌ಗೊಳಿಸಿ ಬ್ಯಾರಿಕೇಡ್‌ ಹಾಕಿದ್ದಾರೆ. ಶಿವಮೊಗ್ಗದ ಸಾಗರ ತಾಲೂಕಿನಲ್ಲಿ ಮಳೆ ತೀವ್ರಗೊಂಡಿದ್ದು, ಶಾಲಾ- ಕಾಲೇಜಿಗೆ ರಜೆ ಘೋಷಣೆ ಮಾಡಲಾಗಿದೆ. ತೀರ್ಥಹಳ್ಳಿ, ಹೊಸನಗರದಲ್ಲಿ ಧಾರಾಕಾರ ಮಳೆ ಸುರಿಯುತ್ತಿದೆ. ತೀರ್ಥಹಳ್ಳಿ ಹಾಗೂ ಹೊಸನಗರ ತಾಲೂಕಿನಲ್ಲಿ ಶಾಲೆ-ಕಾಲೇಜಿಗೆ ರಜೆ

ಮಂಗಳೂರಿನ ಬ್ಯಾಂಕ್‌ನಲ್ಲಿ ಅಡವಿಟ್ಟ ಚಿನ್ನ ಎಗರಿಸಿದ ಕ್ಯಾಷಿಯರ್‌

ಮಂಗಳೂರಿನ ಸಹಕಾರಿ ಬ್ಯಾಂಕ್‌ವೊಂದರಲ್ಲಿ ಗ್ರಾಹಕರು ಅಡವಿಟ್ಟ ಚಿನ್ನವನ್ನು ಕ್ಯಾಷಿಯರ್ ಎಗರಿಸಿ ಬೇರೊಂದು ಬ್ಯಾಂಕ್‌ನಲ್ಲಿ ಅಡವಿಟ್ಟು ಕೋಟ್ಯಂತರ ರೂಪಾಯಿ ಸಾಲ ಪಡೆದು ಮಜಾ ಮಾಡಿ ಸಿಕ್ಕಿಬಿದ್ದಿದ್ದಾನೆ. ಶಕ್ತಿನಗರದ ಪದುವ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನಲ್ಲಿ ಕ್ಯಾಷಿಯರ್ ಪ್ರೀತೇಶ್ ಗ್ರಾಹಕರು ಸಾಲಕ್ಕಾಗಿ ಚಿನ್ನ ಅಡವಿಟ್ಟಾಗ

Israel-Iran crisis: ಮಂಗಳೂರಿನಿಂದ ಕೊಲ್ಲಿ ರಾಷ್ಟ್ರಗಳಿಗೆ ವಿಮಾನಗಳ ಸಂಚಾರ ವ್ಯತ್ಯಯ

ಇರಾನ್‌ ಕತಾರ್​ನಲ್ಲಿರುವ ಅಮೇರಿಕದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ಬಳಿಕ ಮಧ್ಯಪ್ರಾಚ್ಯ ದೇಶಗಳು ವಾಯುಮಾರ್ಗ ಬಂದ್ ಮಾಡಿದ್ದರಿಂದ ಮಂಗಳೂರಿನಿಂದ ವಿಮಾನಗಳ ಹಾರಾಟ ವ್ಯತ್ಯಯಗೊಂಡಿದೆ. ಇರಾನ್‌ ಮತ್ತು ಇಸ್ರೇಲ್‌ ನಡುವಿನ ಕದನದಲ್ಲಿ ಮಧ್ಯೆ ಪ್ರವೇಶಿಸಿದ ಅಮೆರಿಕ ಇರಾನ್‌ನ ಪರಮಾಣು ನೆಲೆಗಳ

