Menu

ತಿರುಪತಿ ತಿಮ್ಮಪ್ಪನಿಗೆ 121 ಕೆಜಿ ಚಿನ್ನ ದಾನ ಮಾಡಿದ ಉದ್ಯಮಿ!

ತಿರುಪತಿ ತಿರುಮಲದ ಪ್ರಸಿದ್ಧ ಶ್ರೀ ವೆಂಕಟೇಶ್ವರ ಸ್ವಾಮಿಗೆ ಕೈಗಾರಿಕೋದ್ಯಮಿ 140 ಕೋಟಿ ರೂಪಾಯಿಗೂ ಹೆಚ್ಚು ಮೌಲ್ಯದ 121 ಕೆ.ಜಿ ಬಂಗಾರ ದಾನ ಮಾಡಿದ್ದಾರೆ. ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಗುರುವಾರ ಮಾಧ್ಯಮಗಳಿಗೆ ಈ ವಿಷಯ ತಿಳಿಸಿದ್ದು, ಕೈಗಾರಿಕೋದ್ಯಮಿ ಶ್ರೀವಾರಿ ತಮ್ಮ ಕಂಪನಿಯ ಶೇ.60ರಷ್ಟು ಷೇರುಗಳನ್ನು ಮಾರಾಟ ಮಾಡಿ 6,000ರಿಂದ 7,000 ಕೋಟಿ ರೂ. ಹಣ ಗಳಿಸಿದರು ಎಂದು ಅವರು ತಿಳಿಸಿದರು. ತಾವೇ ಸ್ಥಾಪಿಸಿದ ಕಂಪನಿ ಷೇರುಗಳ ಮಾರಾಟದಿಂದ ಇಷ್ಟು ದೊಡ್ಡ

ಸರ್ಕಾರಿ ನಿಧಿ ದುರುಪಯೋಗ: ಶ್ರೀಲಂಕಾ ಮಾಜಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅರೆಸ್ಟ್‌

ಶ್ರೀಲಂಕಾದ ಮಾಜಿ ಅಧ್ಯಕ್ಷ ರನಿಲ್ ವಿಕ್ರಮಸಿಂಘೆ ಅವರನ್ನು ಸರ್ಕಾರಿ ನಿಧಿ ದುರುಪಯೋಗ ಆರೋಪದಡಿ ಅಪರಾಧ ತನಿಖಾ ಇಲಾಖೆ ಬಂಧಿಸಿದೆ. 2023 ರ ಸೆಪ್ಟೆಂಬರ್‌ನಲ್ಲಿ ಬ್ರಿಟಿಷ್ ವಿಶ್ವವಿದ್ಯಾಲಯವೊಂದರಲ್ಲಿ ನಡೆದ ತಮ್ಮ ಪತ್ನಿ ಪ್ರೊಫೆಸರ್ ಮೈತ್ರೀ ವಿಕ್ರಮಸಿಂಘೆ ಅವರ ಘಟಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಲು, ಇಂಗ್ಲೆಂಡ್‌ಗೆ

ಮರವೇರಿ ಸಂಸತ್ ಭವನ ಅಕ್ರಮವಾಗಿ ಪ್ರವೇಶಿಸಿದ ವ್ಯಕ್ತಿ ಅರೆಸ್ಟ್

ನವದೆಹಲಿ: ವ್ಯಕ್ತಿಯೊಬ್ಬ ಮರವನ್ನು ಬಳಸಿ ಗೋಡೆ ದಾಟಿ ಸಂಸತ್ ಭವನದ ಆವರಣ ಪ್ರವೇಶಿಸಿರುವ ಘಟನೆ ಶುಕ್ರವಾರ ಬೆಳಗ್ಗೆ 6. 30ಕ್ಕೆ ನಡೆದಿದೆ. ದುಷ್ಕರ್ಮಿ ರೈಲು ಭವನದಿಂದ ಗರುಡ ದ್ವಾರ ತಲುಪಿದ್ದಾನೆ. ಒಳನುಗ್ಗಿದ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ. ಆತನನ್ನು ವಿಚಾರಣೆ ನಡೆಸಲಾಗುತ್ತಿದೆ

