Menu

Rain Death: ವಿಜಯಪುರದಲ್ಲಿ ಮಳೆಗೆ ಚಾವಣಿ ಕುಸಿದು ಮಲಗಿದ್ದಲ್ಲೇ ಮಹಿಳೆ ಸಾವು

ವಿಜಯಪುರದಲ್ಲಿ ಭಾನುವಾರ ರಾತ್ರಿಯಿಡಿ ಸುರಿದ ಭಾರೀ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಮನೆಯಲ್ಲಿ ಮಲಗಿದ್ದ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ತಿಕೋಟಾ ತಾಲೂಕಿನ ಬಾಬಾನಗರದಲ್ಲಿ ಈ ದುರಂತ ಸಂಭವಿಸಿದ್ದು, ಸಂಗೀತಾ ಬಾಳಾಸಾಹೇಬ ಪಾಟೀಲ್ (30) ಮೃತ ಮಹಿಳೆ. ಭಾನುವಾರ ತಡರಾತ್ರಿ ಮನೆಯಲ್ಲಿ ಮಲಗಿದ್ದಾಗ ಮೇಲ್ಛಾವಣಿ ಕುಸಿದು ಸಂಗೀತಾ ಅವರ ಮೇಲೆ ಬಿದ್ದು ಈ ಸಾವು ಸಂಭವಿಸಿದೆ. ಮಳೆಯಿಂದಾಗಿ ಮನೆ ಸೋರುತ್ತಿದ್ದು, ಮನೆಯಿಂದ ಎದ್ದು ಹೊರ ಬಂದ ಪತಿ ಹಾಗೂ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.

ಬೆಲೆ ಕುಸಿತ: ವಿಜಯಪುರದಲ್ಲಿ ಈರುಳ್ಳಿ ರಸ್ತೆಗೆ ಚೆಲ್ಲಿ ರೈತರ ಪ್ರತಿಭಟನೆ

ಈರುಳ್ಳಿ ಬೆಲೆ ಕುಸಿತಗೊಂಡಿದ್ದರಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರು ತೀವ್ರ ಆಕ್ರೋಶಗೊಂಡು ತಾವು ಬೆಳೆದ ಈರುಳ್ಳಿಯನ್ನು ರಸ್ತೆಗೆ ಸುರಿದು ಪ್ರತಿಭಟನೆ ನಡೆಸಿದ್ದಾರೆ. ಕ್ವಿಂಟಾಲ್‌ಗೆ 250 ರೂಪಾಯಿ ದರ ನಿಗದಿಯಾಗಿರುವುದರಿಂದ ಆಕ್ರೋಶಗೊಂಡ ರೈತರಾದ ನಂದಪ್ಪ ಗುಡ್ಡದ ಮತ್ತು ಮಲ್ಲಿಕಾರ್ಜುನ ಗೋಲಗೊಂಡ ವಿಜಯಪುರ ಜಿಲ್ಲೆಯ ಕೊಲ್ಹಾರ

ಕಾಟನ್‌ಪೇಟೆಯಲ್ಲಿ ಮಹಿಳೆಯ ಕೊಲೆಗೈದಿರುವ ಸಂಬಂಧಿಕರು ಅರೆಸ್ಟ್‌

ಬೆಂಗಳೂರಿನ ಕಾಟನ್‌ಪೇಟೆಯಲ್ಲಿ ಮನೆಗೆ ನುಗ್ಗಿ ಮಹಿಳೆಯ ಕೊಂದು ಚಿನ್ನಾಭರಣ, ನಗದು ದೋಚಿ ಪರಾರಿಯಾಗಿದ್ದ ಪ್ರಕರಣದ ಆರೋಪಿಗಳಿಬ್ಬರು ಮೃತ ಮಹಿಳೆಯ ಸಂಬಂಧಿಗಳೇ ಆಗಿದ್ದು, ಪೊಲೀಸರು ಬಂಧಿಸಿದ್ದಾರೆ. ಬೀದರ್‌ನ ಮಹಿಳೆ ಲತಾ ಎಂಬ ಮಹಿಳೆಯ ಕೊಲೆ ಪ್ರಕರಣವನ್ನು ಪೊಲೀಸರು ಭೇದಿಸಿದ್ದು, ಪುರಂದರ ಮತ್ತು ಆತನ

