Tuesday, February 03, 2026
Menu

ಮಹಡಿಯಿಂದ ಬಿದ್ದು ಬಾಲಕ ಸಾವು: ಮದ್ಯ ಕುಡಿಸಿದ ಕಂಪೆನಿ ವಿರುದ್ಧ ದೂರು

ಬೆಂಗಳೂರಿನಲ್ಲಿ ಡಾ. ವಿಷ್ಣುವರ್ಧನ್ ರಸ್ತೆಯ ಅಪಾರ್ಟ್‌ಮೆಂಟ್‌ನ ನಿವಾಸಿ, 15 ವರ್ಷದ ಬಾಲಕ 7ನೇ ಮಹಡಿಯಿಂದ ಬಿದ್ದು ಮೃತಪಟ್ಟಿರುವ ಪ್ರಕರಣ ಸಂಬಂಧ ಪೋಷಕರು ಸ್ಥಳೀಯ ಕಂಪೆನಿ ಬಾಲಕನಿಗೆ ಮದ್ಯ ಕುಡಿಸಿರುವುದರಿಂದ ಈ ದುರಂತ ಸಂಭವಿಸಿರುವುದಾಗಿ ಆರೋಪಿಸಿದ್ದಾರೆ.

ಸ್ಥಳೀಯ ಕಂಪೆನಿಯು ಬಾಲಕರಿಗೆ ಮದ್ಯ ನೀಡಿದೆ ಎಂದು ಪೋಷಕರು ರಾಜರಾಜೇಶ್ವರಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಲ್ಲಿಸಿರುವ ದೂರಿನಲ್ಲಿ ಆರೋಪಿಸಿದ್ದು, ಪೊಲೀಸರು ಜೆಜೆ ಕಾಯ್ದೆ ಅಡಿ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ದೂರಿನಲ್ಲಿ ಉಲ್ಲೇಖಿಸಿರುವ ಪ್ರಕಾರ ಜನವರಿ 31ರ ರಾತ್ರಿ 9 ಗಂಟೆ 40 ನಿಮಿಷಕ್ಕೆ ಈ ಘಟನೆ ನಡೆದೆ, ಅದೇ ದಿನ ಮೃತ ಬಾಲಕನ ಪೋಷಕರು ಪೊಲೀಸ್‌ಗೆ ದೂರು ನೀಡಿದ್ದಾರೆ. ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸರು ಹಲವು ಆಯಾಮಗಳಿಂದ ತನಿಖೆ ನಡೆಸಿದಾಗ ಬಾಲಕನಿಗೆ ಸಂಸ್ಥೆಯೊಂದು ಸಿರಗೇಟ್ ಮತ್ತು ಮದ್ಯಪಾನ ಮಾಡಿಸಿದೆ ಎಂದು ತಿಳಿದುಬಂದಿದೆ.

ಮೃತ ಬಾಲಕ ಮತ್ತು ಸ್ನೇಹಿತರು ಸ್ಥಳೀಯ ಕಂಪನಿಯಲ್ಲಿದ್ದಾಗ ಈ ಕೃತ್ಯ ನಡೆದಿದ್ದು, ಸಂಸ್ಥೆಯು ಬಾಲಕರಿಗೆ ಮದ್ಯ ಕುಡಿಸಿರುವ ಆರೋಪದಡಿ ಕಂಪನಿಯ ಮಾಲೀಕರು ಹಾಗೂ ಸಿಬ್ಬಂದಿ ವಿರುದ್ಧ ಮಕ್ಕಳ ಆರೈಕೆ ಮತ್ತು ರಕ್ಷಣೆ ಕಾಯಿದೆ ಮತ್ತು ಕರ್ನಾಟಕ ಮದ್ಯ ಕಾಯ್ದೆಯನ್ವಯ ಪ್ರಕರಣ ದಾಖಲಾಗಿದೆ. ಪೊಲೀಸರು ಸಂಸ್ಥೆಯ ಮೇಲಿನ ಕ್ರಮ ಕೈಗೊಳ್ಳುವುದರ ಜೊತೆಗೆ ಕೃತ್ಯವೆಸಗಿದವರ ಬಗ್ಗೆ ಹೆಚ್ಚಿನ ಮಾಹಿತಿ ಸಂಗ್ರಹಿಸುತ್ತಿದ್ದಾರೆ.

Related Posts

Leave a Reply

Your email address will not be published. Required fields are marked *