ಬೀದಿನಾಯಿಗಳಿಗೆ ಆಶ್ರಯತಾಣ: ನೀಡಿದ್ದ ಆದೇಶಕ್ಕೆ ತಿದ್ದುಪಡಿ ಮಾಡಿದ ಸುಪ್ರೀಂ

ಬೀದಿ ನಾಯಿಗಳಿಗೆ ಶಾಶ್ವತ‌ ಆಶ್ರಯ ತಾಣ ರೂಪಿಸಿ ಸ್ಥಳಾಂತರಿಸಬೇಕೆಂಬ ತನ್ನ ಆದೇಶದಲ್ಲಿ ಸುಪ್ರೀಂಕೋರ್ಟ್‌ ತಿದ್ದುಪಡಿ ತಂದಿದೆ. ಬೀದಿ ನಾಯಿಗಳನ್ನು ಹಿಡಿದು ಸಂತಾನಹರಣ ಶಸ್ತ್ರಚಿಕಿತ್ಸೆ ನಡೆಸಿ ಅವುಗಳನ್ನು ಬಿಡಬೇಕು, ಆಕ್ರಮಣಕಾರಿ, ಅನಾರೋಗ್ಯ ಇರುವ ನಾಯಿಗಳನ್ನು ಮಾತ್ರ ಆಶ್ರಯ ತಾಣಗಳಿಗೆ ಸ್ಥಳಾಂತರಿಸಬೇಕೆಂದು ಸರ್ವೋಚ್ಛ ನ್ಯಾಯಾಲಯ

ಅಮೆರಿಕದಲ್ಲಿ ಭೂಕಂಪನ, ಸುನಾಮಿ ಭೀತಿ

ಅಮೆರಿಕದ ದಕ್ಷಿಣ ಭಾಗದ ಡ್ರೇಕ್ ಪ್ಯಾಸೇಜ್ ಪ್ರದೇಶದಲ್ಲಿ ಶುಕ್ರವಾರ ಪ್ರಬಲ ಭೂಕಂಪ ಸಂಭವಿಸಿದ್ದು, ತೀವ್ರತೆ ರಿಕ್ಟರ್ ಮಾಪಕದಲ್ಲಿ 7.5 ರಷ್ಟು ದಾಖಲಾಗಿದೆ. ಭೂಕಂಪದ ನಂತರ ಸುನಾಮಿ ಭೀತಿ ಎದುರಾಗಿದೆ ಎಂದು ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರ ಮಾಹಿತಿ ನೀಡಿದೆ. ಡ್ರೇಕ್ ಪ್ಯಾಸೇಜ್ ದಕ್ಷಿಣ

ಕೃಷ್ಣಾ ಮೇಲ್ದಂಡೆ ಯೋಜನೆಗೆ ಆಂಧ್ರ ಮತ್ತು ಮಹಾರಾಷ್ಟ್ರ ಅಡ್ಡಿ: ಡಿಸಿಎಂ

“ಕೃಷ್ಣಾ ಮೇಲ್ದಂಡೆ ಯೋಜನೆಗೆ ಅಧಿಸೂಚನೆಗೆ ಒಮ್ಮೆ ಆಂಧ್ರ ಪ್ರದೇಶ ಮತ್ತೊಮ್ಮೆ ಮಹಾರಾಷ್ಟ್ರದವರು ಕೇಂದ್ರದ ಮೇಲೆ ಒತ್ತಡ ತಂದು ನಿಲ್ಲಿಸಿದರು” ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಹೇಳಿದ್ದಾರೆ.  ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಪಿ.ಎಚ್.ಪೂಜಾರ್ ಅವರು ಕೃಷ್ಣಾ ಮೇಲ್ದಂಡೆ ಯೋಜನೆಯ ಪ್ರಗತಿಯ ವಿಚಾರವಾಗಿ

ಆನ್ ಲೈನ್ ಗೇಮಿಂಗ್ ನಿಷೇಧ: ನಿಯಮ ಉಲ್ಲಂಘಿಸಿದರೆ 3 ವರ್ಷ ಜೈಲು

ನವದೆಹಲಿ: ದೇಶದಲ್ಲೊ ವ್ಯಾಪಕವಾಗುತ್ತಿರುವ ಗೇಮಿಂಗ್ ಆಪ್ ನಿಷೇಧಕ್ಕೆ ಕೇಂದ್ರ‌ ಸರ್ಕಾರ ಮುಂದಾಗಿರುವುದು ವಾರ್ಷಿಕ 9.1 ಬಿಲಿಯನ್ ಡಾಲರ್‌ ವಹಿವಾಟು ನಡೆಸುವ ಉದ್ಯಮಕ್ಕೆ ಭಾರೀ ಆಘಾತ ತಂದಿದೆ. ಗೇಮಿಂಗ್‌ ಆಪ್‌ ನಿಷೇಧಿಸುವ ಮಸೂದೆ ಸಂಸತ್ತಿನಲ್ಲಿ ಅಂಗೀಕೃತವಾದರೆ, ಹಣ ಆಧಾರಿತ ಆನ್‌ ಲೈನ್‌ ಗೇಮಿಂಗ್‌

