ಬೆಂಗಳೂರು
ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ಬ್ಯಾನ್ ಆಗುತ್ತಾ?
ರಾಜ್ಯ ಸರ್ಕಾರ ನೇಮಿಸಿದ ತಜ್ಞರ ಸಮಿತಿ ರಾಜ್ಯದಲ್ಲಿ ಬೈಕ್ ಟ್ಯಾಕ್ಸಿ ನಿಷೇಧಕ್ಕೆ ಶಿಫಾರಸು ಮಾಡಿ ವರದಿ ಸಲ್ಲಿಕೆ ಮಾಡಿದೆ. ಬೈಕ್ ಟ್ಯಾಕ್ಸಿ ಸೇವೆ ಬಗ್ಗೆ ವರದಿ ನೀಡುವಂತೆ ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಸೂಚನೆ ನೀಡಿದ ಬೆನ್ನಲ್ಲೇ ಸಮಿತಿ ರಚಿಸಲಾಗಿತ್ತು. ಸಮಿತಿಯಿಂದ ಬೈಕ್ ಟ್ಯಾಕ್ಸಿ ಸಂಚಾರದ ಸಾಧಕ ಬಾಧಕ ಬಗ್ಗೆ ವರದಿ ಸಲ್ಲಿಕೆಯಾಗಿದೆ. ಬೈಕ್ ಟ್ಯಾಕ್ಸಿ ಕಾನೂನು ಬದ್ಧಗೊಳಿಸಿದರೆ ಸಂಚಾರ ದಟ್ಟಣೆ ಹೆಚ್ಚಲಿದೆ. ರಸ್ತೆ ಅಪಘಾತ, ಮಹಿಳೆಯರಿಗೆ ಸುರಕ್ಷತೆಯ ಸವಾಲು ಎದುರಾಗುತ್ತದೆ.
ಬೆಂಗಳೂರಿನಲ್ಲಿ ಲಾಕಪ್ ಡೆತ್: ಹೊಡೆದು ಮದ್ಯ ರಿಹ್ಯಾಬ್ ಸೆಂಟರ್ಗೆ ಸೇರಿಸಿದ್ದರಾ ಪೊಲೀಸರು?
ಬೆಂಗಳೂರಿನ ವಿವೇಕ ನಗರ ಪೊಲೀಸ್ ಕಸ್ಟಡಿಯಲ್ಲಿ ಪೊಲೀಸರಿಂದ ತೀವ್ರ ಹಲ್ಲೆಗೆ ಒಳಗಾಗಿದ್ದ ವ್ಯಕ್ತಿ ಮದ್ಯ ರಿಹ್ಯಾಬ್ ಸೆಂಟರ್ನಲ್ಲಿ ಮೃತಪಟ್ಟಿದ್ದಾರೆ. ಸಿಂಗಮಲೆ ಮೃತಪಟ್ಟವರು. ಕಸ್ಟಡಿಯಲ್ಲಿರುವಾಗ ಪೊಲೀಸರು ಸಂಗಮಲೆಗೆ ಹೊಡೆದಿದ್ದು, ಬಳಿಕ ಮಾದಕನಾಯಕಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ಮದ್ಯ ರಿಹ್ಯಾಬ್ ಸೆಂಟರ್ಗೆ ದಾಖಲಿಸಿದ್ದರು. ಅಲ್ಲಿಗೆ
ಕಗ್ಗಲಿಪುರದಲ್ಲಿ ಬಾಲಕಿಯ ಕೊಲೆ
ಬೆಂಗಳೂರು ದಕ್ಷಿಣ ತಾಲೂಕಿನ ಬೋಳಾರೆ ಗ್ರಾಮದ ಬಳಿ 15 ವರ್ಷದ ಬಾಲಕಿಯನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ನಡೆದಿದೆ. ಗುರುವಾರ ಮಧ್ಯಾಹ್ನ ಮನೆಯ ಸಮೀಪ ಬಹಿರ್ದೆಸೆಗೆ ಹೋಗಿದ್ದ ಕವನಳನ್ನು ಕತ್ತು ಹಿಸುಕಿ ಕೊಲೆ ಮಾಡಿರುವುದು ಪತ್ತೆಯಾಗಿದೆ. ಕವನ ಸಂಜೆಯಾದರೂ ಮನೆಗೆ ವಾಪಸ್
ಹರಳೂರಿನ ಅತ್ಯುತ್ತಮ ಪ್ರೀ-ಪ್ರೈಮರಿ, ನರ್ಸರಿ ಮತ್ತು ಪ್ರೀಸ್ಕೂಲ್!