ಬಸವನಬಾಗೇವಾಡಿಯಲ್ಲಿ ವಾಮಾಚಾರ ನಡೆಸಿ ಬ್ಯಾಂಕ್‌ ದರೋಡೆ

ಬ್ಯಾಂಕ್ ಬಾಗಿಲಿನ ಬೀಗ ಮುರಿದು ಕಿಟಕಿಯ ಬಾರ್​ಗಳನ್ನು ತುಂಡರಿಸಿ ಒಳಗೆ ನುಗ್ಗಿದ ಕಳ್ಳರು ಮೊದಲು ವಾಮಾಚಾರ ಮಾಡಿ ಹಣ ಮತ್ತು ಚಿನ್ನಾಭರಣ ದೋಚಿಕೊಂಡು ಪರಾರಿಯಾಗಿರುವ ಘಟನೆ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಪಟ್ಟಣದಲ್ಲಿರುವ ರಾಷ್ಟ್ರೀಕೃತ ಕೆನರಾ ಬ್ಯಾಂಕ್​ನಲ್ಲಿ ನಡೆದಿದೆ. ಮರುದಿನ ಬ್ಯಾಂಕ್​ನಲ್ಲಿ ಕಸಗೂಡಿಸಲು

ಕಾಟನ್ ಪೇಟೆಯಲ್ಲಿ ಮಹಿಳೆಯ ಹತ್ಯೆಗೈದು ಹಣ, ಚಿನ್ನಾಭರಣ ಕಳವು

ಬೆಂಗಳೂರಿನ ಕಾಟನ್ ಪೇಟೆ ಪ್ರದೇಶದ ದರ್ಗಾ ರಸ್ತೆಯ ಮನೆಯಲ್ಲಿ 40 ವರ್ಷದ ಮಹಿಳೆಯೊಬ್ಬರನ್ನು ಬರ್ಬರವಾಗಿ ಕೊಲೆ ಮಾಡಿ 1 ಕೋಟಿ ರೂ. ಮೌಲ್ಯದ ಚಿನ್ನಾಭರಣ, ನಗದು ಕದ್ದು ಹಂತಕ ಪರಾರಿಯಾಗಿದ್ದಾನೆ. ಲತಾ (40) ಕೊಲೆಯಾದ ಮಹಿಳೆ ಎಂದು ಗುರುತಿಸಲಾಗಿದೆ. ಲತಾ ಬೀದರ್

ಅಥಣಿಯಲ್ಲಿ ಮಕ್ಕಳಾಗಿಲ್ಲವೆಂದು ಸೊಸೆಯನ್ನು ಕೊಂದ ಅತ್ತೆ ಮಾವ

ಸೊಸೆಗೆ ಮಕ್ಕಳಾಗಿಲ್ಲವೆಂದು ಆಕೆಯನ್ನು ಅತ್ತೆ ಮತ್ತು ಮಾವ ಸೇರಿ ಕೊಲೆ ಮಾಡಿರುವ ಘಟನೆ ಅಥಣಿ ತಾಲೂಕಿನ ಮಲ್ಲಬಾದ್ ಗ್ರಾಮದಲ್ಲಿ ನಡೆದಿರುವುದು ಬಹಿರಂಗಗೊಂಡಿದೆ. ಚಡಚಣದ ನಿವಾಸಿ ರೇಣುಕಾ ಹೊನಕುಂಡೆ ಕೊಲೆಯಾದವರು. ರೇಣುಕಾಳ ಪತಿ ಸಂತೋಷ್‌ನ ತಂದೆ ಕಾಮಣ್ಣ, ತಾಯಿ ಜಯಶ್ರೀ ಕೊಲೆ ಮಾಡಿದವರು.

