Menu

ಮ್ಯಾನ್ಮಾರ್‌ ಮತ್ತು ಥೈಲ್ಯಾಂಡ್‌ಗಳಲ್ಲಿ ಭೂಕಂಪ: ಕಟ್ಟಡಗಳು ನೆಲಸಮ, ಕಾರ್ಮಿಕರು ನಾಪತ್ತೆ

ಮ್ಯಾನ್ಮಾರ್‌ ಮತ್ತು ಥೈಲ್ಯಾಂಡ್‌ಗಳಲ್ಲಿ ಶುಕ್ರವಾರ ಪ್ರಬಲ ಭೂಕಂಪ ಸಂಭವಿಸಿದ್ದು, ಅಪಾರ ನೋವು ಹಾಗೂ ಆಸ್ತಿಪಾಸ್ತಿ ನಷ್ಟವಾಗಿದೆ ಎಂದು ಮೂಲಗಳು ತಿಳಿಸಿವೆ.

ಭೀಕರ ಭೂಕಂಪಕ್ಕೆ ಹಲವೆಡೆ ಗಗನಚುಂಬಿ ಕಟ್ಟಡಗಳು ನೆಲಸಮವಾಗಿವೆ, ಕಡಿಮೆಯೆಂದರೂ 43 ಕಾರ್ಮಿಕರು ನಾಪತ್ತೆಯಾಗಿರುವುದಾಗಿ ಹೇಳಲಾಗಿದೆ.
ಶುಕ್ರವಾರ ಬೆಳಗ್ಗೆ 11:50ಕ್ಕೆ 7.7 ತೀವ್ರತೆಯ ಭೂಕಂಪ ಸಂಭವಿಸಿದೆ, ಮಧ್ಯಾಹ್ನ 12:50ಕ್ಕೆ 6.8 ತೀವ್ರತೆಯಲ್ಲಿ ಮತ್ತೊಂದು ಬಾರಿ ಭೂಕಂಪ ಆಗಿದೆ. ಮಯನ್ಮಾರ್ ಗಡಿ ದೇಶವಾಗಿರುವ ಭಾರತದ ನವದೆಹಲಿಯಲ್ಲೂ ಭೂಮಿ ಕಂಪಿಸಿದ ಅನುಭವ ಆಗಿದೆ.

ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಸಾಗಯಿಂಗ್ ನಗರದ ವಾಯುವ್ಯಕ್ಕೆ ಭೂಮಿಯ 10 ಕಿ.ಮೀ ಆಳದಲ್ಲಿ ಭೂಕಂಪದ ಕೇಂದ್ರಬಿಂದು ಪತ್ತೆಯಾಗಿದೆ. ಥೈಲ್ಯಾಂಡ್‌ನಲ್ಲೂ ಭೂಮಿ ಕಂಪಿಸಿದ ಅನುಭವ ಆಗಿದೆ. ಕಟ್ಟಡಗಳು ಅಲುಗಾಡಿವೆ, ಕೆಲವಡೆ ಮುಗಿಲೆತ್ತರದ ಕಟ್ಟಗಳು ಧ್ವಂಸವಾದ ದೃಶ್ಯಗಳು ಸೆರೆಯಾಗಿವೆ.
ಬ್ಯಾಂಕಾಕ್‌ನಲ್ಲಿ ಭೂಕಂಪದ ಅನುಭವವಾದ ನಂತರ ಕಟ್ಟಡದ ಮೇಲ್ಛಾವಣಿಯಲ್ಲಿದ್ದ ಟ್ಯಾಂಕ್‌ನಿಂದ ನೀರು ಕೆಳಗೆ ಬೀಳುತ್ತಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಸ್ವಿಮ್ಮಿಂಗ್ ಪೂಲ್‌ನಲ್ಲಿರುವ ನೀರು ಚಿಮ್ಮಿ ಹೊರ ಚೆಲ್ಲುತ್ತಿದೆ. ಹೋಟೆಲ್‌ನಲ್ಲಿ ವಸ್ತುಗಳೆಲ್ಲ ಅಲುಗಾಡುತ್ತಿರುವ ದೃಶ್ಯಗಳು ಎಕ್ಸ್ ಖಾತೆಯಲ್ಲಿ ಪೋಸ್ಟ್‌ ಆಗಿವೆ.

ಮ್ಯಾನ್ಮಾರ್ ನಿಂದ 12 ಕಿ.ಮೀ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದ್ದು ನೆರೆಯ  ಬಾಂಗ್ಲಾದೇಶ, ಭಾರತ, ಲಾವೋಸ್, ಥೈಲ್ಯಾಂಡ್ ಮತ್ತು ಚೀನಾ ಸಗೈಂಗ್ ಪ್ರಾಂತ್ಯದಲ್ಲೂ ಭೂಮಿ ಕಂಪಿಸಿದೆ.

 

Related Posts

Leave a Reply

Your email address will not be published. Required fields are marked *