ಬೆಂಗಳೂರಿನ ಪ್ರಮುಖ ಪ್ರೀಸ್ಕೂಲ್ಗಳಲ್ಲಿ ಒಂದಾಗಿರುವ ಹರಳೂರಿನ ವಿಬ್ಗಯಾರ್ ಕಿಡ್ಸ್ ಪ್ರೀ-ಸ್ಕೂಲ್ ತಮ್ಮಲ್ಲಿ ಓದುವ ಪ್ರತೀ ಮಗುವಿನ ಸರ್ವತೋಮುಖ ಬೆಳವಣಿಗೆಗೆ ಆದ್ಯತೆ ನೀಡುತ್ತಿದ್ದು, ಮಗುವಿನ ಸಮಗ್ರ ಬೆಳವಣಿಗೆ ಬಯಸುವ ಪೋಷಕರಿಗೆ ಸೂಕ್ತ ಆಯ್ಕೆಯಾಗಿದೆ. 2022ರ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟಿನ ಅಡಿಯಲ್ಲಿನ ಶಿಕ್ಷಣ ಪದ್ಧತಿಯನ್ನು
ಬೆಂಗಳೂರು ನಗರದ ಈ ರಸ್ತೆಗಳಲ್ಲಿ ನಾಳೆ ಸಂಚಾರ ನಿರ್ಬಂಧ
ಬೆಂಗಳೂರು ನಗರದ ಅರಮನೆ ಮೈದಾನದ ಸಮೀಪ ನಾಳೆ ಕರ್ನಾಟಕ ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಐಸಿಡಿಎಸ್ ಯೋಜನೆಯ ಸುವರ್ಣ ಮಹೋತ್ಸವ ನಡೆಲಿದ್ದು, ಹಲವು ಪ್ರಮುಖ ರಸ್ತೆಗಳಲ್ಲಿ ವಾಹನ ಸಂಚಾರಕ್ಕೆ ತಾತ್ಕಾಲಿಕ ನಿರ್ಬಂಧ ಇರುತ್ತದೆ ಎಂದು ಬೆಂಗಳೂರಿನ ಸಂಚಾರಿ ಪೊಲೀಸರು
ಮಾನ್ಯತಾ ಟೆಕ್ ಪಾರ್ಕ್ ಸಮೀಪ ಆ್ಯಂಬುಲೆನ್ಸ್ ಸಂಚಾರಕ್ಕೆ ದುಸ್ತರವಾದ ರಸ್ತೆ: ಗಾಯಾಳು ಸಾವು
ಬೆಂಗಳೂರಿನ ಮಾನ್ಯತಾ ಟೆಕ್ ಪಾರ್ಕ್ನಲ್ಲಿ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬರು ಬೈಕ್ ಸ್ಕಿಡ್ ಆಗಿ ಬಿದ್ದು ಗಾಯಗೊಂಡಿದ್ದು, ಆ್ಯಂಬುಲೆನ್ಸ್ ನಲ್ಲಿ ಆಸ್ಪತ್ರೆಗೆ ತೆರಳುತ್ತಿದ್ದಾಗ ರಸ್ತೆಯಲ್ಲಿ ಸಂಚರಿಸಲಾಗದ ಕಾರಣ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗದೆ ಮೃತಪಟ್ಟಿದ್ದಾರೆ. ವರ್ತೂರಿನ 35 ವರ್ಷದ ಆನಂದ್ ಮೃತಪಟ್ಟ ಗಾಯಾಳು.