ಪಂಚಾಯತ್ ಸಭೆಗಳಲ್ಲಿ ತುಳು ಭಾಷೆಗೆ ನಿರ್ಬಂಧ: ಆಕ್ರೋಶದ ಬೆನ್ನಲ್ಲೇ ಆದೇಶ ವಾಪಸ್

ಕರ್ನಾಟಕದ ಮಂಗಳೂರು ಸೇರಿದಂತೆ ಕರಾವಳಿಯಲ್ಲಿ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಗಳಲ್ಲಿ ತುಳು ಭಾಷೆ ಬಳಕೆಗೆ ನಿರ್ಬಂಧ ವಿಧಿಸಿರುವುದು ವಿವಾದಕ್ಕೆ ಕಾರಣವಾಗಿದ್ದು, ವ್ಯಾಪಕ ಆಕ್ರೋಶ ವ್ಯಕ್ತವಾದ ಬಳಿಕ ನಿರ್ಬಂಧ ವಾಪಸ್‌ ಪಡೆಯಲಾಗಿದೆ. ದಕ್ಷಿಣಕನ್ನಡ ಜಿಲ್ಲೆಯ ಎಲ್ಲಾ ತಾಲೂಕು ಪಂಚಾಯತ್ ಕಾರ್ಯನಿರ್ವಾಹಣಾಧಿಕಾರಿಗಳಿಗೆ ನಿರ್ಬಂಧ ವಿಧಿಸುವಂತೆ

ಹಳಿ ಮೇಲೆ ಗುಡ್ಡ ಕುಸಿತ, ತಪ್ಪಿದ ಅನಾಹುತ: ಮಂಗಳೂರು, ಕಣ್ಣೂರು, ಮುರ್ಡೇಶ್ವರ ರೈಲು ಸ್ಥಗಿತ

ಧಾರಾಕಾರ ಸುರಿದ ಮಳೆಗೆ ಸಕಲೇಶಪುರದ ಎಡಕುಮೇರು ಬಳಿ ರೈಲು ಹಳಿ ಮೇಲೆ ಗುಡ್ಡ ಕುಸಿದಿದೆ. ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ರೈಲು ಬಂಡೆ ಬಿದ್ದಿರುವ ಸ್ಥಳದಿಂದ ಸ್ವಲ್ಪ ದೂರ ನಿಲುಗಡೆಯಾಗಿದೆ. ಲೋಕೋ ಪೈಲಟ್ ಸಮಯ ಪ್ರಜ್ಞೆಯಿಂದ ಬಾರಿ ಅನಾಹುತ ತಪ್ಪಿದೆ. ರೈಲು ಸ್ಥಗಿತಗೊಂಡಿದ್ದರಿಂದ

ಬಂಟ್ವಾಳದಲ್ಲಿ ಗರ್ಭಿಣಿ ಮತ್ತು ಪತಿಯ ಶವ ಪತ್ತೆ, ಕೊಲೆಗೈದು ಆತ್ಮಹತ್ಯೆಯ ಶಂಕೆ

ದಕ್ಷಿಣ ಕನ್ನಡದ ಬಂಟ್ವಾಳ ತಾಲೂಕಿನ ನಾವೂರು ಬಡಗುಂಡಿಯಲ್ಲಿ ಸಜೀಪಮೂಡ ಗ್ರಾಮದ ಮಿತ್ತಮಜಲು ನಿವಾಸಿ ತಿಮ್ಮಪ್ಪ ಮೂಲ್ಯ ಹಾಗೂ ಪತ್ನಿ ಜಯಂತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ತಿಮ್ಮಪ್ಪ ಮೂಲ್ಯ ಮೃತದೇಹ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿದ್ದರೆ, ಪತ್ನಿಯ ಮೃತದೇಹದ ಕುತ್ತಿಗೆ ಭಾಗದಲ್ಲಿ ಗಾಯದ ಗುರುತುಗಳಿವೆ.

NHRC: ಹಿಂದೂ ಕಾರ್ಯಕರ್ತರ ಮನೆಗಳಿಗೆ ರಾತ್ರಿ ಪೊಲೀಸ್‌ ಭೇಟಿ- ಮಾನವ ಹಕ್ಕು ಆಯೋಗ ತನಿಖೆ

ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಹಿಂದೂ ಕಾರ್ಯಕರ್ತರ ಮನೆಗಳಿಗೆ ಪೊಲೀಸರ ರಾತ್ರಿ ಭೇಟಿಯ ಬಗ್ಗೆ ದಾಖಲಾದ ದೂರಿನ ಹಿನ್ನೆಲೆಯಲ್ಲಿ ರಾಷ್ಟ್ರೀಯ ಮಾನವ ಹಕ್ಕು ಆಯೋಗ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸರ ವಿರುದ್ಧ ತನಿಖೆಗೆ ಆದೇಶ ನೀಡಿದೆ. ಮಂಗಳೂರು ಉತ್ತರ ಕ್ಷೇತ್ರದ ಬಿಜೆಪಿ