ಇಳಕಲ್‌ನಲ್ಲಿ ಆಸ್ಪತ್ರೆಗೆ ಬಂದು ಗಾಯ ತೋರಿಸಿ ಚಿಕಿತ್ಸೆ ಪಡೆದ ಮಂಗ

ಬಾಗಲಕೋಟೆ ಜಿಲ್ಲೆಯ ಇಳಕಲ್‌ ತಾಲೂಕಿನ ಗೂಡೂರಿನಲ್ಲಿ ಗಾಯಾಳು ಮಂಗವೊಂದು  ಪಶು ವೈದ್ಯಕೀಯ  ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು ವಾಪಸ್‌ ಹೋಗಿದೆ. ಗೂಡೂರು ಎಸ್ ಸಿ ಪಶುವೈದ್ಯಕೀಯ ಆಸ್ಪತ್ರೆಗೆ ಬಂದ ಮಂಗ ಬೈಕ್‌ ಮೇಲೆ ನಿಂತುಕೊಂಡು ಗುದದ್ವಾರಕ್ಕೆ ಗಾಯವಾಗಿ ನೋವಾಗಿರುವುದನ್ನು ಕೈ ಸನ್ನೆಯಲ್ಲಿ

ಪಾಕ್‌ಗೆ ಕ್ಷಿಪಣಿ ನೆರವು: ವಿಜಯಪುರ ರೈತರಿಂದ ಟರ್ಕಿ ಬೈಕಾಟ್‌ ಅಭಿಯಾನ

ಭಾರತವು ಆಪರೇಷನ್‌ ಸಿಂಧೂರ ಕಾರ್ಯಾಚರಣೆ ನಡೆಸುವಾಗ ಪಾಕಿಸ್ತಾನ‌ಕ್ಕೆ ಕ್ಷಿಪಣಿ ಪೂರೈಸಿ ನೆರವು ನೀಡಿರುವ ಟರ್ಕಿ ವಿರುದ್ಧ ವಿಜಯಪುರದಲ್ಲಿ ಬೈಕಾಟ್ ಟರ್ಕಿ ಅಭಿಯಾನ ನಡೆಯುತ್ತಿದೆ. ಅರ್ಕಿಗೆ ಕೃಷಿ ಉತ್ಪನ್ನ ರಪ್ತು ನಿಷೇಧ ಹೋರಾಟಕ್ಕೆ ವಿಜಯಪುರ ಜಿಲ್ಲೆಯ ರೈತರು ಮುದಾಗಿ, ಜಿಲ್ಲೆಯಿಂದ ಹಣ್ಣು ಮತ್ತು

ಮೈಸೂರಲ್ಲಿ ಮಹಿಳೆಗೆ ಬ್ಲಾಕ್ ಮೇಲ್ ಮಾಡಿ 1.5 ಲಕ್ಷ ವಸೂಲಿ ಮಾಡಿದ್ದಾತ ಸೆರೆ

ಹುಣಸೂರು ನಗರದ ಮಹಿಳೆಗೆ ಬ್ಲ್ಯಾಕ್ ಮೇಲ್ ಮಾಡಿ 1.5 ಲಕ್ಷ ರೂಪಾಯಿ ವಸೂಲಿ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಸೋಗಿ ಗ್ರಾಮದ ವೀರೇಶ್ ಕುಮಾರ್ 28 ಬಂಧಿತ ಆರೋಪಿ. ಆರೋಪಿಯು ವಾಟ್ಸಪ್ ಮೂಲಕ ಪರಿಚಯವಾಗಿದ್ದ

ಸ್ಟೋನ್ ಕ್ರಷರ್ ವಿಚಾರಕ್ಕೆ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ

ವಿಜಯಪುರದಲ್ಲಿ ಸ್ಟೋನ್ ಕ್ರಷರ್ ವಿಚಾರವಾಗಿ ಎರಡು ಗುಂಪುಗಳ ನಡುವೆ ಕಲ್ಲು ತೂರಾಟ ನಡೆದಿದ್ದು, ಸೋಷಿಯಲ್ ಮೀಡಿಯಾದಲ್ಲಿ ಕಲ್ಲು ತೂರಾಟದ ವೀಡಿಯೊಗಳು ವೈರಲ್‌ ಆಗಿವೆ. ಕೊಲ್ಹಾರ ಪಟ್ಟಣದ ರೈತ ಸಂಪರ್ಕ ಕೇಂದ್ರದ ಮುಂಭಾಗದಲ್ಲಿ ಸ್ಟೋನ್ ಕ್ರಷರ್ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದ