ಭಾರತ-ಪಾಕಿಸ್ತಾನ ಉದ್ವಿಗ್ನತೆ ಕಾರಣಕ್ಕೆ ಮುಂದೂಡಿಕೆಯಾಗಿದ್ದ CA ಪರೀಕ್ಷೆಗಳನ್ನು ಮೇ 16 ರಿಂದ ಮೇ 24 ರವರೆಗೆ ನಡೆಸಲಾಗುವುದು ಎಂದು ICAI ಹೇಳಿದೆ.
ಈ ಪರೀಕ್ಷೆಗಳು ಮೇ 9 ರಿಂದ ಮೇ 14, 2025 ರ ನಡುವೆ ನಡೆಯಬೇಕಿತ್ತು, ಮುಂದೂಡಿಕೆಯಾಗಿದ್ದರಿಂದ ಹೊಸ ವೇಳಾಪಟ್ಟಿ ಪ್ರಕಟಿಸಲಾಗಿದೆ. ಪರೀಕ್ಷಾ ಕೇಂದ್ರಗಳು ಮತ್ತು ಸಮಯ ಹಿಂದಿನಂತೆಯೇ ಇರುತ್ತದೆ. ಹೆಚ್ಚಿನ ವಿವರಗಳಿಗೆ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಬಹುದು ಎಂದು ಸಂಸ್ಥೆ ತಿಳಿಸಿದೆ.
ದೇಶದ ಭದ್ರತಾ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಇನ್‌ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ 2025 ರ ಸಿಎ ಪರೀಕ್ಷೆಯನ್ನು ಮುಂದೂಡಿತ್ತು. ಮರು ನಿಗದಿಪಡಿಸಿದ ಪರೀಕ್ಷೆಗಳನ್ನು ಅದೇ ಪರೀಕ್ಷಾ ಕೇಂದ್ರಗಳಲ್ಲಿ ಮತ್ತು ಈ ಹಿಂದೆ ನಿಗದಿಪಡಿಸಿದ ಸಮಯದಲ್ಲಿ ನಡೆಸಲಾಗುವುದು ಎಂದು ಐಸಿಎಐ ತಿಳಿಸಿದೆ.
ಪರೀಕ್ಷೆಗಳು ಮಧ್ಯಾಹ್ನ 2 ರಿಂದ ಸಂಜೆ 5 ರವರೆಗೆ ಅಥವಾ ಸಂಜೆ 6 ರವರೆಗೆ ನಡೆಯಲಿವೆ. ಐಸಿಎಐ ಪ್ರಕಾರ, ಈಗಾಗಲೇ ನೀಡಲಾದ ಪ್ರವೇಶ ಪತ್ರಗಳು ಮರು ನಿಗದಿಪಡಿಸಿದ ದಿನಾಂಕಗಳಿಗೆ ಮಾನ್ಯವಾಗಿರುತ್ತವೆ.
ಚಾರ್ಟರ್ಡ್ ಅಕೌಂಟೆಂಟ್ಸ್ ಫೌಂಡೇಶನ್ ಪರೀಕ್ಷೆಗಳು ಮೇ 16, 18, 20, 22 ಮತ್ತು 24 ರಂದು ನಡೆಯಲಿವೆ ಎಂದು ಐಸಿಎಐ ಹೇಳಿಕೆ ತಿಳಿಸಿದೆ. ಕೇಂದ್ರ ಸರ್ಕಾರ ಅಥವಾ ಯಾವುದೇ ರಾಜ್ಯ ಸರ್ಕಾರ/ಸ್ಥಳೀಯ ರಜಾದಿನಗಳು ಪರೀಕ್ಷಾ ದಿನವನ್ನು ಸಾರ್ವಜನಿಕ ರಜಾದಿನವೆಂದು ಘೋಷಿಸಿದರೆ, ಪರೀಕ್ಷಾ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಅಭ್ಯರ್ಥಿಗಳು ಇತ್ತೀಚಿನ ನವೀಕರಣಗಳಿಗಾಗಿ ಸಂಸ್ಥೆಯ ವೆಬ್‌ಸೈಟ್ www.icai.org ಗೆ ಭೇಟಿ ನೀಡಲು ಕೋರಿದೆ.
ಸಿಎ ಪರೀಕ್ಷೆಗಳನ್ನು ದೇಶದ ಎಲ್ಲಾ ರಾಜ್ಯಗಳಲ್ಲಿ ನಡೆಸಲಾಗುತ್ತದೆ. ಈ ಬಾರಿ ಸಿಎ ಪರೀಕ್ಷೆಗಳು ನೇಪಾಳದ ಕಠ್ಮಂಡುವಿನಿಂದ ದುಬೈ, ಅಬುಧಾಬಿ, ರಿಯಾದ್, ದೋಹಾ, ಥಿಂಪು (ಭೂತಾನ್), ಕುವೈತ್, ಬಹ್ರೇನ್ ಮತ್ತು ಮಸ್ಕತ್‌ಗಳಲ್ಲೂ ನಡೆಯಲಿದೆ.