Friday, September 19, 2025
Menu

ಹಿಂದೂ ಯುವತಿಯ ಮದುವೆಯಾದ ಧಾರವಾಡ ಯೂಟ್ಯೂಬರ್‌ ವಿರುದ್ಧ ಪ್ರಕರಣ

ಕನ್ನಡದ ಯೂಟ್ಯೂಬರ್ ಖ್ವಾಜಾ ಅಲಿಯಾಸ್ ಮುಕಳೆಪ್ಪ ವಿರುದ್ಧ ಬಜರಂಗದಳ ಕಾರ್ಯಕರ್ತರು ಧಾರವಾಡ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಲವ್‌ ಜಿಹಾದ್ ಆರೋಪ ಮಾಡಿರುವ ಕಾರ್ಯಕರ್ತರು, ಮುಕಳೆಪ್ಪ ಸುಳ್ಳು ದಾಖಲೆ ನೀಡಿ ಹಿಂದೂ ಯುವತಿಯನ್ನು ಮದುವೆಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಖ್ವಾಜಾ ತನ್ನ ವೀಡಿಯೊಗಳಲ್ಲಿ ಹಿಂದೂ ಧರ್ಮವನ್ನು ಅವಮಾನಿಸುತ್ತಿದ್ದಾನೆ. ಹಿಂದೂ ಯುವತಿಯರನ್ನು ಪ್ರೀತಿಯ ಬಲೆಗೆ ಬೀಳಿಸಿ ವಂಚನೆ ಮಾಡುತ್ತಿದ್ದಾನೆ ಎಂದು ಬಜರಂಗದಳದ ಸಂಚಾಲಕ ಸಿದ್ದು ಹಿರೇಮಠ ದೂರಿನಲ್ಲಿ ತಿಳಿಸಿದ್ದಾರೆ.

ಕಳೆದ ಜೂನ್ 5ರಂದು ಖ್ವಾಜಾ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಉಪ ನೋಂದಣಿ ಕಚೇರಿಯಲ್ಲಿ ಹಿಂದೂ ಧರ್ಮದ ಯುವತಿ ಗಾಯತ್ರಿ ಎಂಬಾಕೆಯಮ್ಮು ವಿವಾಹವಾಗಿದ್ದಾನೆ. ಈ ವಿವಾಹಕ್ಕಾಗಿ ಖ್ವಾಜಾ ವಿಳಾಸದಲ್ಲಿ ನಕಲಿ ದಾಖಲೆಗಳನ್ನು ನೀಡಿದ್ದಾನೆ ಎಂದು ಬಜರಂಗದಳವು ಆರೋಪಿಸಿದೆ.

ಬಜರಂಗದಳದ ಕಾರ್ಯಕರ್ತರು ದೂರಿನ ಹಿನ್ನೆಲೆ ಧಾರವಾಡ ಗ್ರಾಮೀಣ ಪೊಲೀಸರು ಖ್ವಾಜಾ ಮತ್ತು ಆತನ ಪತ್ನಿ ಗಾಯತ್ರಿ ಅವರನ್ನು ಪೊಲೀಸರು ವಿಚಾರಣೆಗೆಂದು ಠಾಣೆಗೆ ಕರೆಸಿ ಕೊಂಡಿದ್ದರು. ಗಾಯತ್ರಿಯು ನನಗೆ ಯಾವುದೇ ಸಮಸ್ಯೆ ಇಲ್ಲ ಎಂದು ಪೊಲೀಸರಿಗೆ ತಿಳಿಸಿದ್ದು, ಬಜರಂಗದಳ ಕಾರ್ಯಕರ್ತರು ಠಾಣೆಯಲ್ಲಿ ಆಕೆಯ ಮನವೊಲಿಸಲು ಪ್ರಯತ್ನಿಸಿದ್ದಾರೆ.

Related Posts

Leave a Reply

Your email address will not be published. Required fields are marked *