ಉತ್ತರ ಕನ್ನಡ ಹಳಿಯಾಳದ ಮಂಗಳವಾಡ ಗ್ರಾಮದಲ್ಲಿ ತಂದೆಯು ಮೊಬೈಲ್ ನೋಡಬೇಡ ಎಂದು ಕಸಿದುಕೊಂಡು ಬುದ್ಧಿವಾದ ಹೇಳಿದ್ದಕ್ಕೆ ನೊಂದ ಮಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಹಳಿಯಾಳದ ಸರ್ಕಾರಿ ಪ್ರಾಥಮಿಕ ಶಾಲೆಯ ಏಳನೇ ತರಗತಿ ವಿದ್ಯಾರ್ಥಿ ಓಂ ಕದಂ (13) ಆತ್ಮಹತ್ಯೆ ಮಾಡಿಕೊಂಡಾತ. ಮನೆಯಲ್ಲಿ ಮಗ ಮೊಬೈಲ್ ನೋಡುತ್ತಲೇ ಹೆಚ್ಚು ಕಾಳ ಕಳೆಯುತ್ತಿದ್ದ. ತಂದೆ ಮನೋಹರ್ ಮೊಬೈಲ್ ನೋಡಬೇಡ ಎಂದು ಬುದ್ದಿವಾದ ಹೇಳುತಿದ್ದರು. ಆದರೂ ಮಾತು ಕೇಳದೆ ಆತ ಮೊಬೈಲ್ ನೋಡುತ್ತಲೇ ಇದ್ದ.
ಮೊನ್ನೆ ರಾತ್ರಿ ಮೊಬೈಲ್ ನೋಡುತ್ತಾ ಕಾಲ ಕಳೆಯುತಿದ್ದ ಮಗನಿಗೆ ಗದರಿಸಿ ಮೊಬೈಲ್ ಕಸಿದುಕೊಂಡು ಓದಿಕೊಳ್ಳುವಂತೆ ತಂದೆ ಮನೋಹರ್ ಬುದ್ದಿವಾದ ಹೇಳಿದ್ದರು. ಇದರಿಂದ ಮನನೊಂದು ಓಂ ಕದಂ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಹಳಿಯಾಳದ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರೂ ಪ್ರಯೋಜನವಾಗಿಲ್ಲ. ಹಳಿಯಾಳ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.