ಬೆಂಗಳೂರಲ್ಲಿ ಮನೆ ತಳಪಾಯಕ್ಕೂ ಪ್ರಮಾಣಪತ್ರ ಕಡ್ಡಾಯಗೊಳಿಸಿದ ಜಿಬಿಎ
ನಕ್ಷೆ ಮಂಜೂರಾತಿ ಅಧಿಕಾರವನ್ನು ನಗರ ಪ್ರಾಧಿಕಾರ ಈಗಾಗಲೇ ಜಿಬಿಎ ಗೆ ನೀಡಿದ್ದು, ಕಟ್ಟಡ ನಕ್ಷೆ ಉಲ್ಲಂಘನೆ ತಡೆಯುವ ನಿಟ್ಟಿನಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ತಳಪಾಯಕ್ಕೂ ಪ್ರಮಾಣ ಪತ್ರ ಪಡೆಯುವುದನ್ನು ಕಡ್ಡಾಯಗೊಳಿಸಿದೆ. ನಗರ ಯೋಜನೆ ಅಧಿಕಾರಿಗಳು ಕಡ್ಡಾಯವಾಗಿ ತಳಪಾಯ ಪ್ರಮಾಣ ಪತ್ರ ಜವಾಬ್ದಾರಿ
ನಾಳೆಯಿಂದ ಡಿ. 7ರ ವರೆಗೆ ಕಬ್ಬನ್ ಪಾರ್ಕ್ನಲ್ಲಿ ಫ್ಲವರ್ ಶೋ
ಮಕ್ಕಳ ದಿನಾಚರಣೆ ಮತ್ತು ಕನ್ನಡ ರಾಜ್ಯೋತ್ಸವ ನಿಮಿತ್ತ ನಾಳೆಯಿಂದ ಡಿ. 7 ರ ವರೆಗೆ ಕಬ್ಬನ್ ಪಾರ್ಕ್ನಲ್ಲಿ 11 ದಿನ ಫಲಪುಷ್ಪ ಪ್ರದರ್ಶನ ನಡೆಯಲಿದೆ. ಬೆಳಗ್ಗೆ 6 ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಪ್ರದರ್ಶನ ಇರಲಿದೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳೇ ವೈನ್ ತಯಾರಿಸಿ ಪಾರ್ಟಿ, ಮಾರಾಟ
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳೇ ಮದ್ಯ ತಯಾರಿಸಿ ಬಳಿಕ ಪಾರ್ಟಿ ಮಾಡಿಕೊಳ್ಳುತ್ತಿದ್ದಾರೆ ಮಾತ್ರವಲ್ಲ ಮದ್ಯವನ್ನು ಮಾರಾಟ ಕೂಡ ಮಾಡುತ್ತಾರೆ ಎಂಬ ವಿಚಾರ ಬಯಲಾಗಿದೆ. ಜೈಲಲ್ಲಿ ಮದ್ಯ ತಯಾರಿಸಿ ಮಾರಾಟ ಮಾಡಿ ದುಡ್ಡು ಪಡೆದು ಕೆಲವು ಕೈದಿಗಳು ಐಷಾರಾಮಿಯಾಗಿ ಜೀವನ ಮಾಡುತ್ತಿದ್ದಾರೆ ಎಂಬುದನ್ನು
ಆನೇಕಲ್ನಲ್ಲಿ ಗ್ರಾಮಕ್ಕೆ ಕಾಡೆಮ್ಮೆ ಲಗ್ಗೆ
ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಸೊಪ್ಪಹಳ್ಳಿ ಗ್ರಾಮದಲ್ಲಿ ಬೆಳಗ್ಗೆ ದೈತ್ಯಾಕಾರದ ಕಾಡೆಮ್ಮೆ ಕಾಣಿಸಿಕೊಂಡು ಆತಂಕ ಸೃಷ್ಟಿಸಿದೆ. ಕಾಡಿನಿಂದ ದಾರಿತಪ್ಪಿ ಗ್ರಾಮಕ್ಕೆ ಬಂದ ಕಾಡೆಮ್ಮೆ ಆತಂಕದಿಂದ ಗ್ರಾಮದೆಲ್ಲೆಡೆ ಓಡಾಡಿದೆ. ಕಾಡೆಮ್ಮೆ ಓಡಾಟದ ದೃಶ್ಯ ಗ್ರಾಮಸ್ಥರ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿದ ಗ್ರಾಮಸ್ಥರು ಆನೇಕಲ್




