ಭಾರತೀಯ ಟೆಲಿಕಾಂ ಸಂಸ್ಥೆ ಬಿಎಸ್ಸೆನ್ನೆಲ್ ಡಿಸೆಂಬರ್ ತ್ರೈಮಾಸಿಕದಲ್ಲಿ 262 ಕೋಟಿ ರೂ. ಲಾಭ ಗಳಿಸಿದೆ. ಈ ಮೂಲಕ 17 ವರ್ಷಗಳ ನಂತರ ಮೊದಲ ಬಾರಿ ಲಾಭ ಗಳಿಸಿ ಹೊಸ ದಾಖಲೆ ಬರೆದಿದೆ.
ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ ಶುಕ್ರವಾರ ಸಬ್ ಸ್ಕ್ರೈಬ್ ಆಧಾರಿತ ಯೋಜನೆಗಳ ಮೂಲಕ ಸರ್ಕಾರಿ ಒಡೆತನದ ಬಿಎಸ್ಸೆನ್ನೆಲ್ ಸಂಸ್ಥೆ ಲಾಭದತ್ತ ಮುಖ ಮಾಡಿದೆ ಎಂದರು.
ಎಫ್ ಟಿಟಿಎಚ್ ಮತ್ತು ಲೀಸ್ ಆಧಾರಿತ ಸಂಪರ್ಕಗಳಿಂದ ಬಿಸ್ಸೆನ್ನೆಲ್ ಸಂಸ್ಥೆ ಶೇ.14ರಿಂದ 17ರಷ್ಟು ಬೆಳವಣಿಗೆ ದಾಖಲಿಸಿದೆ. ಅಲ್ಲದೇ ಸಬ್ ಸ್ಕ್ರೈಬ್ ಆಧಾರಿತ ಸೇವೆಗಳಲ್ಲಿ ಡಿಸೆಂಬರ್ ಒಂದೇ ತಿಂಗಳಲ್ಲಿ 9 ಕೋಟಿ ರೂ. ಆದಾಯ ಗಳಿಸಿದೆ. ಕಳೆದ ಬಾರಿ 8.4 ಕೋಟಿ ರೂ. ಆದಾಯ ಗಳಿಸಿತ್ತು ಎಂದು ಅವರು ವಿವರಿಸಿದರು.
ಬಿಎಸ್ಸೆನ್ನೆಲ್ ಇತಿಹಾಸದಲ್ಲೇ ಇದು ಸಂಭ್ರಮಿಸುವ ದಿನ. ಏಕೆಂದರೆ 2024-25ನೇ ಸಾಲಿನ ಮೂರನೇ ತ್ರೈಮಾಸಿಕದಲ್ಲಿ 262 ಕೋಟಿ ರೂ. ಲಾಭ ಗಳಿಸಿದೆ.2007ರಲ್ಲಿ ಬಿಎಸ್ಸೆನ್ನೆಲ್ ಕೊನೆಯ ಬಾರಿಗೆ ಲಾಭ ದಾಖಲಿಸಿತ್ತು.
ಬಿಎಸ್ಸೆನ್ನೆಲ್ ಸಂಸ್ಥೆ ವೆಚ್ಚ ಕಡಿತ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು, ಕಳೆದ ವರ್ಷ 1800 ಕೋಟಿ ರೂ. ನಷ್ಟ ಅನುಭವಿಸಿದ್ದ ಸಂಸ್ಥೆ ಇದೀಗ ಲಾಭ ದಾಖಲಿಸಿ ಪ್ರಗತಿ ಸಾಧಿಸಿದೆ.