ಮಂಡ್ಯ ತಾಲೂಕಿನ ಕೀಲಾರ ಗ್ರಾಮದಲ್ಲಿ ಶಾಸ್ತ್ರ ಹೇಳುತ್ತ ಜನರಿಗೆ ಭಯ ಹುಟ್ಟಿಸುತ್ತಿರುವ ಬುಡುಬುಡಿಕೆಯವರಿಗೆ ಗ್ರಾಮಸ್ಥರು ಪೊಲೀಸರಿಗೆ ಹಿಡಿದುಕೊಡುವುದಾಗಿ ಚಳಿ ಬಿಡಿಸಿ ಎಚ್ಚರಿಕೆ ನೀಡಿದ್ದಾರೆ.
ಗ್ರಾಮದ ಬೀದಿಯಲ್ಲಿ ರಾತ್ರಿ ಸಂಚರಿಸಿ ಭಯ ಹುಟ್ಟಿಸುವ ರೀತಿ ಶಾಸ್ತ್ರ ಹೇಳುತ್ತಿದ್ದ ಬುಡುಬುಡಿಕೆಯವರಿಂದ ಸುತ್ತಮುತ್ತಲ ಊರಿನ ಜನರು ಆತಂಕಗೊಂಡಿದ್ದರು.
ಒಂಟಿ ಮಹಿಳೆಯರಿದ್ದ ಮನೆಗೆ ಹೋಗಿ ಭಯ ಹುಟ್ಟಿಸುವ ಶಾಸ್ತ್ರ ಹೇಳಿ ಹಣ ಪಡೆಯುತ್ತಿದ್ದ ಬುಡುಬುಡಿಕೆಯವರು, ಗ್ರಾಮದ ಮುಖ್ಯ ಜಾಗದಲ್ಲಿ ನಿಂತು ಗ್ರಾಮಕ್ಕೆ ಆಪತ್ತು ಬರಲಿದೆ ಎಂದು ಹೇಳಿ ಗ್ರಾಮಸ್ಥರನ್ನು ಕಂಗಾಲಾಗಿಸುತ್ತಿದ್ದರು. ಗ್ರಾಮದ ಮುಖಂಡರು, ಬುಡಬುಡಿಕೆಯವರು ತಂಗಿದ್ದ ಊರ ಹೊರಗೆ ಅವರನ್ನು ತಡೆದು ಎಚ್ಚರಿಕೆ ನೀಡಿದ್ದಾರೆ.
ಗ್ರಾಮಸ್ಥರ ತರಾಟೆ ಬಳಿಕ ಕ್ಷಮೆ ಕೋರಿ ಮತ್ತೊಮ್ಮೆ ಈ ರೀತಿ ಗ್ರಾಮಕ್ಕೆ ಬಂದು ರೀತಿ ಮಾಡುವುದಿಲ್ಲವೆಂದು ಬುಡಬುಡಿಕೆಯವರು ಕ್ಷಮೆ ಯಾಚಿಸಿದ್ದಾರೆ.