ಹೈದರಾಬಾದ್‌ನಲ್ಲಿ ಕಲಬುರಗಿ ಕುಟುಂಬದ ಐವರ ಶಂಕಾಸ್ಪದ ಸಾವು

ಹೈದರಾಬಾದ್‌ನ ಮಿಯಾಪುರ ಮಕ್ತಾ ಮಹಬೂಬ್‌ಪೇಟೆಯಲ್ಲಿ ಕಲಬುರಗಿಯ ಒಂದೇ ಕುಟುಂಬದ ಐವರು ಮೃತಪಟ್ಟಿದ್ದು, ಆತ್ಮಹತ್ಯೆಯ ಶಂಕೆ ವ್ಯಕ್ತವಾಗಿದೆ. ಸ್ಥಳೀಯರಿಂದ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಮೃತರನ್ನು ನರಸಿಂಹ (60), ವೆಂಕಟಮ್ಮ (55), ಅನಿಲ್ (32), ಕವಿತಾ (24), ಮತ್ತು

ಆಂಧ್ರಪ್ರದೇಶದಿಂದ ಹುಡುಗರ ಕರೆ ತಂದು ಬೆಂಗಳೂರಲ್ಲಿ ಮೊಬೈಲ್‌ ಕಳವು: ಗ್ಯಾಂಗ್‌ ಅರೆಸ್ಟ್‌

ಬೆಂಗಳೂರಿನಲ್ಲಿ ಮೊಬೈಲ್ ಸ್ನಾಚಿಂಗ್ ಮಾಡಲೆಂದೇ ಆಂಧ್ರಪ್ರದೇಶದಿಂದ ಹುಡುಗರ ಕರೆ ತಂದು ಕಳ್ಳತನ ಮಾಡಿಸುತ್ತಿದ್ದ   ಪ್ರಕರಣ ಬೇಧಿಸಿದ ಪೊಲೀಸರು  ಆರೋಪಿಗಳನ್ನು ಬಂಧಿಸಿದ್ದಾರೆ. ನಾಗನೂರಿ ಕುಮಾರ್, ಸಾಗರ್, ಶಿವಕುಮಾರ್, ಶಿವಶಂಕರ್, ಗುಡ್ಡಸಾಬ್ ಹಾಗೂ ಹಾಲಪ್ಪ ಬಂಧಿತ ಆರೋಪಿಗಳು. ದುಡ್ಡಿನ ಅವಶ್ಯಕತೆ ಇರುವ ಕುಟುಂಬಗಳಿಗೆ ಹಣ

30 ದಿನ ಜೈಲಲ್ಲಿದ್ದರೆ ಪ್ರಧಾನಿ, ಸಿಎಂ ಪದಚ್ಯುತಿ: ಕೇಂದ್ರದಿಂದ ವಿವಾದಾತ್ಮಕ ಮಸೂದೆ ಮಂಡನೆ

ನವದೆಹಲಿ: ಆರೋಪ ಸಾಬೀತಾಗದೇ ಇದ್ದರೂ ವಿಚಾರಣೆ ಹಂತದಲ್ಲಿ 30 ದಿನಕ್ಕಿಂತ ಹೆಚ್ಚು ಅವಧಿ ಜೈಲಿನಲ್ಲಿದ್ದರೆ ಪ್ರಧಾನಿ ಹಾಗೂ ಮುಖ್ಯಮಂತ್ರಿ ಸ್ಥಾನದಿಂದ ವಜಾಗೊಳಿಸಬಹುದು ಎಂಬ ವಿವಾದಾತ್ಮಕ ಮಸೂದೆಯನ್ನು ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಮಂಡಿಸಿದ್ದಾರೆ. ಸಂವಿಧಾನ ತಿದ್ದುಪಡಿ ಮಸೂದೆಯನ್ನು ಪ್ರತಿಭಟಿಸಿದ ವಿರೋಧ