ಲಿಂಗಸುಗೂರು : ಸಿದ್ದರಾಮಯ್ಯನವರು ಈ ಜಾತಿಗಣತಿಯಲ್ಲಿ ಹಿಂದೂಗಳಿಗೆ ಅನ್ಯಾಯ ಮಾಡಿ ಅಲ್ಪಸಂಖ್ಯಾತರ ಜನಸಂಖ್ಯೆಯನ್ನು ಹೆಚ್ಚಿಗೆ ತೋರಿಸಿ ಜಾತಿಗಣತಿ ಮಾಡಿಸಿದ್ದಾರೆ, ಜಾತಿಗಣತಿ ಅಸಮರ್ಪಕವಾಗಿ ಕೂಡಿದೆ ಇದನ್ನು ಮರುಪರಿಶೀಲನೆ ಮಾಡದೇ ಇದ್ದರೇ ಹಿಂದುಗಳು ಒಪ್ಪುವುದಿಲ್ಲ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಹೇಳಿದರು.
ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಸರ್ಕಾರ ಅಲ್ಪಸಂಖ್ಯಾತರ ಪರವಾಗಿದೆ ಮುಸ್ಲಿಂ ಸಮುದಾಯದಲ್ಲಿ ಹಲವಾರು ಪಂಗಡಗಳು ಇವೇ ಅದರಲ್ಲಿ ಪಿಂಜಾರ, ಸಿಯಾ ಸುನ್ನಿ ಇನ್ನಿತರ ಜಾತಿಗಳು ಸೇರಿವೇ ಎಂದರು.,
ವೀರಶೈವ ಲಿಂಗಾಯತ, ಕುರುಬ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಿಂದೂಗಳಲ್ಲಿ ಈ ಹಲವಾರು ಜಾತಿಗಳಿಗೆ ಬಸವರಾಜ ಬೋಮ್ಮಾಯಿ ಬಿಜೆಪಿ ಸರ್ಕಾರ ಅನ್ಯಾಯ ಮಾಡಲಿಲ್ಲ ಆದರೆ ಸಿದ್ದರಾಮಯ್ಯನವರು ಹಿಂದೂಗಳಿಗೆ ಅನ್ಯಾಯ ಮಾಡಿ ಮುಸ್ಲಿಂ ಸಮುದಾಯವನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ಸಿದ್ದರಾಮಯ್ಯನವರು ಅಂಕಿ ಸಂಖ್ಯೆಗಳು ಇದ್ದರು ಇನ್ನೂ ಎರಡು ತಿಂಗಳೂ ಸಮಯ ಬೇಕೆಂದು ಮಾದಿಗ – ಚಲುವಾದಿ ಜನಾಂಗಕ್ಕೆ ಅನ್ನಾಯ ಮಾಡುತ್ತಿದ್ದಾರೆ. ಬೊಮ್ಮಾಯಿ ಸರ್ಕಾರ ಮಾಧುಸ್ವಾಮಿ ನೇತೃತ್ವದಲ್ಲಿ ಸಮಿತಿ ಮಾಡಿ ಎಸಿ, ಎಸ್ಟಿ ಒಬಿಸಿ, 2ಡಿ, 2ಸಿ ಎಂದು ವಿಂಗಡಿಸಿ ಶಿಪಾರಸ್ಸು ಮಾಡಿದಿವೂ ಆದರೆ ಇದನ್ನು ಸಿದ್ದರಾಮಯ್ಯನವರು ಒಪ್ಪಿ ಅಂಗಿಕರಿಸಲಿಲ್ಲ ಇದು ಸಿದ್ದರಾಮಯ್ಯನವರು ಹಿಂದೂಗಳಿಗೆ ಮಾಡುತ್ತಿರುವ ವಿರೋಧ ಅಲ್ಲವೇ?.
ಸೂರ್ಯ- ಚಂದ್ರ ಎಷ್ಟು ಸತ್ಯವೂ ಅಷ್ಟೇ ಸತ್ಯ ಡಿಸೆಂಬರ್ ತಿಂಗಳಲ್ಲಿ ಸಿದ್ದರಾಮಯ್ಯನವರು ರಾಜೀನಾಮೆ ಕೊಡುತ್ತಾರೆ, ಆದರೆ ತಮ್ಮ ಕುರ್ಚಿಯನ್ನು ಉಳಿಸಿಕೊಳ್ಳಲು ಜಾತಿಗಣತಿ ಎಂಬ ಜೇನುಗೂಡಿಗೆ ಕೈಹಾಕಿದ್ದಾರೆ. ಈ ಅಸ್ತೃ ಬ್ರಹ್ಮಾಸ್ತೃವಾಗಿ ನಿಮಗೆ ತಿರುಗುಬಾಣ ಎಂದರು.
ಈ ಸಂದರ್ಭದಲ್ಲಿ ಪಂಚಮಶಾಲಿ ತಾಲೂಕ ಅಧ್ಯಕ್ಷ ಸುಭಾಸ್ ಪಲ್ಲೆದ್, ಶಂಕರಗೌಡ ಅಮರಾವತಿ, ಅಮರೇಶ ತಾವರಗೇರೆ, ಮಾರುತಿ ಗೋಸ್ಲೇ ಸೇರಿದಂತೆ ಹಲವಾರು ಇದ್ದರು.