ಆರೋಗ್ಯದ ದೃಷ್ಟಿಯಿಂದ ಕೆಫೀನ್‌ಮುಕ್ತ ಟೀ ಕುಡಿಯಬೇಕೆನ್ನುವವರಿಗೆ ನುಗ್ಗೆ ಸೊಪ್ಪು ಟೀ (ಮೊರಿಂಗಾ ಟೀ) ಉತ್ತಮ ಆಯ್ಕೆ. ರುಚಿಯನ್ನು ಸಮತೋಲನ ಗೊಳಿಸಿ ಸುವಾಸನೆಗಾಗಿ ಜೇನುತುಪ್ಪ, ಪುದೀನ ಮತ್ತು ದಾಲ್ಚಿನ್ನಿ ಯಾವುದಾದರೊಂದು ಸೇರಿಸಬಹುದು. ನುಗ್ಗೆ ಸೊಪ್ಪು ಹೆಚ್ಚಿನ ಪೌಷ್ಟಿಕಾಂಶವನ್ನು ಒಳ ಗೊಂಡಿದೆ. ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿರುತ್ತದೆ. ಅಪೌಷ್ಟಿಕತೆಯಿಂದ ಬಳಲುತ್ತಿರುವವರು ದೇಹದ ತೂಕವನ್ನು ಹೆಚ್ಚಿಸಲು ನುಗ್ಗೆ ಸೊಪ್ಪು ಸಹಕಾರಿ.
ದಿನಸಿ ಅಂಗಡಿಗಳಲ್ಲಿ ನುಗ್ಗೆ ಸೊಪ್ಪಿನ ಪೌಡರ್ ಲಭಿಸುವುದು, ಇದನ್ನು ನೀರಲ್ಲಿ ಕುದಿಸಿ ಸೋಸಿ ಗ್ರೀನ್ ಟೀ ತಯಾರಿಸಿಕೊಳ್ಳಬಹುದು. ರುಚಿಗೆ ಬೇಕಿದ್ದರೆ ಜೇನುತುಪ್ಪ ಸೇರಿಸಬಹುದು, ಇತರ ಯಾವುದಾದರೂ ಫ್ಲೇವರ್ ಸೇರಿಸಿಕೊಳ್ಳಬಹುದು. ನುಗ್ಗೆ ಸೊಪ್ಪನ್ನು ನೆರಳಲ್ಲಿ ಒಣಗಿಸಿ ಪೌಡರ್ ತಯಾರಿಸಿ ಇಟ್ಟುಕೊಳ್ಳ ಬಹುದು. ಮಿತ ಪ್ರಮಾಣದಲ್ಲಿ ಕುಡಿಯುವುದನ್ನು ರೂಢಿಸಿಕೊಳ್ಳಬೇಕು. ಯಾವುದಾದರೂ ಆರೋಗ್ಯ ಸಮಸ್ಯೆ ಇದ್ದರೆ ವೈದ್ಯರ ಬಳಿ ಸಲಹೆ ಕೇಳಿದ ಬಳಿಕವೇ ನುಗ್ಗೆ ಸೊಪ್ಪಿನ ಚಹಾ ಕುಡಿಯುವ ಅಭ್ಯಾಸ ಮಾಡಿಕೊಳ್ಳುವುದು ಉತ್ತಮ.
ನುಗ್ಗೆಸೊಪ್ಪು ಉತ್ಕರ್ಷಣ ನಿರೋಧಕಗಳಿಂದ ತುಂಬಿದ್ದು, ಅವು ದೇಹದಲ್ಲಿನ ಸ್ವತಂತ್ರ ರಾಡಿಕಲ್‌ಗಳನ್ನು ತೊಡೆದುಹಾಕಲು ಮತ್ತು ಆಕ್ಸಿಡೇಟಿವ್ ಒತ್ತಡ ತಡೆಯಲು ಸಹಾಯ ಮಾಡುತ್ತದೆ. ಆಕ್ಸಿಡೇಟಿವ್ ಒತ್ತಡವು ಹೃದಯ ಕಾಯಿಲೆ, ಆಲ್ಝೈಮರ್ ಕಾಯಿಲೆ ಮತ್ತು ಕೆಲವು ರೀತಿಯ ಕ್ಯಾನ್ಸರ್‌ಗಳಿಗೆ ದಾರಿ ಮಾಡಿಕೊಡುವ ಸಮಸ್ಯೆ. ನುಗ್ಗೆ ಸೊಪ್ಪು ಕ್ಲೋರೊಜೆನಿಕ್ ಆಮ್ಲವನ್ನು ಹೊಂದಿರುತ್ತವೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಈ ಟೀ ಕುಡಿಯುವುದರಿಂದ ಯಕೃತ್ ಹಾಗೂ ಮೂತ್ರಪಿಂಡಗಳನ್ನು ಆರೋಗ್ಯಕರವಾಗಿ ಕಾಪಾಡಿಕೊಳ್ಳಬಹುದು.
ಕ್ಲೋರೋಜನಿಕ್ ಆಮ್ಲ ನುಗ್ಗೆ ಸೊಪ್ಪಿನಲ್ಲಿ ಇರುವುದರಿಂದ ಬ್ಲಡ್ ಶುಗರ್ ಲೆವೆಲ್ ಪ್ರಮಾಣವನ್ನು ನಿಯಂತ್ರಣ ಮಾಡಬಲ್ಲದು. ವಿಟಮಿನ್ ಸಿ ಪ್ರಮಾಣ ಹೆಚ್ಚಾಗಿ ರುವ ನುಗ್ಗೆ ಸೊಪ್ಪು ಚಹಾ ಶುಗರ್ ಮತ್ತು ಬಿಪಿ ಕಂಟ್ರೋಲ್ ಮಾಡುತ್ತದೆ. ನುಗ್ಗೆ ಸೊಪ್ಪಿನ ಚಹಾ ಕುಡಿಯುವುದರಿಂದ ನಮ್ಮ ದೇಹದಲ್ಲಿ ವಿಷಕಾರಿ ಅಂಶ ಹೊರ ಹೋಗಿ ಚರ್ಮದ ಸೌಂದರ್ಯ ಹೆಚ್ಚುತ್ತದೆ. ವಿಟಮಿನ್ ಎ ಇರುವ ಕಾರಣ ಕನ್ಣಿನ ಆರೋಗ್ಯಕ್ಕೂ ಇದು ಒಳ್ಳೆಯದು. ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರು, ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವವರುನುಗ್ಗೆ ಸೊಪ್ಪು ಟೀ ಸೇವಿಸುವ ಮೊದಲು ವೈದ್ಯಕೀಯ ಸಲಹೆ ಪಡೆಯುವುದು ಅತ್ಯಗತ್ಯ.