ರಾಯಚೂರಿನ ಸಿಂಧನೂರು ನಗರದ ಇಂದಿರಾನಗರದಲ್ಲಿ ಪ್ರಾವಿಷನಲ್ ಸ್ಟೋರ್ ಹೋಲ್ ಸೇಲ್ ವ್ಯಾಪಾರಿ ಯುವಕನನ್ನು ಭೀಕರವಾಗಿ ಹತ್ಯೆ ಮಾಡಲಾಗಿದೆ. ನಾಪತ್ತೆಯಾಗಿದ್ದ ವ್ಯಾಪಾರಿ ಹೆಣವಾಗಿ ಪತ್ತೆಯಾಗಿದ್ದು, ವ್ಯಾಪಾರಿ ಕೈಗಳಿಗೆ ಬೈಡಿಂಗ್ ವೈರ್ ನಿಂದ ಕಟ್ಟಿ ಕಲ್ಲುಗಳಿಂದ ಮುಖ, ಬೆನ್ನಿಗೆ ಜಜ್ಜಿ ಕೊಲೆಗೈಯಲಾಗಿದೆ.
ಪ್ರವೀರ್ ಸರ್ದಾರ್(32) ಕೊಲೆಯಾದ ಕಿರಾಣಿ ಹೋಲ್ ಸೇಲ್ ವ್ಯಾಪಾರಿ. ಅಕ್ಟೋಬರ್ 30 ರ ರಾತ್ರಿ ಮನೆಗೆ ಬಾರದೆ ಪೋನ್ ಸ್ವಿಚ್ಡ್ ಆಫ್ ಆಗಿದ್ದು, ಆ ಬಳಿಕ ಫೋನ್ ಆನ್ ಆದ ಬಗ್ಗೆ ನೋಟಿಫಿಕೇಶನ್ ಬಂದ ನಂತರ ಆತ ನಾಪತ್ತೆ ಆಗಿರುವುದು ದೃಢಪಟ್ಟಿತ್ತು. ಅಕ್ಟೋಬರ್ 31 ರಂದು ಸಿಂಧನೂರು ಟೌನ್ ಠಾಣೆಯಲ್ಲಿ ನಾಪತ್ತೆ ಕೇಸ್ ದಾಖಲಾಗಿತ್ತು. ನವೇಂಬರ್ 1 ರಂದು ಸಿಂಧನೂರು ನಗರದ ಇಂದಿರಾ ನಗರದಲ್ಲಿ ಮೃತದೇಹ ಪತ್ತೆಯಾಗಿದೆ.
ಮೃತ ಪ್ರವೀರ್ ಮೃತದೇಹ ರಕ್ತಸಿಕ್ತ ರೀತಿಯಲ್ಲಿದ್ದು, ಪಕ್ಕದಲ್ಲೇ ಬೈಕ್ ಕೂಡ ಇತ್ತು. ಸಿಂಧನೂರು ಆರ್ ಎಚ್ ಕ್ಯಾಂಪ್-2 ನಿವಾಸಿಯಾಗಿರೊ ಪ್ರವೀರ್ ಹೋಲ್ ಸೇಲ್ ಕಿರಾಣಿ ವ್ಯಾಪಾರ ನಡೆಸುತ್ತಿದ್ದ. ಕೊಲೆಗೆ ಕಾರಣ ಇನ್ನೂ ನಿಗೂಢವಾಗಿದ್ದು, ಸಿಂಧನೂರು ಟೌನ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