Accident Deaths: ಮಂಗಳೂರಿನಲ್ಲಿ ಹೆದ್ದಾರಿ ತಡೆಗೋಡೆಗೆ ಕಾರು ಬಡಿದು ಇಬ್ಬರ ಸಾವು

ಮಂಗಳೂರಿನ ಜೆಪ್ಪಿನಮೊಗರು ರಾಷ್ಟ್ರೀಯ ಹೆದ್ದಾರಿಯಲ್ಲಿ ತಡರಾತ್ರಿ‌ ಹೆದ್ದಾರಿ ತಡೆಗೋಡೆಗೆ ಕಾರು ಬಡಿದು ಇಬ್ಬರು ಯುವಕರು ಮೃತಪಟ್ಟಿದ್ದಾರೆ. ಎನ್ಎಸ್ ಯುಐ ಮುಖಂಡ ಓಂ ಶ್ರೀ ಹಾಗೂ ಕದ್ರಿ‌ ನಿವಾಸಿ ಅಮನ್ ರಾವ್ ಮೃತ ಯುವಕರು. ಚಾಲಕನ ಅತಿ ವೇಗದಿಂದ ತಡೆಗೋಡೆಗೆ ಬಡಿದ ಕಾರು

ಮಂಗಳೂರಿನಲ್ಲಿ ಬೀಡಿ ತುಂಡು ನುಂಗಿ ಬಿಹಾರ ದಂಪತಿಯ ಮಗು ಸಾವು

ತಂದೆಯೊಬ್ಬ ಮನೆಯೊಳಗೆ ಬೀಡಿ ಸೇದಿ ಉಳಿದ ತುಂಡನ್ನು ಮನೆಯೊಳಗೆ ಬಿಸಾಡಿರುವುದನ್ನು ನುಂಗಿದ ಮಗು ಮೃತಪಟ್ಟ ಘಟನೆ ಮಂಗಳೂರಿನಲ್ಲಿ ನಡೆದಿದೆ. ಅಡ್ಯಾರ್‌ನಲ್ಲಿ ವಾಸಿಸುತ್ತಿದ್ದ ಬಿಹಾರ ಮೂಲದ ದಂಪತಿಯ ಮಗು ಅನೀಶ್‌ ಮೃತಪಟ್ಟಿದೆ. ಬೀಡಿ ತುಂಡು ಗಂಟಲಲ್ಲಿ ಸಿಲುಕಿಕೊಂಡು ಅಸ್ವಸ್ಥಗೊಂಡಿದ್ದ ಮಗು ವನ್ನು ವೆನ್ಲಾಕ್‌

Rain Landslide: ಮಳೆಯಿಂದ ಮಂಗಳೂರು‌ ಕೆತ್ತಿಕಲ್‌ ಗುಡ್ಡ ಕುಸಿತ: ರಸ್ತೆ ಬಂದ್‌

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದೆರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿದ್ದು, ಮಂಗಳೂರು‌ ಹೊರವಲಯದ ವಾಮಂಜೂರು ಸಮೀಪದ ಕೆತ್ತಿಕಲ್‌ನಲ್ಲಿ ಗುಡ್ಡ ಕುಸಿತ‌ವಾಗಿದೆ. ಗುಡ್ಡ ಕುಸಿದು ಒಂದು ಬದಿಯ ರಸ್ತೆ ಸಂಪೂರ್ಣ ಬಂದ್ ಆಗಿದೆ. ರಾಷ್ಟ್ರೀಯ ಹೆದ್ದಾರಿ 169 ಸಂಪರ್ಕಿಸುವ ಮಂಗಳೂರು-ಮೂಡಬಿದ್ರೆ-ಕಾರ್ಕಳ ರಸ್ತೆ ಇದಾಗಿದ್ದು, ಬಂಡೆ