ರಾಜಸ್ಥಾನದ ಧೋಲ್ಪುರ್ ಜಿಲ್ಲೆಯ ಕುರ್ರೆಂಡಾ ಗ್ರಾಮದಲ್ಲಿ ಮೊಬೈಲ್ ಗೇಮ್ ಬಿಟ್ಟು ಓದಿನೆಡೆಗೆ ಹೆಚ್ಚು ಗಮನಕೊಡು ಎಂದು ತಂದೆ ಗದರಿದ್ದಕ್ಕೆ 15 ವರ್ಷದ ಬಾಲಕ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ರಾಜವೀರ್ ಬಘೇಲ್ ಆತ್ಮಹತ್ಯೆ ಮಾಡಿಕೊಂಡ ಬಾಲಕ. ಪ್ರಾಥಮಿಕ ಮಾಹಿತಿಗಳ ಪ್ರಕಾರ ಬಾಲಕ ಫ್ರೀ ಫೈರ್ ಎಂಬ ಮೊಬೈಲ್ ಗೇಮ್ಗೆ ಅಡಿಕ್ಟ್ ಆಗಿದ್ದ, ಇದರಿಂದಾಗಿ ತಂದೆ ಕೋಪಗೊಂಡು ಮೊಬೈಲ್ ಗೇಮ್ ಬಿಟ್ಟು ಓದಿನೆಡೆಗೆ ಹೆಚ್ಚು ಗಮನಕೊಡು ಎಂದು ಗದರಿದ್ದರು.
ರಾಜವೀರ್ ಬಘೇಲ್ ಆಟ ಆಡುತ್ತಿದ್ದಾಗ ತಂದೆ ಅವನ ಫೋನ್ ಕಸಿದುಕೊಂಡಿದ್ದರು. ಕೋಪಗೊಂಡ ಹುಡುಗ ಕೋಣೆಗೆ ಹೋಗಿದ್ದ, ಕುಟುಂಬದ ಇತರ ಸದಸ್ಯರು ಊಟ ಮಾಡುತ್ತಿದ್ದರು. ಊಟದ ನಂತರ ಅವರು ಬಾಲಕನ ಕೋಣೆಗೆ ಹೋದಾಗ ನೇಣು ಬಿಗಿದ ಸ್ಥಿತಿಯಲ್ಲಿರುವುದನ್ನು ಕಂಡಿದ್ದಾರೆ. ಕುಣಿಕೆಯಿಂದ ಕೆಳಗಿಳಿಸಿ ಆಸ್ಪತ್ರೆಗೆ ಕರೆದೊಯ್ದಾಗ ಮೃತಪಟ್ಟಿದ್ದಾನೆಂದು ವೈದ್ಯರು ತಿಳಿಸಿದ್ದಾರೆ.
ಯುವತಿ ಮೇಲೆ ಸ್ನೇಹಿತ ಸೇರಿ ಗ್ಯಾಂಗ್‌ರೇಪ್
ಉತ್ತರ ಪ್ರದೇಶದ ಲಖನೌನಲ್ಲಿ ಗೆಳೆಯನನ್ನು ಭೇಟಿ ಮಾಡಲು ಹೋಟೆಲ್‌ಗೆ ತೆರಳಿದ್ದ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ. ಆರೋಪಿಯು ಆಕೆಯನ್ನು ಹೋಟೆಲ್‌ಗೆ ಕರೆಸಿ ತನ್ನಿಬ್ಬರು ಸ್ನೇಹಿತರ ಜೊತೆಗೆ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಪೊಲೀಸರು ಇಬ್ಬರು ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ, ಒಬ್ಬ ಶಂಕಿತ ತಲೆಮರೆಸಿಕೊಂಡಿದ್ದಾನೆ.
ಆರೋಪಿಗಳು ಸರದಿಯಂತೆ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಘಟನೆಯನ್ನು ರೆಕಾರ್ಡ್ ಮಾಡಿದ್ದಾರೆ ಎಂದು ಸಂತ್ರಸ್ತೆ ಪೊಲೀಸರಿಗೆ ತಿಳಿಸಿದ್ದಾಳೆ. ಫೋನ್ ಕಿತ್ತುಕೊಂಡು ಹಲವು ದಿನ ಅವಳನ್ನು ಮನೆಯಲ್ಲೇ ಇರಿಸಿಕೊಂಡು ಅಕ್ಟೋಬರ್ 14 ರಂದು ಅವಳ ಮನೆಯ ಬಳಿ ಬಿಟ್ಟು ಹೋಗಿದ್ದರು ಎಂದು ಆರೋಪಿಸಲಾಗಿದೆ.


